ಬ್ಯಾರಿಸ್ಟರ್ ವರುಣ್ ಘೋಷ್ ರವರು ಇಂದು ಇತಿಹಾಸ ಸೃಷ್ಟಿಸಿದ್ದಾರೆ. ಭಗವದ್ಗೀತೆಯ ಮೇಲೆ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿದ ಮೊದಲ ಭಾರತೀಯ ಮೂಲದ ಆಸ್ಟ್ರೇಲಿಯಾ ಪ್ರಜೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವರುಣ್ ಅವರು ಆಸ್ಟ್ರೇಲಿಯಾದ ಫೆಡರಲ್ ಸಂಸತ್ತಿನಲ್ಲಿ ಪಶ್ಚಿಮ ಆಸ್ಟ್ರೇಲಿಯಾವನ್ನು ಪ್ರತಿನಿಧಿಸುತ್ತಿದ್ದಾರೆ.
ವರುಣ್ ಘೋಷ್ ಅವರು ಪರ್ತ್ ಮೂಲದ ವಕೀಲರಾಗಿದ್ದು, ಅವರು ಕೇವಲ 17 ವರ್ಷದವರಾಗಿದ್ದಾಗ ಭಾರತದಿಂದ ತೆರಳಿದರು. ಅವರು ವೆಸ್ಟರ್ನ್ ಆಸ್ಟ್ರೇಲಿಯಾ ವಿಶ್ವವಿದ್ಯಾಲಯದಿಂದ ಕಲೆ ಮತ್ತು ಕಾನೂನಿನಲ್ಲಿ ತಮ್ಮ ಪದವಿಯನ್ನು ಪಡೆದರು ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಕಾನೂನು ವಿಷಯದಲ್ಲಿ ಕಾಮನ್ವೆಲ್ತ್ ವಿದ್ವಾಂಸರಾಗಿದ್ದರು. ಅವರು ಈ ಹಿಂದೆ ವಾಷಿಂಗ್ಟನ್ ಡಿಸಿ ಯಲ್ಲಿ ವಿಶ್ವ ಬ್ಯಾಂಕ್ಗೆ ಸಲಹೆಗಾರರಾಗಿ ಮತ್ತು ನ್ಯೂಯಾರ್ಕ್ನಲ್ಲಿ ಹಣಕಾಸು ವಕೀಲರಾಗಿ ಕೆಲಸ ಮಾಡಿದ್ದಾರೆ. ಅವರು ಆಸ್ಟ್ರೇಲಿಯಾದ ಲೇಬರ್ ಪಾರ್ಟಿಗೆ ಸೇರುವ ಮೂಲಕ ತಮ್ಮ ರಾಜಕೀಯ ಜೀವನವು ಪರ್ತ್ನಲ್ಲಿ ಪ್ರಾರಂಭಿಸಿದರು.