Alma Corner

“ಮಜಾ ಟಾಕೀಸ್” ರಿಯಾಲಿಟಿ ಶೋ ಮತ್ತೆ ಪ್ರೇಕ್ಷಕರ ಮುಂದೆ !!

ಸತತ 10 ವರ್ಷಗಳ ಕಾಲ ಪ್ರೇಕ್ಷಕರನ್ನು ರಂಜಿಸಿದ್ದ ಕನ್ನಡದ ರಿಯಾಲಿಟಿ ಶೋ ‘ಮಜಾ ಟಾಕೀಸ್ ‘ ಹೊಸ ಆವೃತ್ತಿ ಆರಂಭವಾಗಲಿದೆ. ಈ ಮೂಲಕ ನಟ, ಟಾಕಿಂಗ್ ಸ್ಟಾರ್ ಸೃಜನ್ ಅವರು ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.
ಈಗಾಗಲೇ ಮಜಾ ‘ಟಾಕೀಸ್ ರಿಯಾಲಿಟಿ’ಶೋ 10 ವರ್ಷ ಪೂರೈಸಿದ್ದು, ಮತ್ತೆ ಕಾಮಿಡಿ ಶೋ ಆರಂಭಿಸುವುದಾಗಿ ಖುದ್ದು ನಟ ಸೃಜನ್ ಲೋಕೇಶ್ ಅಧಿಕೃತ ಮಾಹಿತಿ ನೀಡಿದ್ದಾರೆ.
ಕಲರ್ಸ್ ಕನ್ನಡ ಅಫೀಶಿಯಲ್ ಇನ್ಸ್‌ಟಾಗ್ರಾಮ್‌ನಲ್ಲಿ ‘ಮಜಾ ಟಾಕೀಸ್’ ಪ್ರೊಮೋ ಹಂಚಿಕೊಳ್ಳಲಾಗಿದ್ದು ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ.

ಈ11 ಶೋನಲ್ಲಿ ಯಾವೆಲ್ಲ ಕಲಾವಿದರು ಇರಲಿದ್ದಾರೆ ?
2015ರಲ್ಲಿ ಶೋ ಶುರುವಾದಾಗಿನಿಂದ ಇಲ್ಲಿಯವರೆಗೆ ನಟ ಸೃಜನ್ ಲೋಕೇಶ್ ಅವರೊಂದಿಗೆ ನಟಿ ಶ್ವೇತಾ ಚೆಂಗಪ್ಪ , ಅಪರ್ಣಾ, ಪೂಜಾ ಲೋಕೇಶ್, ಮಂಡ್ಯ ರಮೇಶ್, ವಿ.ಮನೋಹರ್, ಮಿಮಿಕ್ರಿ ದಯಾನಂದ್, ಕುರಿ ಪ್ರತಾಪ್ ಹೀಗೆ ಅನೇಕ ಸ್ಯಾಂಡಲ್‌ವುಡ್ ಕಲಾವಿದರ ದಂಡ ಇತ್ತು. ಈ ಬಾರಿಯು ಇದೇ ತಂಡ ಮುಂದುವರಿಯಲಿದೆ. ಅದರೆ ಈ ಬಾರಿ ನಟಿ, ಅಚ್ಚಕನ್ನಡದ ನಿರೂಪಕಿ ಅಪರ್ಣಾ ಅವರು ಇರುವುದಿಲ್ಲ ಎಂಬುದೇ ಅಭಿಮಾನಿಗಳಿಗೆ ದುಃಖದ ವಿಷಯವಾಗಿದೆ. ಅನಾರೋಗ್ಯದಿಂದ ನಿಧನರಾದ ನಟಿ ಅಪರ್ಣಾ ಅವರು ಇದೇ ಮಜಾ ಟಾಕೀಸ್ ಕಾಮಿಡಿ ಶೋನಲ್ಲಿ ಜಾಗ ಪಡೆದಿದ್ದರು. ಅಭಿಮಾನಿಗಳನ್ನು ನಗಿಸುವಲ್ಲಿ ಯಶಸ್ವಿಯಾಗಿದ್ದರು. ಜನರ ಮನಸ್ಸಿನಲ್ಲಿ ಧ್ವನಿಯಾಗಿ ಉಳಿದಿರುವ ಅಪರ್ಣಾ ಅವರು ಇಲ್ಲ ಎಂಬುದೇ ನಿಜಕ್ಕೂ ಬೇಸರ ತರಿಸಿದೆ. ಈಗ ಅವರ ಜಾಗ ಯಾರು ತುಂಬುತ್ತಾರೆ ಎಂದು ಕರ್ನಾಟಕದ ಜನತೆ ಕುತೂಹಲದಿಂದ ಕಾಯುತ್ತಿದ್ದಾರೆ.

ಗೌತಮಿ . M

ಆಲ್ಮ ಮೀಡಿಯಾ ವಿದ್ಯಾರ್ಥಿನಿ

Show More

Leave a Reply

Your email address will not be published. Required fields are marked *

Related Articles

Back to top button