Alma Corner

ಎಲ್ಲಾ ಜಿಲ್ಲೆಗಳಲ್ಲೂ ಖಾಕಿ ಭದ್ರಕೋಟೆ

ಅಖಂಡ ಕರ್ನಾಟಕ  ಬಂದ್‌ ಗೆ ರಾಜಧಾನಿ ಬೆಂಗಳೂರು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ  ನಡೆಯಲಿವೆ. ಟೌನ್ ಹಾಲ್ ನಿಂದ ಸ್ವಾತಂತ್ರ್ಯ ಉದ್ಯಾನವರಿಗೂ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಸಂಘಟನೆಗಳು ತಿಳಿಸಿವೆ.

ಕೆಲವು ದಿನಗಳ ಹಿಂದೆ  ಬೆಳಗಾವಿಯಲ್ಲಿ  ksrtc ಬಸ್‌ ನಿರ್ವಾಹಕನ  ಮೇಲೆ  ಮರಾಠಿ ಪುಂಡರು ದಾಳಿ ಮಾಡಿದ್ದರು , ಕನ್ನಡಿಗರ ಮೇಲೆ ದೌರ್ಜನ್ಯ ಎಸೆಗಿರುವವರ  ವಿರುದ್ಧ ಸೂಕ್ತ ಕ್ರಮ ಕೆಗೊಳ್ಳುವಂತೆ ಹಾಗೂ ಎಂಇ ಎಸ್‌ ಮತ್ತು ಇತರೆ ಮರಾಠಿ ಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಕನ್ನಡ ಸಂಘಟನೆಗಳು ಅಖಂಡ ಕರ್ನಾಟಕ ಬಂದ್‌ ಗೆ ಕರೆ ನೀಡಿವೆ. ಸಾಕಷ್ಟು ಸಂಘಟನೆಗಳು ಬೆಂಬಲ ಸೂಚಿಸಿದ್ದಾರೆ .ಕೆಲವು ಸಂಘಟನೆಗಳು ನೈತಿಕ ಬೆಂಬಲವನ್ನಷ್ಟೇ  ನೀಡಿವೆ.

       ಬಂದ್‌ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ  ಪೋಲಿಸ್‌ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ.ಯಾವುದೇ ಆಹಿತಕರ ಘಟನೆ ನಡೆಯದಂತೆ  ಬೆಂಗಳೂರು ನಗರದೆಲ್ಲೆಡೆ ಪೋಲಿಸ್‌  ಕಾವಲು ಹಾಕಲಾಗಿದೆಎಲ್ಲೆಡೆ ಪೋಲಿಸರು ತೀವ್ರ ಕಟ್ವೆಚ್ಚರ ವಹಿಸಿದ್ದಾರೆ. ಮರಾಠಿ ಭಾಷಿಕರಿರುವ ಪ್ರದೇಶಗಳಲ್ಲಿ  ಬಿಗಿ ಪೋಲಿಸ್‌ ಬಂದೋಬಸ್ತ್‌ ಮಾಡಲಾಗಿದೆ. ಪ್ರಮುಖವಾಗಿ ಮೆಜೆಸ್ವಿಕ್‌, ಸ್ವಾತಂತ್ರ್ಯ ಉದ್ಯಾನ, ಮೈಸೂರು ಬ್ಯಾಂಕ್‌ ಸರ್ಕಲ್‌, ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಹೆಚ್ಚುವರಿ ಪೋಲಿಸ್‌ ಭದ್ರತೆ ಕಲ್ಪಿಸಲಾಗಿದೆ.

 “ಬಲವಂತವಾಗಿ ಬಂದ್‌ ಗೆ ಅವಕಾಶ ನೀಡುವುದಿಲ್ಲ; ಕನ್ನಡ ಸಂಘಟನೆಗಳು ಬಂದ್‌ ಘೋಷಣೆ ಮಾಡಿದ್ದು, ಸಾರ್ವಕನಿಕರಿಗೆ ತೊಂದರೆಯಾಗದಂತೆ  ಸುರಕ್ಷತಾ ಕ್ರಮ ಕೈಗೊಳ್ಳಲಾಗಿದ,.ಸಾರ್ವಜನಿಕರಿಗೆ ಸ್ವಯಂಪ್ರೇರಿತವಾಗಿ ಬಂದ್‌ ಮಾಡಿದರೆ ತೊಂದರೆ ಇಲ್ಲ, ಆದರೆ ಬಲವಂತವಾಗಿ ಬಂದ್‌ ಗೆ ಅವಕಾಶವಿಲ್ಲ . ಒಂದು ವೇಳೆ ಯಾವುದೇ ರೀತಿಯ ಘಟನರ ನೆಡೆದರೆ ಅಥವಾ ಸಾರ್ವಜನಿಕ ಆಸ್ತಿಗೆ ಹಾನಿಯಾದರೆ ಆ ನಷ್ಟವನ್ನು ಬಂದ್ ಗೆ ಕರೆ ಕೊಟ್ಟಿರುವವರೇ ಭರಿಸಬೇಕು,” ಎಂದು ಬೆಂಗಳೂರು ನಗರ ಪೋಲಿಸ್‌ ಆಯುಕ್ತ ದಯಾನಂದ  ಎಚ್ಚರಿಕೆ ನೀಡಿದ್ದಾರೆ.

Show More

Related Articles

Leave a Reply

Your email address will not be published. Required fields are marked *

Back to top button