ಲೇಖಕಿ ಹಾಗೂ ಲೋಕೋಪಕಾರಿ ಶ್ರೀಮತಿ. ಸುಧಾ ಮೂರ್ತಿ ಅವರಿಗೆ ಇಂದು ರಾಷ್ಟ್ರಪತಿಗಳಾದ ಶ್ರೀಮತಿ. ದ್ರೌಪದಿ ಮುರ್ಮು ಅವರು ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಿದ್ದಾರೆ. ಇದರ ಕುರಿತು ಶ್ರೀಮತಿ ಸುಧಾ ಮೂರ್ತಿಯವರು ಅವರಿಗೆ ಇದು ‘ಡಬಲ್ ಸರ್ಪ್ರೈಸ್’ ಎಂದು ಹೇಳಿದ್ದಾರೆ.
“ಇದು ಮಹಿಳಾ ದಿನಾಚರಣೆಯಂದು ಬಂದಿದ್ದು ನನಗೆ ಡಬಲ್ ಆಶ್ಚರ್ಯವಾಗಿದೆ. ನನಗೆ ತುಂಬಾ ಸಂತೋಷವಾಗಿದೆ. ನಾನು ನಮ್ಮ ಪ್ರಧಾನಿಗಳಿಗೆ ಕೃತಜ್ಞಳಾಗಿದ್ದೇನೆ” ಎಂದು ಹೇಳಿದರು. ಅವರನ್ನು ಏತಕ್ಕಾಗಿ ನಾಮನಿರ್ದೇಶನ ಮಾಡಿದ್ದಾರೆ ಎಂದು ಎಂಬ ಬಗ್ಗೆ ಯಾವುದೇ ಆಲೋಚನೆ ಇಲ್ಲ ಎಂದಿದ್ದಾರೆ.
“ನನಗೆ ಸಂತೋಷವಾಗಿದೆ, ಅದೇ ಸಮಯದಲ್ಲಿ ನನಗೆ ಹೆಚ್ಚಿನ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ನಾನು ಭಾವಿಸುತ್ತೇನೆ. ನಾನು ನನ್ನ ಸಂಪೂರ್ಣ ಶಕ್ತಿ ಬಳಸಿಕೊಂಡು ಅತ್ಯುತ್ತಮವಾಗಿ ಕೆಲಸ ಮಾಡುತ್ತೇನೆ. ವೈಯಕ್ತಿಕ ಮಟ್ಟದಲ್ಲಿ, ನಾನು ಬಡವರಿಗಾಗಿ ಕೆಲಸ ಮಾಡಲು ದೊಡ್ಡ ವೇದಿಕೆಯನ್ನು ಪಡೆಯುತ್ತಿದ್ದೇವೆ ಎಂದು ನನಗೆ ಸಂತೋಷವಾಗಿದೆ.” ಎಂದು ಹೇಳಿದರು.
ಇಂದು ಬೆಳಿಗ್ಗೆ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಶ್ರೀಮತಿ ಸುಧಾ ಮೂರ್ತಿಯವರು ಲೋಕೋಪಕಾರ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ ಕೆಲಸವನ್ನು “ಸ್ಪೂರ್ತಿದಾಯಕ” ಎಂದು ಕರೆದಿದ್ದಾರೆ.