Alma Corner

ಚಿಕಿತ್ಸೆಗೆ ಅಮೇರಿಕಾಗೆ ತೆರಳಿದ ಶಿವಣ್ಣ…!

ಯಾವಾಗಲು ಚಟುವಟಿಕೆಯಿಂದ ಕೂಡಿರುತ್ತಿದ್ದಂತಹ ಶಿವಣ್ಣ ಹಲವಾರು ದಿನಗಳಿಂದ ಅನಾರೋಗ್ಯದಿಂದ ಬಳಲುತಿದ್ದರು. ಈ ಬಗ್ಗೆ ಅವರು ಕೆಲವು ಸಮಯಗಳಲ್ಲಿ ಹೇಳಿಕೊಂಡಿದ್ದರು. ಭೈರತಿ ರಣಗಲ್‌ ಚಿತ್ರ ಬಿಡುಗಡೆಗೂ ಮುನ್ನ ತಮ್ಮ ಅನಾರೋಗ್ಯಕ್ಕೆ ಸಂಬಂಧಿಸಿದಂತೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದರು. ಡಿಸೆಂಬರ್‌ನಲ್ಲಿ ಚಿಕಿತ್ಸೆ ಪಡೆಯುವುದಾಗಿಯು ಹೇಳಿದ್ದರು. ಅಮೇರಿಕಾದ ಸೌತ್‌ ಪ್ಲೋರಿಡಾದಲ್ಲಿರುವ ಮಿಯಾಮಿ ಕಾನ್ಸರ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಡಿಸೆಂಬರ್‌ 24 ರಂದು ಸರ್ಜರಿ ನಡೆಯಲಿದ್ದು, ಬುಧವಾರ ಪತ್ನಿ ಗೀತಾ, ಪುತ್ರಿ ನಿವೇದಿತಾ ಅವರೊಂದಿಗೆ ಅಮೇರಿಕಾಕ್ಕೆ ತೆರಳಿದ್ದಾರೆ. ಹೀಗಾಗಿ ಸದಾಶಿವನಗರದ ಶಿವಣ್ಣ ನಿವಾಸಕ್ಕೆ ಸ್ಯಾಂಡಲ್‌ವುಡ್‌ ತಾರೆಯರಾದ ಸುದೀಪ್‌, ವಿನೋದ್‌ರಾಜ್‌ ಮುಂತಾದವರು ಭೇಟಿ ನೀಡಿ ಧೈರ್ಯ ತುಂಬಿದರು. ಜೊತೆಗೆ ಸಚಿವ ಮಧು ಬಂಗಾರಪ್ಪ,, ಬಿ.ಸಿ ಪಾಟೀಲ್‌ ಭೇಟಿ ನೀಡಿ ಆರೋಗ್ಯ ವಿಚಾರಿಸಿ ಹಾರೈಸಿದರು.


ಭಾರತಿಯ ಮೂಲದ ಡಾ. ಮುರುಗೇಶನ್‌ ಮನೋಹರನ್‌ ಮಿಯಾಮಿ ಕ್ಯಾನ್ಸರ್‌ ಆಸ್ಪತ್ರೆಯ ಯೂರಾಲಜಿಕ್‌ ಆನ್ಕಾಲಜಿ ಸರ್ಜರಿಯ ಮುಖ್ಯಸ್ಥರಾಗಿದ್ದು, ಅವರ ಜೊತೆ ಶಿವಣ್ಣ ನಿರಂತರ ಸಂಪರ್ಕದಲಿದ್ದು ಸಲಹೆಯನ್ನು ತೆಗೆದುಕೊಳ್ಳುತ್ತಿದ್ದರು. ಸರ್ಜರಿಯ ನಂತರ ಒಂದು ತಿಂಗಳ ಕಾಲ ಅಮೆರಿಕದಲ್ಲಿಯೇ ಚಿಕಿತ್ಸೆ ಪಡೆಯಲಿರುವ ಶಿವಣ್ಣ. ಬಳಿಕ ಜನವರಿ 26 ರಂದು ಭಾರತಕ್ಕೆ ಮರಳಿ, ಮುಂದಿನ ಸಿನಿಮಾಗಳಲ್ಲಿ ಬಿಸಿಯಾಗಲಿದ್ದಾರೆ.
ಈ ಬಗ್ಗೆ ಮಾತನಾಡಿದ ಶಿವರಾಜ್‌ಕುಮಾರ ಅವರು “ಕುಟುಂಬದವರು, ಸಂಬಂಧಿಗಳು, ಅಭಿಮಾನಿಗಳನ್ನು ನೋಡಿ ಸ್ವಲ್ಪ ಎಮೋಷನಲ್‌ ಆದೆ. 24 ರಂದು ಸರ್ಜರಿ ನಡೆಯಲಿದೆ. ಅದರ ಬಗ್ಗೆ ನನಗೆ ಚಿಂತೆಯಿಲ್ಲ. ಎಲ್ಲಾ ಟೆಸ್ಟಗಳು ಪಾಸಿಟಿವ್‌ ಬಂದಿದೆ. ಎಲ್ಲವೂ ಸರಿಹೋಗಲಿದೆ ಎಂದು ನಾನು ಪಾಸಿಟಿವ್‌ ಆಗಿದ್ದೇನೆ. ಆದರೆ ಐದು ವಾರಗಳ ಕಾಲ ಮನೆಯಿಂದ ದೂರವಿರಬೇಕಲ್ಲ ಎಂಬ ಬೇಸರವಿದೆ. ” ಎಂದರು. ಹ್ಯಾಟ್ರಿಕ್‌ ಹಿರೊ ಶಿವರಾಜ್‌ಕುಮಾರ ಅವರು ಇಲ್ಲಿಯವರೆಗೆ ಉತ್ತಮ ಚಿತ್ರಗಳನ್ನು ನೀಡುತ್ತಾ ಬಂದಿದ್ದಾರೆ. ಮುಂದೆಯು ನೀಡಬೇಕಾಗಿದೆ. ಹಾಗಾಗಿ ಅವರ ಆರೋಗ್ಯ ಬಹು ಬೇಗ ಚೇತರಿಸಿಕೊಳ್ಳಲಿ ಎಂಬುದೆ ಎಲ್ಲರ ಆಶಯ.

ಮೇಘಾ ಜಗದೀಶ್‌
ಆಲ್ಮಾ ಮೀಡಿಯಾ ಸ್ಕೂಲ್‌ ವಿದಾರ್ಥಿನಿ

Show More

Leave a Reply

Your email address will not be published. Required fields are marked *

Related Articles

Back to top button