Alma Corner

ಶೇಖ್‌ ಹಸೀನಾರನ್ನು ಬಾಂಗ್ಲಾಗೆ ವಾಪಸ್‌ ಕಳುಹಿಸಿ: ಯೂನಸ್‌ ಸರ್ಕಾರ

ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಸೋಮವಾರ ಭಾರತಕ್ಕೆ ರಾಜತಾಂತ್ರಿಕ ಪತ್ರವನ್ನು ಕಳುಹಿಸಿದ್ದಾರೆ. ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ ಅವರನ್ನು ಬಾಂಗ್ಲಾದೇಶಕ್ಕೆ ವಾಪಸ್‌ ಕಳುಹಿಸಿ ಎಂದು ತಮ್ಮ ಪತ್ರದ ಮೂಲಕ ಬಾಂಗ್ಲಾದೇಶ ಆಗ್ರಹಿಸಿದೆ. ವಿವಾದಾತ್ಮಕ ಉದ್ಯೋಗ ಕೋಟಾ ವ್ಯವಸ್ಥೆಯ ಕುರಿತು ವಿದ್ಯಾರ್ಥಿಗಳು ಪ್ರತಿಭಟಿಸಿದರು. ಈ ವೇಳೆ ಶೇಖ್‌ ಹಸೀನಾ ಅವರ 16 ವರ್ಷಗಳ ಆಡಳಿತ ಪತನಗೊಂಡು, ಅಂದಿನ ಬಾಂಗ್ಲಾ ಪ್ರಧಾನಿ ಆಗಸ್ಟ್‌ 5 ರಿಂದ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ.
ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವರನ್ನು ಗಡೀಪಾರು ಮಾಡುವಂತೆ ಬಾಂಗ್ಲಾದೇಶ ಮುಧ್ಯಂತರ ಸರ್ಕಾರ ಭಾರತ ಸರ್ಕಾರಕ್ಕೆ ಮನವಿ ಮಾಡಿದೆ. ನ್ಯಾಯಾಂಗ ಪ್ರಕ್ರಿಯೆಗಳಿಗಾಗಿ ಹಸೀನಾ ಅವರನ್ನು ಹಸ್ತಾಂತರಿಸುವಂತೆ ಪತ್ರ ಕಳುಹಿಸಲಾಗಿದೆ ಎಂದು ಬಾಂಗ್ಲಾ ವಿದೇಶಾಂಗ ಸಚಿವಾಲಯ ತಿಳಿಸಿದೆ.


ಬಾಂಗ್ಲಾದಲ್ಲಿ ಉದ್ಯೋಗ ಮೀಸಲಾತಿ ಕುರಿತು, ಈ ವರ್ಷದ ಆರಂಭದಲ್ಲಿ ವಿದ್ಯಾರ್ಥಿಗಳು ಪ್ರತಿಭಟಿಸಿದ್ದರು. ಈ ಪ್ರತಿಭಟನ ಬೆನ್ನಲ್ಲೇ, ಆ.5ರಂದು ದೇಶ ತೊರೆದ ಹಸೀನಾ ಭಾರತದಲ್ಲಿ ಆಶ್ರಯವನ್ನು ಪಡೆದರು.
ಮಾನವೀಯತೆಯ ವಿರುದ್ಧದ ಅಪರಾಧಗಳಿಗೆ, ಅಂತರಾಷ್ಟ್ರಿಯ ಅಪರಾಧಗಳ ನ್ಯಾಯಮಂಡಳಿ (ICT), ಹಸೀನಾ ಮತ್ತು ಕೆಲವು ಸಚಿವರು, ಸೇನಾಧಿಕಾರಿಗಳ ವಿರುದ್ಧ ವಾರಂಟ್‌ ಜಾರಿಗೊಳಿಸಿದೆ.
ಈ ಕುರಿತು ʼ ಉಭಯ ದೇಶಗಳ ನಡುವೆ ಹಸ್ತಾಂತರದ ಒಪ್ಪಂದವಿದೆ. ಈ ಪ್ರಕ್ರಿಯೆಯಲ್ಲಿ ಸಹಕರಿಸಲು ಭಾರತದ ವಿದೇಶಾಂಗ ಇಲಾಖೆಗೆ ಮನವಿ ಮಾಡಿದ್ದೇವೆʼ ಎಂದು ಗೃಹ ಇಲಾಖೆಯ ಸಲಹೆಗಾರ ಜಹಾಂಗೀರ್‌ ಆಲಂ ಹೇಳಿದ್ದಾರೆ.
ಕಳೆದ ತಿಂಗಳು ಬಾಂಗ್ಲಾ ಮಧ್ಯಂತರ ಸರ್ಕಾರ 100ದಿನ ಮುಗಿಸಿತು. ಈ ಸಂದರ್ಭದಲ್ಲಿ, ʼಹಸೀನಾ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಹಾಗೂ ಕಾರ್ಮಿಕರು ಸೇರಿದಂತೆ ಸುಮಾರು 1500 ಮಂದಿ ಮೃತಪಟ್ಟಿದ್ದಾರೆ. ಇವರಿಗೆಲ್ಲಾ ನ್ಯಾಯ ಕೊಡಬೇಕು. ಇದಕ್ಕೆ ಹಸೀನಾರನ್ನು ಬಾಂಗ್ಲಾಗೆ ವಾಪಾಸ್‌ ಕಳುಸುವಂತೆ ಮನವಿ ಮಾಡಿದ್ದೇವೆʼ ಎಂದು ಹಸೀನಾ ನಂತರದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್‌ ಯೂನಸ್‌ ಹೇಳಿದ್ದರು.

ಧನ್ಯಾ ರೆಡ್ಡಿ ಎಸ್‌

ಆಲ್ಮಾ ಮೀಡಿಯಾ ಸ್ಕೂಲ್‌ ವಿದ್ಯಾರ್ಥಿನಿ

Show More

Related Articles

Leave a Reply

Your email address will not be published. Required fields are marked *

Back to top button