India
18 ವರ್ಷದ ಯುವಕನ ತಲೆಯ ಮೇಲೆ ಬಿದ್ದ ವಿಂಡೋ ಎಸಿ: ಭೀಕರ ವಿಡಿಯೋ ನೋಡಿ ನೆಟ್ಟಿಗರು ಶಾಕ್!
ದೆಹಲಿ: ದೆಹಲಿಯ ದೋರಿವಾಲಾ ಪ್ರದೇಶದಲ್ಲಿ ನಿನ್ನೆ ನಡೆದ ಭಯಾನಕ ಘಟನೆಯಲ್ಲಿ 18 ವರ್ಷದ ಯುವಕನೊಬ್ಬನು ತಕ್ಷಣವೇ ಸಾವನ್ನಪ್ಪಿದಾನೆ. ದೆಹಲಿಯ ದೇಶ್ ಬಂಧು ಗುಪ್ತ ರಸ್ತೆಯಲ್ಲಿ ಸಂಜೆ 6:40 ಕ್ಕೆ ಈ ದುರ್ಘಟನೆ ಸಂಭವಿಸಿದೆ.
ಸಿಸಿ ಟಿವಿ ದೃಶ್ಯಾವಳಿಗಳ ಪ್ರಕಾರ, ಜಿತೇಶ್ ಎಂಬ 18 ವರ್ಷದ ಯುವಕನು ತನ್ನ ಸ್ನೇಹಿತ ಪ್ರಸನ್ನ (17) ಜೊತೆ ಚರ್ಚಿಸುತ್ತಾ ಸ್ಕೂಟರ್ ಮೇಲೆ ಕುಳಿತುಕೊಂಡಿದ್ದನು. ಇಬ್ಬರು ಸ್ನೇಹಿತರು ವಿದಾಯ ಕೋರಿದ ತಕ್ಷಣ, ಎರಡನೇ ಮಹಡಿಯಿಂದ ಒಂದು ವಿಂಡೋ ಎಸಿ ಯಂತ್ರ ಜಿತೇಶ್ ತಲೆಯ ಮೇಲೆ ಬಿದ್ದಿದ್ದು, ತಕ್ಷಣವೇ ಅವನು ಮೃತಪಟ್ಟಿದ್ದಾನೆ. ಪ್ರಸನ್ನ ಕೂಡಾ ಈ ಘಟನೆಯಲ್ಲಿ ಗಾಯಗೊಂಡಿದ್ದಾನೆ.
ಜಿತೇಶ್ ದೆಹಲಿಯ ದೋರಿವಾಲಾ ಪ್ರದೇಶದ ನಿವಾಸಿಯಾಗಿದ್ದು, ಪ್ರಸನ್ನ ಪಟೇಲ್ ನಗರದಲ್ಲಿ ವಾಸವಾಗಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿ, ತನಿಖೆಯನ್ನು ಆರಂಭಿಸಿದ್ದಾರೆ.