IndiaLifestyle

ಹೊಸ ಯುಗದ ಆದಿ, ಈ ಯುಗಾದಿ.

ಚೈತ್ರ ಮಾಸದ ಹೊಸ್ತಿಲಲ್ಲಿ ನಿಂತು ಹೊಸ ವರ್ಷಕ್ಕೆ ಸ್ವಾಗತ ಮಾಡುತ್ತಿದೆ ಯುಗಾದಿ ಹಬ್ಬ. ಹಿಂದೂ ಧರ್ಮದ ಹೊಸ ವರ್ಷ ಇಂದಿನಿಂದ ಪ್ರಾರಂಭವಾಗಲಿದೆ. ಪ್ರಕೃತಿಯು ತನ್ನನ್ನು ತಾನು ಹಸಿರಾಗಿಸಿಕೊಳ್ಳುವ, ನೈಸರ್ಗಿಕ ಬದಲಾವಣೆಯನ್ನು ಆರಾಧಿಸುವ ಹಬ್ಬವೇ ಈ ಯುಗಾದಿ. ಹೆಸರಲ್ಲೇ ಇರುವ ಅರ್ಥದಂತೆ ‘ಯುಗದ ಆದಿ’, ಈ ಯುಗಾದಿ.

ಬೇವು ಬೆಲ್ಲ ಎರಡನ್ನೂ ಸೇವಿಸಿ, ಆರೋಗ್ಯದ ದೃಷ್ಟಿಯಿಂದ ಕೂಡ ಈ ಹಬ್ಬದ ಆಚರಣೆ ಮಾಡಲಾಗುತ್ತದೆ. ಇದರ ಇನ್ನೊಂದು ಅರ್ಥದಲ್ಲಿ ಬೇವು ನಮ್ಮ ಜೀವನದ ಕಹಿ ಘಟನೆಗಳನ್ನು ಹಾಗೂ ಕಷ್ಟ ಕಾರ್ಪಣ್ಯಗಳನ್ನು ಸೂಚಿಸುತ್ತದೆ. ಹಾಗೆಯೇ, ಬೆಲ್ಲ ನಮ್ಮ ಜೀವನದ ಸಿಹಿಯಾದ ಘಟನೆಗಳ ಸೂಚಕವಾಗಿದೆ. ಇವೆರಡನ್ನೂ ನಮ್ಮ ಜೀವನದಲ್ಲಿ ಸಮಾನವಾಗಿ ಸ್ವೀಕರಿಸಬೇಕು ಎಂಬ ಉದ್ದೇಶ ಕೂಡ ಈ ಹಬ್ಬದಲ್ಲಿದೆ.

ನಗರಗಳಲ್ಲಿ ಆಚರಿಸುವ ಹಬ್ಬಗಳಿಗಿಂತ ಹಳ್ಳಿಗಳಲ್ಲಿ ಆಚರಿಸುವ ಹಬ್ಬ ಬಹಳ ಅರ್ಥಪೂರ್ಣ ಹಾಗೂ ಸಂತೋಷಕರವಾಗಿರುತ್ತದೆ. ತುಂಬು ಕುಟುಂಬ, ಎಲ್ಲರೂ ಸೇರಿ ಒಗ್ಗಟ್ಟಿನಿಂದ ಹಬ್ಬಗಳನ್ನು ಆಚರಿಸುತ್ತಾರೆ. ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಹೊಸ ಪಂಚಾಂಗದ ಶ್ರವಣ ಈ ಹಬ್ಬದ ವೈಶಿಷ್ಟ್ಯ.

ಸರ್ವರಲ್ಲಿಯೂ ಹೊಸ ಚೈತನ್ಯ ಹುಟ್ಟಿಸುವ ಯುಗಾದಿ ಹಬ್ಬ, ಎಲ್ಲರಿಗೂ ಸುಖ, ಸಂತೋಷ ಮತ್ತು ಶಾಂತಿ ನೀಡಲಿ ಎಂದು ಆಶಿಸುತ್ತೇವೆ.

Show More

Leave a Reply

Your email address will not be published. Required fields are marked *

Related Articles

Back to top button