ಸಿಹಿ ಕಹಿ ನೆನಪುಗಳ ಜೊತೆ ಮನ್ನಡೆಯುವ ಹಬ್ಬ : ಯುಗಾದಿ

ಇನ್ನೆನೂ ಕೆಲವೆ ದಿನಗಳಲ್ಲಿ (ಮಾರ್ಚ 31) ಯುಗಾದಿ ಹಬ್ಬ ಬಂತು ನಮ್ಮ ಹಿಂದು ಮಾಸದ ಪ್ರಕಾರ ಇದು ಹೊಸ ವರ್ಷದ ಆರಂಭ. ಈ ಹಬ್ಬ ದಲ್ಲಿ ಬೆವು ಬೆಲ್ಲ ತಿಂದು ಹೊಸ ವರ್ಷದತ್ತ ಹೆಜ್ಜೆ ಹಾಕುತ್ತೆವೆ ಹಾಗಿದ್ರೆ ಈ ಹಬ್ಬದ ವಿಷೇಶ ಏನು ಈ ಹಬ್ಬ ವನ್ನು ಹಿಂದುಗಳ ಹೊಸ ವರ್ಷ ಎನ್ನಲು ಕಾರಣ ಏನು ಈ ಹಬ್ಬಕ್ಕೆ ಬೇವು ಬೆಲ್ಲವನ್ನೆ ಯಾಕೆ ತಿನ್ನಬೇಕು ಅನ್ನೋ ಕೆಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ
ಯುಗಾದಿ ಹಬ್ಬವು ಪ್ರತಿ ವರ್ಷ ಚೈತ್ರ ಮಾಸ ಅಂದರೆ ಮಾರ್ಚ ಮತ್ತು ಎಪ್ರಿಲ್ ನಡುವೆ ಬರುವ ಹಬ್ಬ, ಈ ಹಬ್ಬವು ಜನರ ಮನಸ್ಸಲ್ಲಿ ಒಂದು ಹೊಸ ಹುಮ್ಮಸ್ಸನ್ನು ತರುತ್ತದೆ.
ಹಾಗಿದ್ರೆ ಈ ಹಬ್ಬದ ವಿಷೇಶ ಎನು ?
ಯುಗಾದಿ ಅಂದರೆ ಸಂಸೃತ ಪದ ಇದು ಯುಗ ಮತ್ತು ಆದಿ ಎಂಬ ಎರಡು ಪದಗಳಿಂದ ಕೂಡಿದ್ದು ಯುಗದ ಆರಂಭ ಎಂಬ ಆರ್ಥವನ್ನು ಸೂಚಿಸುತ್ತದೆ. ಪುರಾಣದ ನಂಬಿಕೆ ಪ್ರಕಾರ ಯುಗಾದಿ ಹಬ್ಬದಂದೆ ಬ್ರಹ್ಮ ದೇವ ನು ʼಕಾಲಚಕ್ರ ಆರಂಭ ʼ ಅಂದರೆ ಸೃಷ್ಟಿಯನ್ನು ಆರಂಭಿಸಿದರು ಎಂಬ ವಾಡಿಕೆ ಇದೆ . ಹೀಗಾಗಿ ಈ ಹಬ್ಬವನ್ನು ಹಿಂದುಗಳ ಹೊಸ ವರ್ಷ ಅಥವಾ ವರ್ಷದ ಮೊದಲ ಹಬ್ಬ ಎಂದು ಕರೆಯುತ್ತಾರೆ

ಇನ್ನು ಯುಗಾದಿ ಹಬ್ಬದಲ್ಲಿ ಬೇವು ಬೆಲ್ಲ ತಿನ್ನೊದು ಒಂದು ಪ್ರಮುಖ ಸಂಪ್ರದಾಯ, ಬೇವು ಬೆಲ್ಲ ವನ್ನು ಸಾಮಾನ್ಯವಾಗಿ ಜೀವನದಲ್ಲಿ ನಡೆಯುವ ಕಹಿ ಮತ್ತು ಸಿಹಿ ಘಟನೆಗಳಿಗೆ ಹೊಲಿಸುತ್ತಾರೆ ಈ ಸಂಪ್ರದಾಯಕ್ಕೆ ದಾರ್ಮಿಕ ,ಮಾನಸಿಕ ಹಾಗೂ ಹಲವು ಆರೋಗ್ಯ ಕಾರಣಗಳಿವೆ.
ಅವುಗಳು ಮೊದಲಿಗೆ ಬೇವು
ಬೇವು ನಮ್ಮ ದೇಹದ ಟಾಕ್ಸಿನ್ ಗಳನ್ನು ನಿವಾರಿಸುತ್ತದೆ ಮತ್ತು ಲಿವರ್ ಅನ್ನು ಶುದ್ಧೀಕರಿಸುತ್ತದೆ ಮತ್ತು ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಇದು ತುಂಬಾ ಸಹಕಾರಿಯಾಗಿದೆ
ಎರಡನೇಯದಾಗಿ ಬೆಲ್ಲ ಇದು ಹೆಮೋಗ್ಲೋಬಿನ್ ನನ್ನು ಹೆಚ್ಚಿಸುತ್ತದೆ ಬೆಲ್ಲದಲ್ಲಿ ಐರನ್ ಹೆಚ್ಚಾಗಿದೆ ಇದರಿಂದ ಸುಲಭವಾಗಿ ಆಹಾರ ಜೀರ್ಣವಾಗುತ್ತದೆ ಮತ್ತು ಬೆಲ್ಲವು ಶುದ್ಧ ಶಕ್ತಿಯ ಮೂಲವಾಗಿದ್ದು ನಮ್ಮ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ ಹಾಗೂ ಬೆಲ್ಲ ಉಷ್ಣತೆಯ ಗುಣ ಹೊಂದಿದ್ದು ಶೀತ ಮತ್ತು ಕೆಮ್ಮನ್ನು ನಿವಾರಿಸುತ್ತದೆ ಋತುವಿನ ಬದಲಾವಣೆಯಲ್ಲಿ ಬೆಲ್ಲ ದೇಹದ ಶಕ್ತಿಯನ್ನು ಹೆಚ್ಚಿಸುವ ಮೂಲಕ ಋತು ಬದಲಾವಣೆಗೆ ದೇಹವನ್ನು ಶುದ್ಧಗೊಳಿಸುತ್ತದೆ
ಇನ್ನು ನಮ್ಮ ದೇಶದ ಹಲವು ರಾಜ್ಯಗಳಲ್ಲಿ ಯುಗಾದಿ ಹಬ್ಬವನ್ನು ಬೇರೆ ಬೇರೆ ಹೆಸರಿನಿಂದ ಆಚರಿಸುತ್ತಾರೆ. ಅವುಗಳು ಗೋವಾ ಮತ್ತು ಕೊಂಕಣ ಪ್ರದೇಶದಲ್ಲಿ ಸಂವತ್ಸರ ಪಾಡ್ವೊ ಎಂಬ ಹಬ್ಬವನ್ನು ಆಚರಿಸುತ್ತಾರೆ, ಮಣಿಪುರ್ ನಲ್ಲಿ ಸಜಿಬು ನೊಂಗ್ಮ ಪಾನ್ಬಾ ಎಂಬ ಹೆಸರಿನಿಂದ ಆಚರಿಸುತ್ತಾರೆ ಮಹಾರಾಷ್ಟ್ರದಲ್ಲಿ ಗುಡಿ ಪಾಡ್ವಾ ಎಂದು ಆಚರಿಸುತ್ತಾರೆ
ಒಟ್ಟಾರೆಯಾಗಿ ಯುಗಾದಿ ಒಂದು ಮುಕ್ತಾಯದ ಸಂಕೇತ ಮತ್ತು ಹೊಸ ಆರಂಭ ಯುಗಾದಿ ಹಬ್ಬವು ಹಳೆಯದನ್ನ ಬಿಟ್ಟು ಹೊಸದನ್ನು ಸ್ವಾಗತಿಸುವ ಸಂಪ್ರದಾಯದ ಪ್ರತೀಕವಾಗಿದೆ ಇದನ್ನು ಆಧ್ಯಾತ್ಮಿಕ ದೃಷ್ಟಿಕೋನದಿಂದ ನೋಡಿದರೆ ಯುಗಾದಿ ನಮಗೆ ಜೀವನದಲ್ಲಿ ಏರುಪೇರುಗಳು ಸಹಜ ಎಂಬ ಸಂದೇಶವನ್ನು ನೀಡುತ್ತದೆ ವೈಜ್ಞಾನಿಕ ದೃಷ್ಟಿಕೋನದಿಂದ ಈ ಹಬ್ಬವು ಆರೋಗ್ಯ ಕಾಪಾಡುವ ಮತ್ತು ಆಯುರ್ವೇದಿ ಚಟುವಟಿಕೆಗಳ ಮೂಲಕ ದೇಹವನ್ನು ಶುದ್ಧೀಕರಿಸಲು ಪ್ರಯತ್ನಿಸುತ್ತದೆ ಮತ್ತು ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ ಕುಟುಂಬ ಮತ್ತು ಸಮುದಾಯ ಒಟ್ಟಾರೆಯಾಗಿ ಸೇರಿ ಹಬ್ಬವನ್ನು ಸಂಭ್ರಮಿಸುವ ಪರಿಪಾಠವನ್ನು ಬೆಳೆಸುತ್ತದೆ.
ಹೊಸ ವರ್ಷದಲ್ಲಿ ಸಿಹಿ ಕಹಿ ಕಷ್ಟ ಸುಖ ಹಾಗೂ ವರ್ಷದ ಇಡಿ ನಮ್ಮ ದೇಹಕ್ಕೆ ಮಾನಸಿಕ ಹಾಗೂ ದೈಹಿಕವಾಗಿ ಚೆನ್ನಾಗಿರಲು ಹಾರೈಸುವ ಹಬ್ಬವೇ ಯುಗಾದಿ.
ಶಿಲ್ಪಾ ಹೊಸಮನಿ
ಅಲ್ಮಾ ಮಿಡಿಯಾ ಸ್ಕೂಲ್ ವಿದ್ಯಾರ್ಥಿನಿ