ಬೆಳಗಾವಿಯಲ್ಲಿ ʼಕಾಂಗ್ರೆಸ್ ಅಧಿವೇಶನದʼ ಶತಮಾನೋತಸ್ವ..!
![](https://akeynews.com/wp-content/uploads/2024/12/ಶತಮಾನೋತ್ಸವಕ್ಕೆ-ʼಕೈʼ-ರೆಡಿ-780x470.png)
1924 ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಗುರುತಾಗಿ, ಕಾಂಗ್ರೆಸ್ ಪಕ್ಷ ಡಿ.26 ಮತ್ತು 27 ರಂದು ಬೆಳಗಾವಿಯಲ್ಲಿ ಶತಮಾನೋತ್ಸವ ಆಚರಿಸಲಿದೆ. ಎರಡು ದಿನಗಳ ಶತಮಾನೋತ್ಸವ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಗಣ್ಯರ ಮೂಲಕ ಚಾಲನೆ ದೊರೆಯಲಿದೆ. ಮೊದಲ ದಿನ ಡಿ.26 ರಂದು ಕಾಂಗ್ರೆಸ್ ಕಾರ್ಯಕಾರಣಿ ಸಭೆ ಮತ್ತು ಡಿ.27 ರಂದು ಸಾರ್ವಜನಿಕ ಸಮಾವೇಶ ನಡೆಯಲಿದೆ. ಈ ಕಾರ್ಯಕ್ರಮವನ್ನು ತುಂಬಾ ಅದ್ಧೂರಿಯಾಗಿ ಮತ್ತು ವ್ಯವಸ್ಥಿತವಾಗಿ ನಡೆಸಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶತಮಾನೋತ್ಸವ ಸಮಾರಂಭಕ್ಕೆ ಸಂಬಂಸಿದಂತೆ, ಸಚಿವರು ಮತ್ತು ಸಂಸತ್ ಸದಸ್ಯರನ್ನು ಒಳಗೊಂಡ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಈ ಪರಿಶೀಲನಾ ಸಭೆಯಲ್ಲಿ ಸಿದ್ದರಾಮಯ್ಯ ಸೂಚನೆಗಳನ್ನು ನೀಡಿದ್ದಾರೆ. ಶತಮಾನೋತ್ಸವಕ್ಕೆ ರಾಷ್ಟ್ರದ ಎಲ್ಲ ಕಡೆಯಿಂದ ಗಣ್ಯರು ಮತ್ತು ಸಂಸದರು ಆಗಮಿಸಲಿದ್ದಾರೆ. ಅವರಿಗೆ ವಸತಿ, ಊಟದ ವ್ಯವಸ್ಥೆ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸುವುದಕ್ಕೆ ಸಮಿತಿಗಳಿಗೆ ಜವಾಬ್ದಾರಿಯನ್ನು ವಹಿಸಲಾಗಿದೆ. ಡಿ27 ರಂದು ಸುವರ್ಣಸೌಧದ ಆವರಣದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಅನಾವರಣ ನೆರವೇರಲಿದೆ. ಈ ದಿನವೇ ಹಲವು ಸ್ವಾತಂತ್ರ್ಯ ಹೋರಾಟಗಾರರನ್ನು ಕಾರ್ಯಕ್ರಮಕ್ಕೆ ಅಹ್ವಾನಿಸುವ ಬಗ್ಗೆ ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
![](https://akeynews.com/wp-content/uploads/2024/12/9727_23_12_2024_18_52_14_1_24BGMDKSSURJEGANDHI1-1024x576.jpeg)
1924ರ ಅಧಿವೇಶನದಲ್ಲಿ “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ಹಾಡನ್ನು ಮೊದಲನೇ ಬಾರಿಗೆ ಗಂಗೂಬಾಯಿ ಹಾನಗಲ್ ಹಾಡಿದ್ದರು. ಈಗ ಆ ಅಧಿವೇಶನದ ಜೊತೆಗೆ ಹಾಡಿಗೂ ನೂರು ವರ್ಷಗಳಾಗಿವೆ, ಈ ಹಿನ್ನೆಲೆಯಲ್ಲಿ ಈ ಹಾಡನ್ನು ಶತಮಾನೋತ್ಸವ ಆಚರಣೆಯಲ್ಲಿ ಮತ್ತೆ ಹಾಡಿಸುವ ಸಾಧ್ಯತೆಗಳಿವೆ. ಮಹಾತ್ಮ ಗಾಂಧಿ ಅಧ್ಯಕ್ಷತೆಯ ಬೆಳಗಾವಿ ಅಧಿವೇಶನದಲ್ಲಿ, ಅವರು ಕರ್ನಾಟಕ ಏಕೀಕರಣದ ಪರ ಬಲವಾದ ದನಿ ಎತ್ತಿದ್ದರು, ಇದರಿಂದ ಈ ಸಮಾವೇಶ ಕನ್ನಡಿಗರಿಗೂ ತುಂಬ ಮಹತ್ವದ್ದಾಗಿದೆ. ಶತಮಾನೋತ್ಸವದ ಅಂಗವಾಗಿ ವರ್ಷವಿಡೀ “ಗಾಂಧಿ ಭಾರತ” ಹೆಸರಿನಲ್ಲೇ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದ್ದಾರೆ.
ಬೆಳಗಾವಿ ನಗರದ ಪ್ರಮುಖ 32 ಕಿಮೀ ಉದ್ದದ ರಸ್ತೆ ಹಾಗೂ 30 ವೃತ್ತಗಳಲ್ಲಿ ದೀಪಾಲಂಕಾರ ಮಾಡಲಾಗುತ್ತಿದೆ. 2.1 ಕಿಮೀ ಉದ್ದದ ರಸ್ತೆಯಲ್ಲಿ ಶತಮಾನೋತ್ಸವದ ಸ್ಮಾರಕವಾಗಿ ತಾತ್ಕಾಲಿಕ ವಿರೂಪಾಕ್ಷ ಗೋಪುರವನ್ನು ನಿರ್ಮಾಣ ಕಾರ್ಯ ನಡೆಯುತ್ತಿದೆ.
ಸುವರ್ಣ ಸೌಧದಲ್ಲಿ ಕಾಂಗ್ರೆಸ್ ಅಧಿವೇಶನ, ಸ್ವಾತಂತ್ರ್ಯ ಚಳವಳಿಯನ್ನು ಪ್ರತಿಬಿಂಬಿಸುವ ಚಿತ್ರ ಗ್ಯಾಲರಿ ನಿರ್ಮಾಣವಾಗಲಿದೆ. ಶತಮಾನೋತ್ಸವದ ನೆನಪಾಗಿ ವಿಶೇಷ ಪ್ಯಾಂಪ್ಲೆಟ್ ಬಿಡುಗಡೆ, ವರ್ಷವಿಡೀ ಶಾಲೆಗಳಲ್ಲಿ “ಗಾಂಧಿ ಭಾರತ“ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಕಳಲ್ಲಿ ಗಾಂಧಿ ಅವರ ವಿಚಾರಧಾರೆ ಬಗ್ಗೆ ಅರಿವು ಮೂಡಿಸಲು ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತದೆ.
ಧನ್ಯಾ ರೆಡ್ಡಿ
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ