Bengaluru

ದ್ವಿತೀಯ ಪಿಯುಸಿ ಪರೀಕ್ಷೆ – 3; ಮರು ಮೌಲ್ಯಮಾಪನಕ್ಕೆ ಜುಲೈ 24 ಕೊನೆಯ ದಿನ.

ಬೆಂಗಳೂರು: ಇದೇ ಮಂಗಳವಾರ ದಿನಾಂಕ: 16.07.2024 ರಂದು ದ್ವಿತೀಯ ಪಿಯುಸಿ ಪರೀಕ್ಷೆ – 3ರ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ಪ್ರಕಟಗೊಳಿಸಿತ್ತು. ಈ ಫಲಿತಾಂಶದ ಮರುಮೌಲ್ಯಮಾಪನ, ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಮಂಡಳಿಯು ಜುಲೈ 24 ಅನ್ನು ಕೊನೆಯ ದಿನಾಂಕ ಎಂದು ಘೋಷಿಸಿದೆ.

ದ್ವಿತೀಯ ಪಿಯುಸಿ ಪರೀಕ್ಷೆ – 3 ಕ್ಕೆ ಒಟ್ಟು 75,466 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ ಕೇವಲ 17,911 ಮಂದಿ ತೇರ್ಗಡೆಯಾಗಿದ್ದಾರೆ. ಈ ವರ್ಷದ ಪಿಯುಸಿ ಪರೀಕ್ಷೆಯಲ್ಲಿ ಮೊಟ್ಟಮೊದಲ ಬಾರಿಗೆ ವಿದ್ಯಾರ್ಥಿಗಳಿಗೆ ಮೂರು ಅವಕಾಶಗಳನ್ನು ನೀಡಲಾಗಿತ್ತು. ಇಲಾಖೆಯ ಈ ನಿರ್ಣಯಕ್ಕೆ ಹಲವರ ವಿರೋಧ ಕೂಡ ವ್ಯಕ್ತವಾಗಿತ್ತು. ಈ ರೀತಿ ಅತಿಯಾದ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ನೀಡುವುದರಿಂದ, ಪರೀಕ್ಷೆಗಳು ತಮ್ಮ ಮೌಲ್ಯವನ್ನು ಕಳೆದುಕೊಳ್ಳಲಿವೆ ಎಂಬುದು ಕೆಲವರ ವಾದವಾಗಿತ್ತು.

Show More

Leave a Reply

Your email address will not be published. Required fields are marked *

Related Articles

Back to top button