WorldWorld

ಭಾರತ ಒಳಗೊಂಡಂತೆ BRICS ದೇಶಗಳಿಗೆ ಟ್ರಂಪ್ ಬೆದರಿಕೆ: “ಡಾಲರ್ ವ್ಯವಹಾರ ಬಿಟ್ಟರೆ 100% ಟ್ಯಾರಿಫ್ ಹೊರಿಸುತ್ತೇನೆ!”

ವಾಷಿಂಗ್ಟನ್: ಅಮೇರಿಕಾದ ಡಾಲರ್‌ನ್ನು ಬಿಟ್ಟು BRICS (ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ) ದೇಶಗಳು ಹೊಸ ಕರೆನ್ಸಿ ರೂಪಿಸಲು ಮುಂದಾದರೆ, 100% ಟ್ಯಾರಿಫ್ ವಿಧಿಸುತ್ತೇನೆ! ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಎಚ್ಚರಿಕೆ ನೀಡಿದ್ದಾರೆ.

“BRICS ಡಾಲರ್‌ಗೆ ಪರ್ಯಾಯ ಹುಡುಕಿದರೆ, ಅವರ ಆಮದುಗಳಿಗೆ ದಾರಿ ಮುಚ್ಚಿ ಬಿಡುತ್ತೇವೆ!” – ಟ್ರಂಪ್

ಟ್ರಂಪ್‌ ಧಮ್ಕಿ!
ಟ್ರಂಪ್ Truth Social ಪ್ಲಾಟ್‌ಫಾರ್ಮ್‌ನಲ್ಲಿ ಬರೆದಿರುವ ಸಂದೇಶದಲ್ಲಿ, ಅಮೆರಿಕಾ ತಟಸ್ಥವಾಗಿ ಕೂರುವುದಿಲ್ಲ ಎಂದು ಘೋಷಿಸಿದ್ದಾರೆ. BRICS ದೇಶಗಳು ಹೊಸ ಕರೆನ್ಸಿ ರೂಪಿಸಲು ಮುಂದಾದರೆ, ತೀವ್ರ ಆರ್ಥಿಕ ಪ್ರಭಾವ ಎದುರಾಗಲಿದೆ ಎಂಬ ಸಂದೇಶ ನೀಡಿದ್ದಾರೆ.

ಭಾರತದ ಸ್ಥಾನ ಏನು?
ಭಾರತ ಅಂತರಾಷ್ಟ್ರೀಯ ವಹಿವಾಟಿನಲ್ಲಿ ರೂಪಾಯಿ ಬಳಕೆಗೆ RBI ಅನುಮತಿ ನೀಡಿದ್ದು, ರಷ್ಯಾದ ವಿರುದ್ಧದ ಆರ್ಥಿಕ ನಿರ್ಬಂಧದ ನಂತರ ರೂಪಾಯಿ ಬಳಕೆ ಹೆಚ್ಚಿಸಲು ಪ್ರಯತ್ನಿಸಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ “ಸ್ಥಳೀಯ ಕರೆನ್ಸಿಯಲ್ಲಿ ವ್ಯಾಪಾರ BRICS ದೇಶಗಳ ಆರ್ಥಿಕತೆಯನ್ನು ಬಲಪಡಿಸುತ್ತದೆ” ಎಂದು ಹೇಳಿದ್ದಾರೆ.

ಅಮೇರಿಕಾ-ಚೀನಾ ವ್ಯಾಪಾರ ಸಂಬಂಧ ಹದಗೆಡುತ್ತಾ?

  • 2022ರಲ್ಲಿ ಅಮೆರಿಕಾ $536.8 ಬಿಲಿಯನ್ ಮೌಲ್ಯದ ವಸ್ತುಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತಿತ್ತು.
  • ಟ್ರಂಪ್ ಈ ವ್ಯವಹಾರ ಕಡಿತಗೊಳಿಸಲು 100% ಟ್ಯಾರಿಫ್ ವಿಧಿಸುವ ಸಾಧ್ಯತೆ ಇದೆ.

“BRICS ಕಡೆಯಿಂದ ಡಾಲರ್‌ಗೆ ಪರ್ಯಾಯ ಹಾದಿ ಸಿಗದಿರಲಿ!” – ಟ್ರಂಪ್‌ನ ಸಿಟ್ಟು ಬಹಿಷ್ಕಾರಕ್ಕೆ ತಿರುಗುತ್ತಾ?

ಈ ಬೆಳವಣಿಗೆಯಿಂದ ಭಾರತದ ಆರ್ಥಿಕ ನೀತಿಯಲ್ಲಿ ಬದಲಾವಣೆ ಬರಬಹುದೇ?

Show More

Related Articles

Leave a Reply

Your email address will not be published. Required fields are marked *

Back to top button