Alma Corner

ಕೋಳಿ ಮಾಂಸ ಸೇವೆನೆಗೆ ಜನರು ಹಿಂದೇಟು/ಕುರಿ ಮಾಂಸ ಮತ್ತು ಮೀನಿನ ಬೆಲೆ ದುಬಾರಿ

ಹಕ್ಕಿ ಜ್ವರ  ಭೀತಿಯಿಂದ ಕೋಳಿ ಮಾಂಸ ಪ್ರಿಯರು ಈಗ  ಮೀನು ಸೇವನೆಗೆ ಒಲವು ತೋರಿದ್ದಾರೆ. ಕೋಳಿ ಮಾಂಸ ಸೇವಿಸುವುದರಿಂದ ಸೋಂಕು  ಹರಡುತ್ತದೆ ಎಂಬ ಆಂತಕದಿಂದ ಮಾಂಸ ಪ್ರಿಯರು ಮೀನು ಮತ್ತು ಕುರಿ ಮಾಂಸದ ಮೊರೆ ಹೋಗಿದ್ದಾರೆ. ಹೀಗಾಗಿ ಮೀನಿಗೆ ಭರ್ಜರಿ ಬೇಡಿಕೆ ಬಂದಿದ್ದು ದರವೂ ಏರಿಕೆ ಕಂಡಿದೆ. ನೆರೆ ಜಿಲ್ಲೆಗಳಾದ ಚಿತ್ರದುರ್ಗ, ವಿಜಯನಗರ, ಬಳ್ಳಾರಿ ಸೇರಿ ನಾನಾ ಜಿಲ್ಲೆಗಳಲ್ಲಿ ಫ್ವಾಲ್ಟ್ರಿಗಳಲ್ಲಿರುವ ಕೋಳಿಗಳಲ್ಲಿ ಹಕ್ಕಿ ಜ್ವರ ಧೃಡ ಪಟ್ಟಿದೆ,ಹಾಗಾಗಿ ಕೋಳಿ ಮಾಂಸ ಸೇವಿಸುವುದರಿಂದ  ಸೋಂಕು ಹರಡುತ್ತದೆ ಎಂಬ ಆಂತಕದಲ್ಲಿದ್ದಾರೆ. ಆದರೆ ಕುರಿ ಮಾಂಸ  ಕೆಜೆ.ಗೆ 750 ರೂ ಇರುವುದರಿಂದ ಬಡವರು ಹೆಚ್ಚಾಗಿ ಮೀನು ಸೇವೆಗೆ ಮುಂದಾಗಿದ್ದಾರೆ.    ಹಕ್ಕಿ ಜ್ವರ ಕಾಣಿಸಿಕೊಳ್ಳುವ ಮುಂಚೆ ರಾಹು, ಕಾಟ್ಲು, ಗೌರಿ ಸೇರಿ ನಾನಾ ತಳಿಯ ಕೆ.ಜೆ ಕೆರೆ ಮೀನು 150 ರಿಂದ 190 ರೂ. ಗಳಿಗೆ  ಮಾರಾಟ ಆಗುತ್ತಿತ್ತು. ಆದರೆ ಈಗ 220 ರಿಂದ 300 ರೂ. ದರ ನಿಗದಿಯಾಗಿದೆ. ಅಲ್ಲದೇ ಸಮುದ್ರದ ಬಂಗುಡೆ ,ತಾರ್ಲಿ,ಬೆಳಂಜ್ಜಿ , ಸಿಗಡಿ, ಪಾಪ್ಲೇಟ್‌ ಮೀನುಗಳ ಬೆಲೆಯಲ್ಲಿಯೂ ಏರಿಕೆಯಾಗಿದೆ. ಮಧ್ಯ ಕರ್ನಾಟಕ ದಾವಣಗೆರೆಯಲ್ಲಿರುವ ಅರುಣ ರೈಲ್ವೆ ಗೇಟ್‌ ಬಳಿಯ, ಡಾಂಗೇ ಪಾರ್ಕ್ ಸಮೀಪ ಹಾಗೂ ಮಾಗಾನಹಳ್ಳಿ ರಸ್ತೆ ಬಳಿಯ ಮೂರೇ ಮೀನಿನ ಮಾರುಕಟ್ಟೆಗೆ ಮೊದಲಿನಿಂದಲೂ ದಾವಣಗೆರೆ ಜಿಲ್ಲೆಯ ದೇವರಬೆಳೆಕೆರೆ, ಸೂಳೆಕೆರೆ, ಅಣಜಿ ಕೆರೆ, ನಾಗನೂರು ಕೆರೆ ಸೇರಿ ನಾನಾ ಕೆರೆ, ವಿಜಯನಗರದ ಟಿಬಿ ಡ್ಯಾಮ್‌, ಚಿತ್ರದುರ್ಗದ ವಾಣಿವಿಲಾಸ ಸಾಗರ ಸೇರಿ ನಾನಾ ಜಿಲ್ಲೆಗಳ ಕೆರೆ ಹಾಗೂ ಸಮುದ್ರದಿಂದ ಮೊದಲಿನಿಂದಲೂ ಪ್ರತಿದಿನ 10 ಟನ್‌ ಮೀನು ಪೂರಕವಾಗುತ್ತದೆ.

Darjeeling, West Bengal, India – June 24, 2022, Fish Market in Darjeeling where many varieties of fishes are kept for sale.

ಮೊದಲು ಇಷ್ಟು ಮೀನು ಇಲ್ಲಿ ಮಾರಾಟವಾಗುತ್ತಿರಲಿಲ್ಲ. ಹಾಗಾಗಿ ಇಲ್ಲಿಂದ ನೆರೆಹೊರೆ ಜಿಲ್ಲೆಗಳ ಮಾರುಕಟ್ಟೆಗಳಿಗೂ ಮೀನು ಪೂರೈಸಲಾಗುತ್ತಿತ್ತು.  ಈಗ ಮೀನಿಗೆ ಫುಲ್‌ ಡಿಮ್ಯಾಂಡ್‌ ಬಂದಿರುವುದರಿಂದ ಎಲ್ಲಾ10 ಟನ್‌ ಮೀನು ಇಲ್ಲಿಯೇ ಖಾಲಿಯಾಗುತ್ತಿದೆ.ಮತ್ತು ಆಯಾ ತಾಲೂಕು ಕೇಂದ್ರ ಸೇರಿ, ಹಳ್ಳಿಗಳಲ್ಲಿ ಪ್ರತಿ ದಿನ ಒಂದೂವರೆಯಿಂದ ಎರಡು ಟನ್‌ ಮೀನು ಮಾರಾಟವಾಗುತ್ತದೆ.

ಜಿಲ್ಲೆಯಲ್ಲಿ ಮೀನುಗಾರಿಕೆ ಇಲಾಖೆಯ 94 ಹಾಗೂ ಗ್ರಾಮ ಪಂಚಾಯಿತಿಯ 247 ಸೇರಿ ಒಟ್ಟು 341 ಕೆರೆಗಳಿದ್ದು ಜನವರಿಯಿಂದ ಮಾ.10ರ ವರೆಗೂ 23,320 ಟನ್‌ ಮೀನು ಮಾರಟಲಾಗಿದೆ . ಕಳೆದ ಬಾರಿಯೂ ಮೀನಿನ ಇಳುವರಿಯು ಇದೇ ಪ್ರಮಾಣದಲ್ಲಿತ್ತು. ಬೇಸಿಗೆಯಲ್ಲಿ ಗ್ರಾಮ ಪಂಚಾಯಿತಿ ಸಣ್ಣ ಕೆರೆಗಳಲ್ಲಿ ನೀರು ಆವಿಯಾಗಿ ಬತ್ತುವ ಸಾಧ್ಯತೆ ಹೆಚ್ಚು. ಹಾಗಾಗಿ ನೀರು ಆವಿ ಆಗುವುದರೊಳಗೆ ಮೀನು ಖಾಲಿ ಮಾಡಬೇಕಾದ ಅನಿವಾರ್ಯತೆ ಮೀನುಗಾರರಿಗೆ ಇದೆ. ಹಾಗಾಗಿ ಕೆಲ ಕೆರೆಗಳಲ್ಲಿ  ಬಲೆ ಹಾಕಿ ಸಣ್ಣ ಮೀನುಗಳನ್ನು ಹಿಡಿಯಲಾಗುತ್ತಿದೆ.ಹೀಗಾಗಿ  ಹಕ್ಕಿ ಜ್ವರದಿಂದ ಮೀನಿಗೆ   ಬೇಡಿಕೆ  ಹೆಚ್ಚಿದೆ.

ಸಂಗೀತ ಎಸ್‌

Show More

Related Articles

Leave a Reply

Your email address will not be published. Required fields are marked *

Back to top button