ಅಬ್ಬಬ್ಬಾ! 1.9 ಕೋಟಿ ಲೈಕ್ ಗುರು; ಕೊಹ್ಲಿಯ ಈ ಪೋಸ್ಟ್‌ಗೆ.

ನವದೆಹಲಿ: ಕ್ರಿಕೆಟ್ ದಿಗ್ಗಜ ಕಿಂಗ್ ಕೊಹ್ಲಿ ಅವರು ಸಾಮಾಜಿಕ ಜಾಲತಾಣವನ್ನು ಒಮ್ಮೆ ನಡುಗಿಸಿ ಬಿಟ್ಟಿದ್ದಾರೆ. 2024ರ ಟಿ-20 ವಿಶ್ವಕಪ್‌ನ್ನು ಗೆದ್ದು ಬೀಗಿದ ಭಾರತ ತಂಡ ಈಗ ಟ್ರೆಂಡ್ ನಲ್ಲಿದೆ. ಇದೀಗ ವಿರಾಟ್ ಕೊಹ್ಲಿ ಅವರು ತಮ್ಮ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ನಲ್ಲಿ ಮಾಡಿದ ಆ ಒಂದು ಪೋಸ್ಟ್ ಇತಿಹಾಸ ಸೃಷ್ಟಿಸಿದೆ. ಏನದು ಪೋಸ್ಟ್ ಹಾಗಾದರೆ?




ಭಾರತ ವಿಶ್ವಕಪ್ ಗೆದ್ದ ಐತಿಹಾಸಿಕ ಕ್ಷಣಕ್ಕೆ ಕೋಟಿಗಟ್ಟಲೆ ಜನರು ಸಾಕ್ಷಿಯಾಗಿದ್ದರು. ಕೊಹ್ಲಿ ಅವರು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಟ್ರೋಫಿ ಕೊಡುವ ಚಿತ್ರ, ರೋಹಿತ್ ಶರ್ಮಾ ಅವರೊಂದಿಗೆ ಇರುವ ಚಿತ್ರ ಹಾಗೂ ಟ್ರೋಫಿಯೊಂದಿಗೆ ಇರುವ ಚಿತ್ರಗಳನ್ನು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಭಾರತದ ಇತಿಹಾಸದಲ್ಲಿಯೇ ಅತಿ ಹೆಚ್ಚು ಲೈಕ್ ಪಡೆದ ಪೊಸ್ಟ್ ಎಂಬ ಖ್ಯಾತಿಗೆ ಪಾತ್ರವಾಗಿದೆ. ಎಷ್ಟು ಲೈಕ್ಸ್ ಎಂದು ತಿಳಿದಿದೆಯೇ ನಿಮಗೆ?
ಬರೊಬ್ಬರಿ 1.9 ಕೋಟಿ ಲೈಕ್ಸ್ ಪಡೆದಿದೆ ಈ ಪೋಸ್ಟ್. ಇದರಿಂದ ರೋಹಿತ್ ಭಾರತೀಯರಿಗೆ ಕ್ರಿಕೆಟ್ ಒಂದು ಧರ್ಮ ಎಂಬ ಮಾತು ಸುಳ್ಳಲ್ಲ ಎಂದು ಸಾಬೀತಾಗಿದೆ.