Sports
ಆಫಘಾನಿಸ್ತಾನದಲ್ಲಿ ಕ್ರಿಕೆಟ್ ನಿಷೇಧಕ್ಕೆ ತಾಲಿಬಾನ್ ಸಿದ್ದ! – ಕ್ರಿಕೆಟ್ ಶರಿಯಾ ಕಾನೂನಿನ ವಿರುದ್ಧ..?!
ಕಾಬುಲ್: ತಾಲಿಬಾನ್ ಆಫಘಾನಿಸ್ತಾನದಲ್ಲಿ ಕ್ರಿಕೆಟ್ ಆಡುವುದನ್ನು ನಿಷೇಧಿಸಲು ಸಿದ್ಧವಾಗಿದ್ದು, ಈ ಸುದ್ದಿ ಜಾಗತಿಕ ಮಟ್ಟದಲ್ಲಿ ಆಘಾತವನ್ನುಂಟು ಮಾಡಿದೆ. ತಾಲಿಬಾನ್ ಮುಖ್ಯಸ್ಥ ಹಿಬಾತುಲ್ಹಾ, ಕ್ರಿಕೆಟ್ ಶರಿಯಾ ಕಾನೂನುಗಳಿಗೆ ವಿರುದ್ಧವಾಗಿದ್ದು, ಅದರ “ಹಾನಿಕಾರಕ ಪರಿಣಾಮಗಳ” ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ಆಫ್ಘಾನಿಸ್ತಾನದಲ್ಲಿ ಈಗಾಗಲೇ ಮಹಿಳೆಯರಿಗೆ ಕ್ರೀಡೆಗಳಲ್ಲಿ ಭಾಗವಹಿಸಲು ತೀವ್ರ ನಿರ್ಬಂಧ ಹೇರಿರುವ ತಾಲಿಬಾನ್, ಈಗ ಪುರುಷರ ಕ್ರಿಕೆಟ್ ಮೇಲೂ ನಿಷೇಧ ಹೇರಲು ಮುಂದಾಗಿದೆ. ಈ ನಿರ್ಧಾರವು ಆಫ್ಘಾನಿಸ್ತಾನದಲ್ಲಿ ಕ್ರಿಕೆಟ್ ಪ್ರೇಮಿಗಳು ಮತ್ತು ಕ್ರಿಕೆಟ್ ಸಮುದಾಯದವರನ್ನು ಅಸಮಾಧಾನಕ್ಕೆ ಈಡಾಗಿಸಿದೆ.
ಅಫ್ಘಾನಿಸ್ತಾನದ ಕ್ರಿಕೆಟ್ ಟೀಮ್ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ್ದರೂ, ಈ ಹೊಸ ಕ್ರಮ ಆ ದೇಶದ ಕ್ರೀಡಾ ಭವಿಷ್ಯವನ್ನು ಗಂಭೀರ ಪ್ರಶ್ನೆಗಳಿಗೆ ಒಳಪಡಿಸಿದೆ.