ಶಾಲೆಗಳಿಗೆ CBSE ಅನಿರೀಕ್ಷಿತ ಭೇಟಿ…!
ಡಿ.18 ಮತ್ತು 19ರಂದು ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜ್ಯುಕೇಷನ್ (CBSE) 6 ಪ್ರದೇಶಗಳ 29 ಶಾಲೆಗಳಲ್ಲಿ ಅನಿರೀಕ್ಷಿತ ತಪಾಸಣೆ ನಡೆಸಿತು. ಈ ಕಾರ್ಯವು CBSEಯ ಉನ್ನತ ಶೈಕ್ಷಣಿಕ ಗುಣಮಟ್ಟವನ್ನು ಕಾಯ್ದುಕೊಳ್ಳುವ ಬದ್ದತೆಯ ಭಾಗವಾಗಿತ್ತು.
CBSE ಶಾಲೆಗಳು ತಮ್ಮ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿವೆಯೋ, ಇಲ್ಲವೋ ಎಂದು ಪರಿಶೀಲಿಸಿವುದು ಈ ತಪಾಸಣೆಯ ಮುಖ್ಯ ಉದ್ದೇಶವಾಗಿತ್ತು. ತಪಾಸಣೆ ತಂಡಗಳು, ವಿದ್ಯಾರ್ಥಿಗಳ ನೋಂದಣಿ ದಾಖಲೆಗಳು, ಮೂಲಸೌಕರ್ಯ ಸೌಲಭ್ಯಗಳು ಮತ್ತು ಶಾಲೆಗಳ ನಿವರ್ಹಣೆಯನ್ನು ಪರಿಶೀಲಿಸಲು ಬಂದಿದ್ದರು.
ಡಿ.18ರಂದು ದೆಹಲಿಯಲ್ಲಿ ತಪಾಸಣೆ ನಡೆಸಿತ್ತು. ಡಿ.19ರಂದು ಬೆಂಗಳೂರು, ಪಾಟ್ನಾ (ಬಿಹಾರ್), ಬಿಲಾಸ್‌ಪುರ್ (ಚತ್ತಿಸ್‌ಗಢ), ವಾರಾಣಾಸಿ(ಉತ್ತರ ಪ್ರದೇಶ) ಮತ್ತು ಅಹಮಾದಾಬಾದ್‌ನಲ್ಲಿ (ಗುಜರಾತ್) ತಪಾಸಣೆ ನಡೆಸಲಾಯಿತು.
ತಪಾಸಣೆ ನಡೆಸಲು 29 ತಂಡಗಳನ್ನು ರಚಿಸಿದ್ದು, ಆ ತಂಡಗಳಲ್ಲಿ ಒಬ್ಬ CBSE ಅಧಿಕಾರಿ ಹಾಗೂ ಸಂಬಂಧಪಟ್ಟ ಶಾಲೆಗಳ ಪ್ರಾಂಶುಪಾಲರು ಇದ್ದು ತಪಾಸಣೆಯನ್ನು ನಡೆಸಿದ್ದರು. ನಿಖರವಾದ ತಪ್ಪುಗಳನ್ನು ಹುಡುಕಲು, ಈ ತಂಡಗಳು ಶಾಲೆಗಳಿಗೆ ಅನಿರೀಕ್ಷಿತ ಭೇಟಿ ನೀಡಿದ್ದರು.
ಈ ತಪಾಸಣೆಗಳ ಮೂಲಕ ಶಾಲೆಗಳಲ್ಲಿ ನಡೆಯುತ್ತಿದ್ದ ಅನೇಕ ಲೋಪದೋಷಗಳು ಹೊರಬಂದಿವೆ. ಯಾರ ದಾಖಲೆಗಳು ಸರಿಯಾಗಿ ಇಲ್ಲವೋ, ಅವರನ್ನು ಹಾಜರಾತಿಯಲ್ಲಿ ನೋಂದಾಯಿಸಿರುವ ವಿಷಯ ಹೊರಬಿದ್ದಿದೆ. ಅದಲ್ಲದೆ, CBSE ನಿಯಮಗಳ ಪ್ರಕಾರ, ಕೆಲವು ಶಾಲೆಗಳಲ್ಲಿ ಮೂಲಸೌಕರ್ಯ ಸೌಲಭ್ಯಗಳು ಗುಣಮಟ್ಟವಾಗಿ ಇಲ್ಲವೆಂದು, ಈ ತಪಾಸಣೆಗಳ ಮೂಲಕ ತಿಳಿದಿದೆ.
ಇದೀಗ, CBSEಯು ನಿಯಮ ಉಲ್ಲಂಘಿಸುತ್ತಿರುವ ಹಲವು ಶಾಲೆಗಳಿಗೆ ಶೋ-ಕಾಸ್ ನೋಟಸ್ ನೀಡಿದೆ ಮತ್ತು ಈ ಶಾಲೆಗಳ ವಿರುದ್ಧ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಬೇಕೆಂದು ನಿರ್ಧರಿಸಿದೆ.
ಈ ಅನಿರೀಕ್ಷತ ತಪಾಸಣೆಗಳಿಂದ CBSE, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಕೊಡಬೇಕೆನ್ನುವ ಸಂದೇಶ ನೀಡುತ್ತಿದೆ.
ಧನ್ಯಾ ರೆಡ್ಡಿ
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ