ಸೂರ್ಯನಮಸ್ಕಾರದ 12 ಆಸನಗಳು: ಇದರಿಂದ ಆಗುವ ಪ್ರಯೋಜನ ನಿಮಗೆ ತಿಳಿದಿದೆಯೇ…?!
ಸೂರ್ಯ ನಮಸ್ಕಾರ ಪ್ರತಿದಿನ ಮಾಡುವುದರಿಂದ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಅಪಾರ ಸಕಾರಾತ್ಮಕ ಪರಿಣಾಮಗಳು ಬೀರುತ್ತದೆ. ಈ ಒಂದು ಸೂರ್ಯ ನಮಸ್ಕಾರದಲ್ಲಿ 12 ಆಸನಗಳು ಅಡಗಿವೆ. ಇವುಗಳನ್ನು ಸರಿಯಾದ ರೀತಿಯಲ್ಲಿ ಮಾಡುವುದು ಅತ್ಯಗತ್ಯವಾಗಿದೆ. ಯಾಕೆಂದರೆ, ತಪ್ಪಾದ ಆಸನಗಳು ದೇಹ ಮತ್ತು ಮನಸ್ಸಿಗೆ ದುಷ್ಪರಿಣಾಮಗಳನ್ನು ತರಬಹುದು.
ಸೂರ್ಯನಮಸ್ಕಾರ ಎಂದರೇನು?
ಹೆಸರಿನಲ್ಲೇ ಇರುವಂತೆ “ಸೂರ್ಯನಿಗೆ ನಮಸ್ಕಾರ” ಎಂದು ಅರ್ಥಸೂಚಿತವಾಗಿರುವ ಸೂರ್ಯನಮಸ್ಕಾರವು 12 ಶಕ್ತಿಯುತ ಯೋಗಾಸನಗಳ ಸರಣಿ. ಇದು ಪ್ರಪಂಚದ ಮೂಲ ಶಕ್ತಿಯಾಗಿರುವ ಸೂರ್ಯನಿಗೆ ನಮಸಕಾರವನ್ನು ಸಲ್ಲಿಸುವ ಅಭ್ಯಾಸವಾಗಿದ್ದು, ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಅತೀ ಅಗತ್ಯವಾದ ಸೂಕ್ತ ವ್ಯಾಯಾಮವನ್ನು ನೀಡುತ್ತದೆ.
ಯಾವಾಗ ಮಾಡಬೇಕು ಸೂರ್ಯನಮಸ್ಕಾರ?
ಬೆಳಗಿನ ಸೂರ್ಯೋದಯದ ಹೊತ್ತಿನಲ್ಲಿ, ಖಾಲಿ ಹೊಟ್ಟೆಯಲ್ಲಿ, ಶುದ್ಧ ಮನಸ್ಸಿನಿಂದ ಈ ಯೋಗಾಸನವನ್ನು ಅಭ್ಯಾಸ ಮಾಡಿದರೆ ಪರಿಣಾಮಕಾರಿ ಪ್ರಯೋಜನಗಳನ್ನು ಪಡೆಯಬಹುದು.
12 ಆಸನಗಳ ವಿವರಗಳು:
- ಪ್ರಾಣಾಮಾಸನ –
- ಹಸ್ತ ಉತ್ತಾನಾಸನ –
- ಹಸ್ತ ಪಾದಾಸನ –
- ಅಶ್ವ ಸಂಚಲನಾಸನ –
- ದಂಡಾಸನ –
- ಅಷ್ಟಾಂಗ ನಮಸ್ಕಾರ –
- ಭುಜಂಗಾಸನ –
- ಪರ್ವತಾಸನ –
- ಅಶ್ವ ಸಂಚಲನಾಸನ –
- ಹಸ್ತ ಪಾದಾಸನ –
- ಹಸ್ತ ಉತ್ತಾನಾಸನ –
- ಪ್ರಾಣಾಮಾಸನ –
ದೈನಂದಿನ ಪ್ರಯೋಜನಗಳು:
ನಿತ್ಯ ಸೂರ್ಯನಮಸ್ಕಾರದಿಂದ ಹೃದಯದ ಆರೋಗ್ಯ, ನರ ಸಂಕೋಚನ, ದೇಹದ ಸಮತೋಲನ, ತೂಕ ನಿರ್ವಹಣೆ, ತುರ್ತು ಶಕ್ತಿ ಸಾಧನೆ, ದೇಹದ ಕೋಶಗಳ ಸುಧಾರಣೆ ಮತ್ತು ಒತ್ತಡ ನಿವಾರಣೆ ಮುಂತಾದ ಅನೇಕ ಶಕ್ತಿಯನ್ನು ಹೊಂದಲು ಸಾಧ್ಯ.