ಪ್ಲಾಸ್ಟಿಕ್ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳು

ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಮೇಲೆ ದುಷ್ಟರಿಣಾಮಗಳು ಬೀರುತ್ತದೆ. ಇದರಿಂದ ಗಾಳಿ, ನೀರು, ಮಣ್ಣು ಮತ್ತು ವಾತಾವರಣ ಕಲುಷಿತಗೊಂಡು ರೋಗಗಳು ಹರಡುತ್ತದೆ. ಹಾಗಾಗಿ ಪ್ರತಿಯೊಬ್ಬರು ಜಾಗೃತರಾಗಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಬೇಕು
ಪ್ಲಾಸ್ಟಿಕ್ ಹುಟ್ಟು ಹಾಕುವ ಅಪಾಯಗಳು ; ಪ್ಲಾಸ್ಟಿಕ್ ತಯಾರಿಕೆ ಹಂತದಲ್ಲಿಯೇ ದೊಡ್ಡ ಮಟ್ಟದ ಮಾಲ್ಯಿನವನ್ನು ಉಂಟುಮಾಡುತ್ತದೆ. ಇದು ನೇರವಾಗಿ ಮನುಷ್ಯ ಮತ್ತು ಪ್ರಾಣಿಗಳ ಆರೋಗ್ಯದ ಮೇಲೆ ದುಷ್ಡರಿಣಾಮ ಬೀರುತ್ತದೆ.
ಬೆಳವಣಿಗೆಗೆ ತೊಂದರೆ ಉಸಿರಾಟದ ತೊಂದರೆ, ತಲೆನೋವು, ಅಯಾಸ, ಹಾರ್ಮೋನುಗಳ ಬದಲಾವಣೆಗಳು, ವೀರ್ಯಾಣುಗಳ ಸಂಖ್ಯೆ ಕ್ಷೀಣಗೊಳ್ಳುವಿಕೆ, ಬಂಜೆತನ ಮುಂತಾದ ತೊಂದರೆಗಳನ್ನು ಉಂಟುಮಾಡಬಲ್ಲದು.
ಪ್ಲಾಸ್ಟಿಕ್ ಮಸ್ತುಗಳು ಸಾಮಾನ್ಯವಾಗಿ ಯಾವುದೇ ಒಂದು ಮಸ್ತುವಿನೊಂದಿಗೊ ವರ್ತಿಸುವುದಿಲ್ಲ. ಅದರೆ ಪ್ಲಾಸ್ಟಿಕ್‌ಲ್ಲಿರುವ ಕೆಲವೊಂದು ವಿಷಕಾರಿ ರಾಸಾಯನಿಕಗಳು ದೀಘಕಾಲದ ಸಂಪರ್ಕದಲ್ಲಿ ಆಹಾರ ಪದಾರ್ಥಗಳೊಂದಿಗೆ ವರ್ತಿಸುವ ಸಾಮರ್ಥ್ಯವನ್ನು ಹೊಂದಿದೆ.ತೇವಾಂಶವಿರುವ ಆಹಾರ ಪದಾರ್ಥಗಳು ದೀರ್ಘಕಾಲ ಪ್ಲಾಸ್ಟಿಕ್ʼನೊಂದಿಗೆ ಇದ್ದಾಗ ಅಲ್ಲಿ ರಾಸಾಯನಿಕ ಪ್ರಕ್ರಿಯೆ ಉಂಟಾಗಿ ಅವು ವಿಷವಾಗಿ ಪರಿವರ್ತನೆಗೊಳ್ಳುತ್ತದೆ.

ಪ್ರಾಣಿ. ಪಕ್ಷಿ, ಜಲಚರಗಳ ಮೇಲೆ ಹಾನಿ; ನಮ್ಮ ದೇಶದಲ್ಲಿ ವರ್ಷಕ್ಕೆ ಸುಮಾರು ಇಪ್ಪತ್ತು ಸಾವಿರ ಜಾನುವಾರಗಳು ಪ್ಲಾಸ್ಟಿಕ್ ನುಂಗಿ ಪ್ರಾಣವನ್ನು ಕಳೆದುಕೊಳ್ಳುತ್ತವೆ. ದನ-ಕರುಗಳು ಪ್ಲಾಸ್ಟಿಕನ್ನು ನುಂಗಿದಾಗ ಅವುಗಳ ಹೊಟ್ಟೆಯಲ್ಲಿ ಅದರಲ್ಲಿರುವ ರಾಸಾಯನಿಕಗಳು ಸೇರಿ ಹಾಲಿನೊಂದಿಗೆ ಬೆರತು ಮುನುಷ್ಯನ ದೇಹವನ್ನು ಸೇರುತ್ತಿವೆ. ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಮುದ್ರದಲ್ಲಿ ಎಸೆಯುವ ಪರಿಣಾಮ ಅವು ಅಲ್ಲಿರುವ ಜಲಚರಗಳ ದೇಹದೊಳಕ್ಕೆ ಸೇರಿ ಜಲಚರಗಳ ಜೀವಕ್ಕೆ ಹಾನಿಯುಂಟು ಮಾಡುತ್ತದೆ. ಮನೆಯಲ್ಲಿ ಉಳಿದ ಆಹಾರ ವಸ್ತುಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಎಲ್ಲೆಂದರಲ್ಲಿ ಎಸೆಯುವುದು ಪರಿಣಾಮಕಾರಿ. ಆ ಚೀಲಗಳಲ್ಲಿರುವ ಆಹಾರಗಳನ್ನು ತಿನ್ನಲು ಬಯಸುವ ಪ್ರಾಣಿ ಪಕ್ಷಿಗಳು ಆಹಾರವನ್ನು ಪ್ಲಾಸ್ಟಿಕ್ನೊಂದಿಗೆ ನುಂಗಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತವೆ.
ಆರೋಗ್ಯಕ್ಕೆ ಹೇಗೆ ಹಾನಿಕಾರಿ; ಪ್ಲಾಸ್ಟಿಕ್ ಬಿಸಿಯಾದಾಗ ಅದರಿಂದ ಬಿಡುಗಡೆಯಾಗುವ ರಾಸಾಯನಿಕಗಳು ಆಹಾರವನ್ನು ಸೇರಿ ಅದನ್ನು ವಿಷಪೂರಿತವನ್ನಾಗಿ ಮಾಡುತ್ತದೆ. ಅಂತಹ ಆಹಾರದ ಸೇವನೆ ಮನುಷ್ಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಪ್ಲಾಸ್ಟಿಕ್ ತಯಾರಿಕೆಯಲ್ಲಿ ಹಲವು ರಾಸಾಯನಿಕ ವಸ್ತುಗಳು ಬಳಕೆಯಾಗುತ್ತವೆಯಾದರೂ, ಅದರಲ್ಲಿ ಎರಡು ವಸ್ತುಗಳು ಪ್ರಮುಖವಾಗಿದೆ. ಒಂದು ಥಾಲೇಟ್ ಮತ್ತು ಇನ್ನೊಂದು ಬಿಸ್ಥೆನಾಲ್ ಎ. ಪ್ಲಾಸ್ಟಿಕ್ ಅನ್ನು ಮೆದುಗೊಳಿಸಲು ಥಾಲೇಟ್ ಬಳಸಲಾಗುತ್ತದೆ. ಗಟ್ಟಿಯಾದ ಪ್ಲಾಸ್ಟಿಕ್ ತಯಾರಿಸಲು ಬಿಪಿಎಯನ್ನು ಒಳಸಲಾಗುತ್ತದೆ. ಈ ಎರಡು ರಾಸಾಯನಿಕ ವಸ್ತುಗಳು ಮನುಷ್ಯನ ಆರೋಗ್ಯಕ್ಕೆ ಹೆಚ್ಚು ಹಾನಿಕಾರಕ, ಇವುಗಳು ದೇಹದ ಹಾರ್ಮೋನ್ ಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಇದರಿಂದಾಗಿ ಹಾರ್ಮೋನ್‌ಗಳ ಅಸಮತೋಲನ ಉಂಟಾಗಿ. ಸಹಜ ಬೆಳವಣಿಗೆ, ಫಲವಂತಿಕೆ ಮತ್ತು ಸಂತಾನೋತ್ಪತ್ತಿಯ ಮೇಲೆ ಪರಿಣಾಮವಾಗುತ್ತದೆ. ಮನುಷ್ಯನ ದೇಹಕ್ಕೆ ನಾನಾ ಹಂತಗಳಲ್ಲಿ ಸೇರಿಕೊಂಡು ಮಾರಕ ರೋಗಗಳಿಗೆ ಕಾರಣವಾಗುತ್ತದೆ. ಥೈರಾಯ್ಡ್, ಅಸ್ತಮಾ, ಹೃದಯ ಖಾಯಿಲೆಗಳು, ಕೂದಲು ಮತ್ತು ಚರ್ಮದ ಸಮಸ್ಯೆ, ನರಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚು. ಕೆಲವರು ಹೋಟೆಲ್ ಗಳಲ್ಲಿ ಊಟ ತಿಂಡಿಗಳನ್ನು ಕೂಡ ಪ್ಲಾಸ್ಟಿಕ್ ಕವರ್ ಗಳಲ್ಲಿ ಸುತ್ತಿಕೊಂಡು, ಪ್ಯಾಕ್ ಮಾಡಿಸಿಕೊಂಡು ಮನೆಗೆ ತಂದು ತಿನ್ನುತ್ತಾರೆ. ಬಿಸಿ ಪದಾರ್ಥಗಳನ್ನು ಪ್ಲಾಸ್ಟಿಕ್ ಕವರ್‌ಗಳಲ್ಲಿ ಹಾಕಿದಾಗ ಸಹಜವಾಗಿ ಪ್ಲಾಸ್ಟಿಕ್ ಅಂಶ ಆಹಾರಕ್ಕೆ ಬೆರತು ವಿಷವಾಗುತ್ತದೆ. ಇದರಿಂದ ಆರೋಗ್ಯದ ಮೇಲೆ ದುಷ್ಟರಿಣಾಮ ಬೀರುತ್ತದೆ.
ಸಂಗೀತ. ಎಸ್
ಆಲ್ಮಾ ನ್ಯೂಸ್ ವಿದ್ಯಾರ್ಥಿನಿ