Sports
ಇಂದಿನ ಐಪಿಎಲ್ ಪಂದ್ಯ – ಎಸ್‌ಆರ್‌ಎಚ್ ವಿರುದ್ಧ ಸಿಎಸ್‌ಕೆ
ಹೈದರಾಬಾದ್: ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು ಎದುರಾಗಲಿದ್ದಾರೆ ಸಿಎಸ್‌ಕೆ ಹಾಗೂ ಎಸ್ಆರ್‌ಎಚ್ ತಂಡಗಳು. ಇದು ಟಾಟಾ ಐಪಿಎಲ್ 17ನೇ ಆವೃತ್ತಿಯ 18ನೇ ಪಂದ್ಯವಾಗಿದೆ.
ಅಂಕಪಟ್ಟಿಯಲ್ಲಿ ಹೈದರಾಬಾದ್ ತಂಡ 7ನೇ ಸ್ಥಾನದಲ್ಲಿ ಇದ್ದರೆ, ಚೆನ್ನೈ ತಂಡ 3ನೇ ಸ್ಥಾನದಲ್ಲಿದೆ. ಈ ಬಾರಿಯ ಐಪಿಎಲ್ ನಲ್ಲಿ ಇತಿಹಾಸ ಸೃಷ್ಟಿಸಿದ ಹೈದರಾಬಾದ್ ತಂಡ ಪ್ರಸ್ತುತ ಎರಡು ಸೋಲು ಹಾಗೂ ಒಂದು ಗೆಲುವನ್ನು ಕಂಡಿದೆ. ಹಾಗೆಯೇ ಚೆನೈ ತಂಡ ಎರಡು ಗೆಲುವು ಹಾಗೂ ಒಂದು ಪಂದ್ಯದಲ್ಲಿ ಸೋಲನ್ನು ಅನುಭವಿಸಿದೆ.
ಕೊನೆಯ ಬಾರಿ ಹೋಂ ಗ್ರೌಂಡಲ್ಲಿ ಆಡಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ, ಮುಂಬೈ ಇಂಡಿಯನ್ಸ್ ವಿರುದ್ಧ 277 ರನ್ಗಳನ್ನು ಗಳಿಸಿ ರೆಕಾರ್ಡ್ ಸೃಷ್ಟಿಸಿತ್ತು. ಚೆನ್ನೈ ಹಾಗೂ ಹೈದರಾಬಾದ್ ತಂಡಗಳ ಈ ಹಣಾಹಣಿಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಹಾಗಾದರೆ ನಿಮ್ಮ ಪ್ರಕಾರ ಯಾರು ಗೆಲ್ಲಲಿದ್ದಾರೆ ಇಂದಿನ ಪಂದ್ಯ?