Politics
ಯಾರು ಈ ಬಾರಿಯ ಅತ್ಯಂತ ಕಿರಿಯ ಎಂಪಿ?
ಪಾಟ್ನಾ: ಪ್ರತಿ ಬಾರಿಯೂ ಲೋಕಸಭೆಯು ಒಬ್ಬ ಯುವ ಅಥವಾ ಕಡಿಮೆ ವಯಸ್ಸಿನ ಸಂಸದರನ್ನು ಹೊಂದುತ್ತದೆ. ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಕನಿಷ್ಠ 25 ವರ್ಷ ವಯಸ್ಸಾಗಿರಬೇಕು. ಈ ಹಿಂದೆ ಪ್ರಸ್ತುತ ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾದಂತಹ ಶ್ರೀ ಯೋಗಿ ಆದಿತ್ಯನಾಥ್ ಅವರು ಕೂಡ ಅತ್ಯಂತ ಕಿರಿಯ ಸಂಸದರಾಗಿದ್ದರು.
ಹಾಗಾದ್ರೆ ಈ ಬಾರಿಯ ಯುವ ಸಂಸದರು ಯಾರು?
2024ರ ಲೋಕಸಭೆ ಅತ್ಯಂತ ಕಿರಿಯ ವಯಸ್ಸಿನ ಸಂಸದೆಯಾಗಿ ಒಬ್ಬ ಮಹಿಳೆಯನ್ನು ಹೊಂದಿದೆ. ಅವರೇ ಮಾನ್ಯ. ಶಾಂಭವಿ ಚೌಧರಿ. 25 ವರ್ಷದ ಶಾಂಭವಿ ಚೌದರಿಯವರು ಎಲ್‌ಜೆಪಿ ಪಕ್ಷದ ಅಭ್ಯರ್ಥಿಯಾಗಿದ್ದರು. ಇವರು ಮೂರನೇ ತಲೆಮಾರಿನ ರಾಜಕಾರಣಿಯಾಗಿದ್ದು, ಇವರ ತಂದೆಯವರಾದ ಅಶೋಕ್ ಚೌದರಿಯವರು ನಿತೀಶ್ ಕುಮಾರ್ ನಾಯಕತ್ವದ ಜೆಡಿಯು ಪಕ್ಷದಲ್ಲಿ ಪ್ರಭಾವಿ ಶಾಸಕರಾಗಿದ್ದಾರೆ.
ಶಾಂಭವಿ ಚೌದರಿಯವರು ಎಂಎ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು, ದೇಶದ ಉನ್ನತ ದೆಹಲಿ ಸ್ಕೂಲ್ ಆಫ್ ಎಕಾನಮಿಕ್ಸ್ ನಲ್ಲಿ ಪಡೆದಿದ್ದಾರೆ.