Sports
ಇಂದಿನ ಐಪಿಎಲ್ ಪಂದ್ಯ: ರಾಯಲ್ಸ್ ವಿರುದ್ಧ ರಾಯಲ್ಸ್.
ಜೈಪುರ: ಇಂದಿನ ಐಪಿಎಲ್ 19ನೇ ಪಂದ್ಯದ ಆತಿಥ್ಯವನ್ನು ವಹಿಸಿಕೊಂಡಿದ್ದಾರೆ ರಾಜಸ್ಥಾನ ರಾಯಲ್ಸ್ ತಂಡ. ಸವಾಯ್ ಮಾನ್ಸಿಂಗ್ ಇಂಡೋರ್ ಕ್ರೀಡಾಂಗಣದಲ್ಲಿ ಸೆಣಸಾಡುತ್ತಿರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು.
ಸರಣಿ ಗೆಲುವು ಗಳಿಂದ ಅಂಕಪಟ್ಟಿಯ ಮೊದಲಾರ್ಧದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿರುವ ರಾಜಸ್ಥಾನ ರಾಯಲ್ಸ್ ತಂಡ, ಈ ಐಪಿಎಲ್ ಆವೃತ್ತಿಯಲ್ಲಿ ಇದುವರೆಗೂ ಸೋಲನ್ನೇ ಕಂಡಿಲ್ಲ. ಆಡಿರುವ ಮೂರು ಪಂದ್ಯಗಳಲ್ಲಿ ಮೂರನ್ನೂ ಗೆದ್ದು, +1.249 ನೆಟ್ ರನ್ ರೇಟ್ ಮೂಲಕ ಎರಡನೇ ಸ್ಥಾನದಲ್ಲಿದೆ.
ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ ಎರಡು ಸೋಲುಗಳಿಂದ ಫ್ಯಾನ್ಸಗಳ ಕೋಪಕ್ಕೆ ಗುರಿಯಾಗಿದ್ದಾರೆ. ಹೋಂ ಗ್ರೌಂಡಲ್ಲಿ ನಡೆದ ಮೂರು ಪಂದ್ಯಗಳಲ್ಲಿ ಕೇವಲ ಒಂದನ್ನು ಮಾತ್ರ ಗೆದ್ದಿದೆ.
ಇಂದಿನ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ತಂಡದ ವಿರುದ್ಧ, ಅವರ ತವರಲ್ಲಿ ಮಣಿಸಿ, ಮತ್ತೆ ಗೆಲುವಿನ ರುಚಿ ಸವಿಯಲಿದೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು?!