ದೀಪಾವಳಿಗೆ ಸಿಹಿ ಸುದ್ದಿ: ಬೆಲೆ ಏರಿಕೆಯ ಬಿಸಿ ತಡೆಯಲು ಮಾರುಕಟ್ಟೆಗೆ ಬರುತ್ತಿದೆ “ಭಾರತ್ ಬ್ರಾಂಡ್” ಉತ್ಪನ್ನಗಳು!

ಬೆಂಗಳೂರು: ದೀಪಾವಳಿಗೆ ಮುನ್ನ, ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟುವ ಸಮಯದಲ್ಲಿ ಪರಿಹಾರ ನೀಡಲು ಕೇಂದ್ರ ಸರಕಾರ ಹೊಸ ಹೆಜ್ಜೆ ಇಟ್ಟಿದೆ. ಕೇಂದ್ರ ಗ್ರಾಹಕ ವ್ಯವಹಾರ ಮತ್ತು ನಾಗರಿಕ ಪೂರೈಕೆ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು, ದೀಪಾವಳಿ ಹಬ್ಬದ ಸಮಯದಲ್ಲಿ ನಮ್ಮ ಬೆಂಗಳೂರಿನಲ್ಲಿ ಭಾರತ್ ಬ್ರಾಂಡ್ ಅಡಿಯಲ್ಲಿ ಪ್ರಮುಖ ಅಗತ್ಯ ಧಾನ್ಯಗಳ ಮಾರಾಟ ಆರಂಭಿಸಿದೆ. ಜನತೆಗೆ ಸೀಮಿತ ದರದಲ್ಲಿ ಆಹಾರ ಉತ್ಪನ್ನಗಳ ವಿತರಣೆಯನ್ನು ಪ್ರಾರಂಭಿಸಿರುವ ಈ ಯೋಜನೆ, ದೀಪಾವಳಿಗೆ ಸಿಹಿಯಾದ ಉಡುಗೊರೆಯಾಗಿ ಪರಿಗಣಿಸಲಾಗಿದೆ.
ಅಗ್ಗದ ದರದಲ್ಲಿ ಆಹಾರ:
ಈ ಯೋಜನೆ ಅಡಿಯಲ್ಲಿ, ಅಕ್ಕಿಯನ್ನು 34 ರೂಪಾಯಿಗೆ, ಗೋದಿ ಹಿಟ್ಟು 30 ರೂಪಾಯಿ, ಕಡಲೆ ಬೆಳೆ 70 ರೂಪಾಯಿ, ಮತ್ತು ಹೆಸರು ಬೇಳೆ 107 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಈ ವಸ್ತುಗಳ ಮಾರುಕಟ್ಟೆ ದರ ಹೋಲಿಸಿದರೆ, ಸರ್ಕಾರದ ಈ ದರವು ಜನ ಸಾಮಾನ್ಯರಿಗೆ ಹೆಚ್ಚಿನ ಅನುಕೂಲ ಒದಗಿಸುತ್ತಿದ್ದು, ದೀಪಾವಳಿಯ ಖರೀದಿಗೆ ಉತ್ಸಾಹ ನೀಡಲಿದೆ.
ಆದೇಶದ ಹಿನ್ನೆಲೆ:
ಪ್ರಧಾನಿ ಶ್ರೀ ನರೇಂದ್ರ ಮೋದಿಜಿಯವರ ಮಾರ್ಗದರ್ಶನದಲ್ಲಿ ಕೇಂದ್ರ ಸಚಿವ ಶ್ರೀ ಪ್ರಹ್ಲಾದ್ ಜೋಶಿ, ರಾಜ್ಯ ಸಚಿವರಾದ ಶ್ರೀಮತಿ ನಿಮುಬೆನ್ ಜಯಂತಿ ಬಾಯಿ ಬಾಂಬಾನೀಯ ಹಾಗೂ ಶ್ರೀ ಬಿ.ಎಲ್. ವರ್ಮ ಅವರು ಈ ಯೋಜನೆಯನ್ನು ಕಾರ್ಯಗತಗೊಳಿಸಲು ಮುಂದಾಗಿದ್ದು, ಬೆಂಗಳೂರಿನಲ್ಲಿ ವಿತರಣೆಯನ್ನು ಆರಂಭಿಸಿದ್ದಾರೆ.
ಸಾಕ್ಷಿಯಾದ ‘ಭಾರತ್’ ಬ್ರಾಂಡ್:
ಭಾರತ್ ಬ್ರಾಂಡ್ ಅಡಿಯಲ್ಲಿ ಹೊರಬರುವ ಈ ಉತ್ಪನ್ನಗಳು, ದೇಶದ ನಂಬಿಕೆ ಮತ್ತು ಗುಣಮಟ್ಟವನ್ನು ಕಾಪಾಡುತ್ತಿವೆ. ಜನರು ಬೆಲೆ ಏರಿಕೆಯ ಬಿಸಿ ತಡೆಯಲು ಅಗ್ಗದ ದರದಲ್ಲಿ ಉತ್ತಮ ಗುಣಮಟ್ಟದ ಆಹಾರ ಸಿಗಬೇಕೆಂಬ ಸಂಕಲ್ಪದಡಿ ಈ ಯೋಜನೆ ರೂಪಗೊಂಡಿದ್ದು, ಬಡವರು ಮತ್ತು ಮಧ್ಯಮವರ್ಗದವರು ಇದರಿಂದ ಪ್ರಯೋಜನ ಪಡೆಯಲಿದ್ದಾರೆ.
ಈ ಯೋಜನೆಯ ಮೊದಲ ಹಂತದ ಯಶಸ್ಸಿನ ನಂತರ ದ್ವಿತೀಯ ಹಂತದ ತಯಾರಿಯು ನಡೆಯುತ್ತಿದ್ದು, ಬೆಂಗಳೂರಿನ ವಿವಿಧೆಡೆಗಳಲ್ಲಿ ವಿತರಣೆ ನಡೆಯುತ್ತಿದೆ.