Alma Corner

ಮೊದಲ ಬಜೆಟ್‌ ಮಂಡಿಸಿದ ದೆಹಲಿ ಸಿಎಂ ರೇಖಾ ಗುಪ್ತಾ

ದೆಹಲಿ ಸಿಎಂ ಕುರ್ಚಿ ಎಂದಾಕ್ಷಣ ದೇಶಕ್ಕೆ ನೆನಪು ಬರುವುದೇ (ಎಪಿಪಿ) ಪಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಅರವಿಂದ್ ಕ್ರೇಜಿವಾಲ್‌, ಆದರೆ ಕಳೆದ ದೆಹಲಿ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ ಬಿಜೆಪಿ, ದೆಹಲಿಯಲ್ಲಿ ರೇಖಾಗುಪ್ತಾ ಅವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಿದೆ, ಆದಕಾರಣ ಸಿಎಂ ರೇಖಾ ಗುಪ್ತಾ  ಅವರು 2025 – 26 ನೇ ಸಾಲಿನ ಬಜೆಟ್ ಅನ್ನು ಮಂಡಿಸಿದರು. ಬಜೆಟ್ ನ ಕೆಲವು ಅಂಶಗಳು ಈ ಕೆಳಗಿನಂತಿದೆ.

       ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು 2025-26ನೇ ಸಾಲಿನ 1ಲಕ್ಷ ಕೋಟಿ ರೂಪಾಯಿ ಬಜೆಟ್‌ ಮಂಡಿಸಿದ್ದಾರೆ. ಇದು ರಾಷ್ಟ ರಾಜಧಾನಿ ಅಭಿವೃದ್ಧಿಗೆ  ದೂರದೃಷ್ಟಿಯ ಬಜೆಟ್‌ ಆಗಿದೆ ಎಂದು ಹೇಳಿದರು.ಹಣಕಾಸು ಖಾತೆಯನ್ನೂ ಹೊಂದಿರುವ ಶ್ರೀಮತಿ ಗುಪ್ತಾ ಅವರು ತಮ್ಮ 138 ನಿಮಿಷಗಳ ಭಾಷಣವನ್ನು,  ಬಿಜೆಪಿ ನೇತೃತ್ವದ ದೆಹಲಿ ಸರ್ಕಾರದ ಚೊಚ್ಚಲ ಬಜೆಟ್ ಅನ್ನು “ಐತಿಹಾಸಿಕ” ಎಂದು ಕರೆದರು, “ಭ್ರಷ್ಟಾಚಾರ ಮತ್ತು ಅದಕ್ಷತೆಯ” ದಿನಗಳು ಈಗ ಮುಗಿದಿ̧ವೆ ಬಜೆಟ್‌ ನಲ್ಲಿ ಬಂಡವಾಳ ವೆಚ್ಚ 28,000 ಕೋಟಿ ರೂಪಾಯಿಗಳಿಗೆ ತಲುಪಿದೆ.ಎಂದು ಸಿ ಎಂ ರೇಖಾ ಗುಪ್ತಾ ಹೇಳಿದ್ದಾರೆ.

ಕಳೆದ ತಿಂಗಳು ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಮ್‌ ಆದ್ಮಿ (ಎಎಪಿ) ವಿರುದ್ಧ ಜಯಗಳಿಸಿದ ನಂತರ, 26 ವರ್ಷಗಳ ನಂತರ  ದೆಹಲಿಯಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ಮೊದಲ  ಬಜೆಟ್‌ ಇದಾಗಿದೆ.

ಈ ಬಾರಿ 1 ಲಕ್ಷ ಕೋಟಿ ರೂಪಾಯಿಗಳ  ಬಜೆಟ್‌ ಮಂಡಿಸಲಾಗುತ್ತಿದೆ. ಕಳೆದ  ಬಜೆಟ್‌ ಗಿಂತ ಶೇ31.5 ರಷ್ಟು ಹೆಚ್ಚಾಗಿದೆ. ಇದು ಶ್ರೇಷ್ಟ ಬಜೆಟ್‌ ಎಂದು ಸಿಎಂ ರೇಖಾ ಗುಪ್ತಾ  ವಿಧಾನಸಭೆಯಲ್ಲಿ ಬಜೆಟ್‌ ಮಂಡಿಸುತ್ತಾ ಹೇಳಿದರು. ರಸ್ತೆಗಳು ಒಳಚರಂಡಿ ವ್ಯವಸ್ಧೆಗಳು, ಮತ್ತು ನೀರು ಸರಬರಾಜು ಸೇರಿದಂತೆ ಮೂಲಸೌಕರ್ಯ ಅಭಿವೃದ್ದಿಯತ್ತ ಸರ್ಕಾರದ ಯೋಜನೆಗಳನ್ನು ಕೇಂದ್ರೀಕರಿಸಲಾಗುವುದು ಎಂದು ಸಿಎಂ ರೇಖಾ ಅವರು ವಿಧಾನಸಭೆಯಲ್ಲಿ ಹೇಳಿದರು.

    2025-26 ನೇ ಸಾಲಿನ ಪ್ರಮುಖ ಬಜೆಟ್:‌    ಮೂಲಸೌಕರ್ಯ ಯೋಜನಗಳಿಗೆ 28.000 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ.  ಇದು ಹಿಂದಿನ ವರ್ಷದ ವೆಚ್ಚಕ್ಕಿಂತ ದುಪ್ಪಟ್ಟಾಗಿದೆ. ಈ ಹೆಚ್ಚಿನ ಹೂಡಿಕೆಯನ್ನು ರಸ್ತೆಗಳು, ಒಳಚರಂಡಿ ವ್ಯವಸ್ಧೆಗಳು ಮತ್ತು ನೀರು ಸರಬರಾಜಿನ ಅಭಿವೃದ್ಧಿಗೆ   ನೀಡಲಾಗಿದೆ.

 * ಹೆಚ್ಚುವರಿಯಾಗಿ, ದೆಹಲಿ ಮತ್ತು ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು(ncr) ನಡುವಿನ  ಸಾರಿಗೆ ಸಂಪರ್ಕವನ್ನು ಸುಧಾರಿಸಲು 1.000 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.

*ಸರ್ಕಾರವು ಅರ್ಹ ಮಹಿಳೆಯರಿಗೆ ತಿಂಗಳಿಗೆ 2.500 ರೂ.ಗಳನ್ನು ನಿಗದಿಪಡಿಸಿದೆ, ಇದು ಸಾಮಾಜಿಕ ಬೆಂಬಲ ಉಪಕ್ರಮಗಳಿಗೆ ತನ್ನ ಬದ್ಧತೆಯನ್ನು ಬಲಪಡಿಸುತ್ತದೆ.

*ರಾಜ್ಯಧಾನಿಯಲ್ಲಿ ವೈದ್ಯಕೀಯ ಸೇವೆಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಗೆ 2.144 ಕೋಟಿ ರೂಗಳನ್ನು ಮೀಸಲಿಡುವ ಮೂಲಕ ಆರೋಗ್ಯ ಕ್ಷೇತ್ರಕ್ಕೆ ಉತ್ತೇಜನ ನೀಡಲಾಗಿದೆ.

*ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯಕ್ಕೂ ಅಗತ್ಯ ನೀಡಿದ್ದು ,ಈ ಅಗತ್ಯ ಸೇವೆಗಳನ್ನು ಸುಧಾರಿಸಲು 9.000 ಕೋಟಿ ರೂಗಳನ್ನು ನಿಗದಿಪಡಿಸಲಾಗಿದೆ.

*ವ್ಯವಹಾರ ಮತ್ತು ಹೂಡಿಕೆಯನ್ನು ಬೆಂಬಲಿಸಲು, ವ್ಯಾಪಾರಿಗಳ ಕಲ್ಯಾಣ ಮಂಡಳಿʼʼ ರಚನೆಯನ್ನು ಘೋಷಿಸಿದರು ಮತ್ತು ಹೂಡಿಕೆದಾರರನ್ನು ಆಕರ್ಷಿಸಲು ಮತ್ತು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಪ್ರತಿ ಎರಡು ವರ್ಷಗಳಿಗೊಮ್ಮೆ ʼಜಾಗೃತಿಕ ಹೂಡಿಕೆ ಶೃಂಗಸಭೆʼ ನಡೆಸಲಾಗುವು ಎಂದು ಹೇಳಿದರು.

*2026ರ ಹಣಕಾಸು ವರ್ಷದ ಬಜೆಟ್‌ನಲ್ಲಿ ಒಳಚರಂಡಿ ಸಂಸ್ಕರಣಾ ಘಟಕಗಳ( ಎಸ್‌ಟಿಪಿ )ದುರಸ್ತಿ ಮತ್ತು ನವೀನಕರಣಕ್ಕಾಗಿ 500 ಕೋಟಿ ರೂ ಮತ್ತು ಹಳೆಯ ಒಳಚರಂಡಿ ಮಾರ್ಗಗಳನ್ನು ಬದಲಾಯಿಸಲು 250 ಕೋಟಿ ರೂಗಳನ್ನು ನಿಗದಿಪಡಿಸಲಾಗಿದೆ.

* ಅಂತರಾಷ್ಟ್ರೀಯ ಚಲನಚಿತ್ರೋತ್ಸವ ವನ್ನು ಆಯೋಜಿಸಲಿದ್ದು, ಇದಕ್ಕಾಗಿ ಬಜೆಟ್ ನಲ್ಲಿ 30 ಕೋಟಿ ರೂ.ಗಳನ್ನು ಮೀಸಲಿಡಲಾಗುವುದು.

* ಸರ್ಕಾರವು ಸಾರಿಗೆ ಅಭಿವೃದ್ಧಿಗಾಗಿ 12.952 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ.

 * ಇದಲ್ಲದೆ ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕಾಗಿ ದುರುಪಯೋಗವನ್ನು ತಡೆಗಟ್ಟಲು ಸರ್ಕಾರವು ಗುಲಾಬಿ ಟಿಕೆಟ್ ಗಳನ್ನು ಸ್ಮಾರ್ಟ್ ಕಾರ್ಡಳೊಂದಿಗೆ ಬದಲಾಯಿಸಲಾಗಿದೆ ಎಂದು  ತಿಳಿಸಿದ್ದಾರೆ.

 * ಅಲ್ಲದೆ ಮಾಲಿನ್ಯವನ್ನು ನಿಭಾಯಿಸಲು 300 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ, ಜೊತೆಗೆ ಪರಿಸರ ಮತ್ತು ಅರಣ್ಯ ಇಲಾಖೆಗೆ ಹೆಚ್ಚುವರಿಯಾಗಿ 506 ಕೋಟಿ ರೂಗಳನ್ನು ಮೀಸಲಿಡಲಾಗಿದೆ.

 * ದೆಹಲಿ ಸರ್ಕಾರವು ಮಹಾನಗರ ಪಾಲಿಕೆಗೆ 6.897 ಕೋಟಿ ರೂಗಳನ್ನು ಮಂಜೂರು ಮಾಡಲಾಗಿದೆ.

* ಓರ್ವರ್ಹೆಡ್‌  ವಿದ್ಯುತ್ ತಂತಿಗಳನ್ನು ತೆಗೆದುಹಾಕಲು ಮತ್ತು ಹೈಟೆನ್ಷನ್ ವಿದ್ಯುತ್ ತಂತಿಗಳನ್ನು ಬದಲಾಯಿಸಲು ಪೈಲಟ್ ಯೋಜನೆಗಾಗಿ 100 ಕೋಟಿ‌ ರೂ.ಗಳನ್ನು ಮೀಸಲಿಡಲಾಗಿದೆ.

ಇದರೊಂದಿಗೆ ಮೂಲಭೂತ ಸೌಕರ್ಯ ಹಾಗೂ ಸಾರಿಗೆ , ಶಿಕ್ಷಣ, ಎಲ್ಲ ಕ್ಷೇತ್ರಗಳಿಗೂ ಈ ಬಜೆಟ್‌  ಮಹತ್ವದಾಗಿದ.

ಸಂಗೀತ ಎಸ್

ಆಲ್ಮಾ ನ್ಯೂಸ್ ವಿದ್ಯಾರ್ಥಿನಿ

Show More

Related Articles

Leave a Reply

Your email address will not be published. Required fields are marked *

Back to top button