“ಇಲ್ಲೊಬ್ಬರ ಪ್ರಾಣ ಹೋಗಿದೆ, ಕನಿಷ್ಠಪಕ್ಷ ನಗಬೇಡಿ” – ಕಪಿಲ್ ಸಿಬಲ್‌ಗೆ ತುಷಾರ್ ಮೆಹ್ತಾ ತರಾಟೆ.
ನವದೆಹಲಿ: ಕೋಲ್ಕತ್ತಾ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿದ್ದ ವಿಚಾರಣೆಯಲ್ಲಿ, ಸಿಬಿಐ ಪರ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ, ಪಶ್ಚಿಮ ಬಂಗಾಳ ಸರ್ಕಾರದ ಪರ ವಾದಿಸುತ್ತಿದ್ದ ಕಪಿಲ್ ಸಿಬಲ್ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. “ಇಲ್ಲೊಬ್ಬರ ಪ್ರಾಣ ಹೋಗಿದೆ, ಕನಿಷ್ಠಪಕ್ಷ ನಗಬೇಡಿ,” ಎಂದು ಮೆಹ್ತಾ ಗಂಭೀರವಾಗಿ ಹೇಳಿದರು.
ಕಪಿಲ್ ಸಿಬಲ್ ಅವರು ಎಫ್‌ಐಆರ್ ನೋಂದಾವಣೆಯಲ್ಲಿ ಆದಂತಹ ಕುಂದು ಕೊರತೆಗಳನ್ನು ಮೆಹ್ತಾ ಒತ್ತಿ ಹೇಳುತ್ತಿದ್ದಾಗ ನಕ್ಕಿದ್ದರಿಂದ, ಈ ವಾಕ್ಸಮರ ಸಂಭವಿಸಿತು.
ಸಿಬಿಐ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ, ವೈದ್ಯೆಯ ಕುಟುಂಬಕ್ಕೆ ಸುಳ್ಳು ಹೇಳುವುದರ ಮೂಲಕ ತಪ್ಪು ದಾರಿ ಹಿಡಿಸಲು ಪ್ರಯತ್ನ ಮಾಡಲಾಗುತ್ತಿದೆ ಎಂಬುದಾಗಿ ಚರ್ಚೆ ನಡೆದಿದೆ. “ಸುಮಾರು 11:45ರ ಸುಮಾರಿಗೆ, ಸಂತ್ರಸ್ತೆಯ ಅಂತ್ಯಸಂಸ್ಕಾರ ನಡೆದ ನಂತರ, ಪಶ್ಚಿಮ ಬಂಗಾಳದ ಪೋಲಿಸರು ಮೊದಲ ಎಫ್‌ಐಆರ್‌ನ್ನು ದಾಖಲಿಸಿದರು,” ಎಂದು ಮೆಹ್ತಾ ನ್ಯಾಯಮೂರ್ತಿಗಳ ಮುಂದೆ ವಿವರಿಸಿದರು.
“ಆಗಸ್ಟ್ 9 ರಂದು ಸಂಜೆ 6:10 ಕ್ಕೆ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಯಿತು, ಆದರೂ ಅಸಹಜ ಸಾವಿನ ಬಗ್ಗೆ ಆಗಸ್ಟ್ 9 ರಂದು ರಾತ್ರಿ 11:30 ರವರೆಗೆ ತಲಾ ಪೊಲೀಸ್ ಠಾಣೆಗೆ ಮಾಹಿತಿಯನ್ನು ಕಳುಹಿಸಲಾಗಿಲ್ಲ? ಇದು ಅತ್ಯಂತ ಕಳವಳಕಾರಿಯಾಗಿದೆ.” ಎಂದು ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠದ ಪ್ರಶ್ನೆ.
ಮಮತಾ ಬ್ಯಾನರ್ಜಿ ಸರ್ಕಾರದ ಈ ಕ್ರಮಗಳು, ನ್ಯಾಯಾಂಗ ವ್ಯವಸ್ಥೆಯಲ್ಲಿ ಭಾರಿ ಚರ್ಚೆ ಹುಟ್ಟಿಸಿರುವುದಲ್ಲದೆ, ಅವರ ಆಡಳಿತದ ಮೇಲೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯನ್ನು ಎತ್ತಿದೆ.