
ವಾಷಿಂಗ್ಟನ್: ಅಮೆರಿಕದ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತೀಯ ಮೂಲದ ಉಷಾ ಚಿಲುಕೂರಿ ಶೀಘ್ರದಲ್ಲೇ ‘ಸೆಕೆಂಡ್ ಲೇಡಿ’ ಸ್ಥಾನಕ್ಕೇರಲಿದ್ದು, ದೇಶಾದ್ಯಾಂತ ಸಂಭ್ರಮದ ಸದ್ದು. ಜೆಡಿ ವೆನ್ಸ್ ಅವರ ಪತ್ನಿ ಉಷಾ, ಈ ಗೌರವ ಸಾಧಿಸುತ್ತಿದ್ದು, ಅವರ ಭಾರತೀಯ ಮೂಲವು ದೇಶದ ಜನರ ಗಮನ ಸೆಳೆದಿದೆ.
ಅಮೆರಿಕದ ಉಪಾಧ್ಯಕ್ಷೀಯ ಸ್ಥಾನಕ್ಕೆ ಚುನಾಯಿತರಾದ ಜೆಡಿ ವೆನ್ಸ್ ಅವರ ಜಯದ ನಂತರ, ಅವರು ತಮ್ಮ ಪತ್ನಿ ಉಷಾ ಚಿಲುಕೂರಿಯ ಕುರಿತು ಹೃದಯಸ್ಪರ್ಶಿ ಸಂದೇಶವನ್ನು ಸಾಮಾಜಿಕ ಮಾಧ್ಯಮ ‘ಎಕ್ಸ್’ ಮೂಲಕ ಹಂಚಿಕೊಂಡಿದ್ದಾರೆ. ಟ್ರಂಪ್ ಅವರ ಗೆಲುವಿನ ಸಂದರ್ಭದಲ್ಲಿ, ವೆನ್ಸ್, “ನನ್ನ ಸುಂದರ ಪತ್ನಿಗೆ ಧನ್ಯವಾದಗಳು, ನೀನಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ” ಎಂದು ಪೋಸ್ಟ್ ಮಾಡಿ, ಅವರ ಪ್ರೀತಿ ಮತ್ತು ಬೆಂಬಲವನ್ನು ಅಭಿಮಾನಿಗಳ ಮುಂದೆ ಬಹಿರಂಗಪಡಿಸಿದ್ದಾರೆ.
ಉಷಾ ಚಿಲುಕೂರಿ ಯಾರು?
ಆಂದ್ರ ಪ್ರದೇಶ ಮೂಲದ ವಕೀಲೆಯಾದ ಉಷಾ ಚಿಲುಕೂರಿ ಮೂಲತಃ ಆಂಧ್ರಪ್ರದೇಶದವರಾಗಿದ್ದು, ಸನ್ ಡಿಯಾಗೋದಲ್ಲಿ ಬೆಳೆದಿದ್ದಾರೆ. ಯೇಲ್ ವಿಶ್ವವಿದ್ಯಾಲಯದಲ್ಲಿ ಇತಿಹಾಸದಲ್ಲಿ ಪದವಿ ಪಡೆದಿರುವ ಉಷಾ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ. ಯೇಲ್ ಲಾ ಶಾಲೆಯಲ್ಲಿ ಜೆಡಿ ವೆನ್ಸ್ ಅವರನ್ನು ಪರಿಚಯಿಸಿಕೊಂಡು 2014ರಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ಆ ದಂಪತಿಗೆ ಮೂರು ಮಕ್ಕಳು ಇದ್ದಾರೆ.
ಟ್ರಂಪ್ ಶ್ಲಾಘನೆ: ಅಮೆರಿಕದ ಅಧ್ಯಕ್ಷೀಯ ಸ್ಥಾನಕ್ಕೆ ನೇಮಕಗೊಂಡಿರುವ ಡೊನಾಲ್ಡ್ ಟ್ರಂಪ್ ತಮ್ಮ ಉಪಾಧ್ಯಕ್ಷ ಜೆಡಿ ವೆನ್ಸ್ ಮತ್ತು ಅವರ ಪತ್ನಿ ಉಷಾ ಅವರನ್ನು ಜಯೋತ್ಸವ ಸಂದರ್ಭದಲ್ಲಿ ಶ್ಲಾಘನೆ ಮಾಡಿದರು. “ಈಗ ನಾನು ನಿಜವಾಗಿ ಉಪಾಧ್ಯಕ್ಷೀಯ ಸ್ಥಾನಕ್ಕೆ ಆಯ್ಕೆಯಾಗಿರುವ ಜೆಡಿ ವೆನ್ಸ್ ಮತ್ತು ಅವರ ಅದ್ಭುತ ಪತ್ನಿ ಉಷಾ ವಾಂಸ್ ಅವರನ್ನು ಅಭಿನಂದಿಸುತ್ತಿದ್ದೇನೆ,” ಎಂದು ತಮ್ಮ ಬೆಂಬಲಿಗರ ಸಭೆಯಲ್ಲಿ ಘೋಷಿಸಿದರು.