ಎಲೆಕ್ಟ್ರಿಕ್‌ಸ್ಕೂಟರ್/ಕಾರುಗಳು ಮುಂದೆ ದೇಶವನ್ನು ಮಾಲಿನ್ಯಮುಕ್ತವನ್ನಾಗಿಸುವುದೆ ..?

ಈಗಂತೂ ಎಲ್ಲಿ ನೋಡಿದರು ಎಲೆಕ್ಟ್ರಿಕ್‌ಸ್ಕೂಟರ್/ಕಾರ್‌ಗಳದ್ದೆ ಕಾರುಬಾರು, ಬಂದು ಪಕ್ಕದಲ್ಲಿ ನಿಂತಮೇಲೆಯೆ ಎಲೆಕ್ಟ್ರಿಕ್‌ಸ್ಕೂಟರ್ ಎಂದು ಪಾದಚಾರಿಗಳಿಗೆ ತಿಳಿಯುತ್ತದೆ, ತಿಳಿದಮೇಲೆ ಒಂದು ಕ್ಷಣ ಗಾಬರಿಯಾಗುವುದಂತು ಖಂಡಿತ, ಈ ಹಿಂದೆ ನಗರ ಪ್ರದೇಶಕ್ಕೆ ಮಾತ್ರ ಸೀಮಿತ ವಾಗಿದ್ದ ಎಲೆಕ್ಟ್ರಿಕ್‌ಸ್ಕೂಟರ್ ಈಗ ಹಳ್ಳಿಗಳಿಗೂ ವ್ಯಾಪಿಸಿದೆ, ಎಲೆಕ್ಟ್ರಿಕ್‌ಸ್ಕೂಟರ್‌ಗಳ ಬಗ್ಗೆ ವಿಮರ್ಶಿಸುವುದಾದರೆ ಮೊದಮೊದಲು ಕೆಲವೊಂದು ಕಂಪನಿಗಳು ಮಾತ್ರ ಎಲೆಕ್ಟ್ರಿಕ್‌ಸ್ಕೂಟರ್‌ಗಳ ತಯಾರಿಕೆ ಮಾಡುತ್ತಿತ್ತು ಆದರೆ ಈಗ ಸುಮಾರು ಒಟ್ಟಾರೆ ಭಾರತದಲ್ಲಿ 100 ಕಂಪನಿಗಳಿಗೂ ಅಧಿಕವಾಗಿ ಎಲೆಕ್ಟ್ರಿಕ್‌ಸ್ಕೂಟರ್/ಬೈಕ್‌ಗಳು ನಿರ್ಮಾಣವಾಗುತ್ತಿದೆ.

ಕರ್ನಾಟಕದಲ್ಲಿ ಸುಮಾರು 10 ಕಂಪನಿಗಳು ಎಲೆಕ್ಟ್ರಿಕ್‌ಸ್ಕೂಟರ್ ಗಳನ್ನು ತಯಾರಿಸುತ್ತಿವೆ ಆದರೆ ಎಲೆಕ್ಟ್ರಿಕ್‌ಬೈಕ್ ಗಳನ್ನು ಕೆಲವೊಂದು ಕಂಪನಿಗಳು ಮಾತ್ರ ತಯಾರುಮಾಡುತ್ತಿವೆ, ಅಂಕಿ ಅಂಶಗಳ ಪ್ರಾಕಾರ 2023 ರಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ವಹಿವಾಟು 1.7 ಮಿಲಿಯನ್‌ಇದ್ದು 2024ರಲ್ಲಿ 2 ಮಿಲಿಯನ್‌ಸ್ಕೂಟರ್ಗಳು ಖರೀದಿಯಾಗಿದೆ, ಎಲೆಕ್ಟ್ರಿಕ್‌ಸ್ಕೂಟರ್‌ಗಳ ಬೆಲೆ ತುಸು ಹೆಚ್ಚಿದ್ದರು(ಸುಮಾರು 80000 ಸಾವಿರದಿಂದ ಶುರು) ಎಲೆಕ್ಟ್ರಿಕ್‌ಸ್ಕೂಟರ್‌ಗಳು ಮಾರುಕಟ್ಟಯೆಲ್ಲಿ ಜನಪ್ರಿಯವಾಗಿ ಮುನ್ನುಗ್ಗುತ್ತಿದೆ ಅದಕ್ಕೆ ಕಾರಣ ಹಲವಾರು, ಅದರಲ್ಲಿ ಪ್ರಮುಖವಾದವುಗಳೆಂದರೆ
– ಒಮ್ಮೆ ಖರೀದಿಸಿದರೆ ಸಾಕು, ಕಡಿಮೆ ನಿರ್ವಹಣಾ ವೆಚ್ಚ
-ಆರಾಮಧಾಯಕ ಡ್ರೈವಿಂಗ್
-ಶಬ್ದ ಮಾಲಿನ್ಯವಿಲ್ಲ
-ಕಡಿಮೆ ಖರ್ಚಿನಲ್ಲಿ ಹೆಚ್ಚು ದೂರ ಕ್ರಮಿಸುವಿಕೆ
ಕೆಲವೊಂದು ನಕಾರಾತ್ಮಕ ಅಂಶಗಳನ್ನು ನಾವು ನೊಡುವುದಾದರೆ
-ಬ್ಯಾಟರಿ ಚಾಲಿತವಾಗಿರುವುದಾರಿಂದ ಶಾರ್ಟ್‌ಸರ್ಕ್ಯೂಟ್ ಆಗುವ ಸಂಭವವಿದೆ
-ಬಿಸಿಲು ತಾಪಮಾನ ಹೆಚ್ಚಿರುವ ಕಡೆ ಬ್ಯಾಟರಿಗಳು ಸಿಡಿಯುವ ಸಂಭವವಿದೆ
-ಕೆಟ್ಟುಹೋದ ಬ್ಯಾಟರಿ ಬದಲಿಸಲು ಹೆಚ್ಚು ಹಣವನ್ನು ತೆರಬೇಕು
-ಒಮ್ಮೆ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್‌ಮಾಡಲು ಸುಮಾರು 3 ಘಂಟೆಯ ಸಮಯ ಹಿಡಿಯತ್ತದೆ
-ಬ್ಯಾಟರಿಯನ್ನು ಚಾರ್ಜ್‌ಮಾಡಲು ಸಮಯದ ಆಭಾವದ ಜೊತೆ ಚಾರ್ಜ್‌ಪಾಯಿಂಟ್‌ಗಳ ಕೊರತೆ ಇದೆ
-ಆದ್ದರಿಂದ ದೂರದ ಪ್ರಯಾಣ ಕಷ್ಟ
ಮಾಲಿನ್ಯದ ವಿಚಾರವನ್ನು ವಿಮರ್ಶಿಸುವುದಾದರೆ- ಎಲೆಕ್ಟ್ರಿಕ್‌ಸ್ಕೂಟರ್‌ಗಳಲ್ಲಿ ಬಳಸುವ ಬ್ಯಾಟರಿಗಳನ್ನು ಮರುಬಳಕೆ ಮಾಡುವುದರಿಂದ ಪರಿಸರಮಾಲಿನ್ಯವನ್ನು ಕಡಿಮೆಮಾಡಬಹುದು..ಹಾಗೂ ಬೈಕ್‌ಗಳ ಚಾಲನೆಯಲ್ಲಿ ವಾಯುಮಾಲಿನ್ಯದ ಅಂಶ ತುಂಬಾ ಕಡಿಮೆ ಇದೆ ಎಂದು ಅಧ್ಯಯನದಲ್ಲಿ ತಿಳಿದಿದೆ.
ಇನ್ನೂ ಎಲೆಕ್ಟ್ರಿಕ್ ಕಾರುಗಳ ಬಗ್ಗೆ ತಿಳಿಯುವುದಾದರೆ, ಎಲೆಕ್ಟ್ರಿಕ್‌ಕಾರುಗಳು ಸಹ ಬ್ಯಾಟರಿ ಚಾಲಿತವಾಗಿವೆ, ಪೆಟ್ರೋಲ್/ಗ್ಯಾಸೋಲಿನ್‌ಕಾರುಗಳನ್ನು ತಯಾರುಮಾಡುತ್ತಿರುವ ಎಲ್ಲ ಕಂಪನಿಗಳು ಸದ್ಯ ಎಲೆಕ್ಟ್ರಿಕ್‌ಕಾರುಗಳನ್ನು ತಯಾರು ಮಾಡುತ್ತಿವೆ, ಒಮ್ಮೆ ಬ್ಯಾಟರಿಯನ್ನು ಚಾರ್ಜ್‌ಮಾಡಿದರೆ ಸುಮಾರು 250-300 ಕಿ.ಮೀ ತನಕ ಚಾಲನೆ ಮಾಡಬಹುದು.

ಆದರೆ ಎಲೆಕ್ಟ್ರಿಕ್‌ಬೈಕ್‌ಗಳಂತೆ ಎಲೆಕ್ಟ್ರಿಕ್‌ಕಾರುಗಳು ಸಹ ಬೆಲೆಯಲ್ಲಿ ಹೆಚ್ಚಿದ್ದು ಸರಾಸರಿ 200 ಕಿ.ಮೀ ಕ್ರಮಿಸುವ ಒಂದು ಕಾರಿನ ಬೆಲೆ ಸುಮಾರು 11ಲಕ್ಷವಾಗುತ್ತದೆ,
– ಒಮ್ಮೆ ಖರೀದಿಸಿದರೆ ಸಾಕು, ಕಡಿಮೆ ನಿರ್ವಹಣಾ ಮೊತ್ತ
-ಆರಾಮಧಾಯಕ ಡ್ರೈವಿಂಗ್
-ಶಬ್ದ ಮಾಲಿನ್ಯವಿಲ್ಲ
ಕೆಲವೊಂದು ನಕಾರಾತ್ಮಕ ಅಂಶಗಳನ್ನು ನಾವು ನೊಡುವುದಾದರೆ
-ಖರೀದಿ ಮಾಡುವ ಬೆಲೆ ಬಲು ದುಬಾರಿ..!

-ಪೆಟ್ರೋಲ್/ಗ್ಯಾಸೋಲಿನ್‌ಕಾರುಗಳಂತೆ ಬಿಸಿಲಿನಲ್ಲಿ ಎಸಿಯ ಬಳಕೆ ಹೆಚ್ಚು ಸಾಧ್ಯವಿಲ್ಲ
-ಒಮ್ಮೆ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್‌ಮಾಡಲು ಸುಮಾರು 1ಘಂಟೆಯಿಂದ-15ಘಂಟೆಯ ತನಕ ಸಮಯ ಹಿಡಿಯತ್ತದೆ
-ಬ್ಯಾಟರಿಯನ್ನು ಚಾರ್ಜ್‌ಮಾಡಲು ಸಮಯದ ಆಭಾವದ ಜೊತೆ ಚಾರ್ಜ್‌ಪಾಯಿಂಟ್‌ಗಳ ಕೊರತೆ ಇದೆ
– ದೂರದ ಪ್ರಯಾಣ ಕಷ್ಟ
ಆದ್ದರಿಂದ ಮದ್ಯಮವರ್ಗದವರಿಗೆ ಈ ಕಾರುಗಳು ಕೈಗೆ ಎಟುಕದ ದ್ರಾಕ್ಷಿಯಾಗಿದೆ ಆದರೆ ವಾಣಿಜ್ಯ ಕ್ಷೇತ್ರದಲ್ಲಿ ಅದರಲ್ಲೂ ನಗರದ ಪ್ರದೇಶದಲ್ಲಿ ಎಲೆಕ್ಟ್ರಿಕ್‌ಟ್ಯಾಕ್ಸಿಗಳ ಬಳಕೆ ಹೆಚ್ಚುತ್ತಲೆ ಇದೆ.
ಮಾಲಿನ್ಯದ ವಿಷಯವನ್ನು ವಿಮರ್ಶಿಸುವುದಾದರೆ ಎಲೆಕ್ಟ್ರಿಕ್‌ಕಾರ್‌ಗಳಲ್ಲಿ “ಪಾರ್ಟಿಕಲ್‌ಪೊಲ್ಯೂಶನ್” ಎಂಬ ಮಾಲಿನ್ಯ ಕಾರಕ ಇದೆ ಎಂಬುದು ಬೆಳಕಿಗೆ ಬಂದಿದೆ, “ಪಾರ್ಟಿಕಲ್‌ಪೊಲ್ಯೂಶನ್” ಎಂದರೆ ಕಾರಿನ ಚಲಿಸುವಿಕೆಯ ಪರಿಣಾಮ ಬ್ರೇಕ್‌ಮತ್ತು ಟೈರ್‌ನ ಬಳಸುವಿಕೆಯಿಂದ ಬಿಡುಗಡೆಗೊಳ್ಳುವ ದ್ರವ ರೂಪದ ಸಣ್ಣ ಕಣಗಳು, ಗಾಳಿಯಲ್ಲಿರುವ ಸಣ್ಣ ಕಣಗಳ ಜೊತೆ ಮಿಶ್ರಣ ಹೊಂದಿ ಪರಿಸರಕ್ಕೆ ಸೇರುವ ಕ್ರಿಯೆಯನ್ನು “ಪಾರ್ಟಿಕಲ್‌ಪೊಲ್ಯೂಶನ್” ಎನ್ನಬಹುದು, ಇದರಿಂದ ಮಾನವನಿಗೆ ಆಸ್ತಮ, ಕ್ಯಾನ್ಸರ್, ಶ್ವಾಸಕೋಶ ತೊಂದರೆಗಳು ಬರುವ ಸಾದ್ಯತೆ ಇದೆ, ಹಾಗೂ ಎಂದು ಒಂದು ಅಧ್ಯಯನದ ಪ್ರಾಕಾರ 1850 ಪಟ್ಟು ಎಲೆಕ್ಟ್ರಿಕ್‌ಕಾರ್‌ಗಳಲ್ಲಿ “ಪಾರ್ಟಿಕಲ್‌ಪೊಲ್ಯೂಶನ್” ಬಿಡುಗಡೆ ಗೊಳ್ಳುತ್ತವೆ ಎಂದು ಅಧ್ಯಯನ ವರದಿ ಮಾಡಿದೆ, ಹೀಗೆ ಹಲವಾರು ಸಾಧಕ-ಭಾದಕಗಳ ನಡುವೆಯೂ ಎಲೆಕ್ಟ್ರಿಕ್‌ಕಾರು ನಿಧಾನವಾಗಿ ತನ್ನ ಸಾಮ್ರಾಜ್ಯವನ್ನು ಸ್ತಾಪಿಸುತ್ತಿದೆ.
ಗಿರೀಶ್ ವಸಿಷ್ಟ ಬಿ,ಎಸ್
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿ