ರಾಜ್ಯದಲ್ಲಿ ಹಾಲು, ವಿದ್ಯುತ್ ದರ ಬಳಿಕ ಮತ್ತೊಂದು ದರ ಏರಿಕೆ ?

ಹಾಲಿನ ದರ ಏರಿಕೆ ಮಾಡಿದ್ದಾಯ್ತು, ಕಸ ಸಂಗ್ರಹಣ ಮೇಲೆ ತೆರಿಗೆ ಹಾಕಿದ್ದಾಯ್ತು, ಈಗ ಏಕಾಏಕಿ ಡೀಸಲ್ ಬೆಲೆಯನ್ನು ಲೀಟರ್ ಗೆ 2 ರೂಪಾಯಿ ಏರಿಕೆ ಮಾಡಿದೆ ಈ ಸರ್ಕಾರ. ಡೀಸಲ್ ಹೆಚ್ಚಾದರೆ ಕ್ರಮೇಣ ಹಾಲು, ತರಕಾರಿ, ಹಣ್ಣು , ದಿನಸಿ, ಟ್ಯಾಕ್ಸಿ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಸೇವೆಗಳ ಬೆಲೆ ಕೂಡ ಹೆಚ್ಚಾಗುತ್ತವೆ.

ಹಾಲು, ವಿದ್ಯುತ್ ದರ ಏರಿಕೆ ಬೆನ್ನಲ್ಲೇ ಪ್ರತಿ ಲೀಟರ್ ಡೀಸಲ್ ದರ 2 ರೂ. ಹೆಚ್ಚಳವಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಪಟ್ಟಿಗೆ ಈಗ ಡೀಸಲ್ ಹೊಸದಾಗಿ ಸೇರ್ಪಡೆಯಾಗಿದೆ. ರಾಜ್ಯ ಸರ್ಕಾರವು ಪ್ರತಿ ಲೀಟರ್ ಡೀಸಲ್ ಮೇಲಿನ ಮಾರಾಟ ತೆರಿಗೆಯನ್ನು ಶೇ.18.44 ರಿಂದ ಶೇ21.77ಕ್ಕೆ ಏರಿಕೆ ಮಾಡಲು ಆದೇಶಿಸಿದೆ. ಬೆಂಗಳೂರಿನಲ್ಲಿ 89.02 ರೂ ಇದ್ದ ಡೀಸಲ್ ಬೆಲೆ ಇವಾಗ 91.02 ಆಗಲಿದೆ.ಉಳಿದ ಜಿಲ್ಲೆಗಳಲ್ಲಿ ಈಗಿರುವ ದರಕ್ಕೆ ಅನುಗುಣವಾಗಿ ಶೇಕಡಾ 2.73 ರಷ್ಟು ಹೆಚ್ಚಳವಾಗಲಿದೆ.
2021ರ ನವೆಂಬರ್ 4ರ ಮೊದಲು ಪ್ರತಿ ಲೀಟರ್ ಡೀಸೆಲ್ ಮೇಲೆ ರಾಜ್ಯ ಸರಕಾರ ಶೇ. 24ರಷ್ಟು ಮಾರಾಟ ತೆರಿಗೆ ವಿಧಿಸುತ್ತಿತ್ತು. ಕಳೆದ ವರ್ಷ ಜೂನ್ 15ರಂದು ಸರ್ಕಾರ ಮಾರಾಟ ತೆರಿಗೆ ದರವನ್ನು ಶೇ. 18.44ರಷ್ಟು ನಿಗದಿಪಡಿಸಿತ್ತು. ತಕ್ಷಣದಿಂದ ಜಾರಿಗೆ ಬರುವಂತೆ ಪ್ರತಿ ಲೀಟರ್ ಡೀಸೆಲ್ ಮೇಲೆ ಮಾರಾಟ ತೆರಿಗೆಯನ್ನು ಶೇ. 21.17ಕ್ಕೆ ಏರಿಕೆ ಮಾಡಿ ,ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದೆ. ರಾಜ್ಯದಲ್ಲಿ ಪ್ರತಿ ಲೀಟರ್ ಡೀಸೆಲ್ ದರ 89.02 ರೂ.ನಿಂದ 91.02 ರೂ.ಗೆ ಹೆಚ್ಚಳವಾಗಿದೆ.
ಹಾಗದಾರೆ ಡೀಸಲ್ ಬೆಲೆ ಏರಿಕೆಯಿಂದ ಯಾವುದಾರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.
ಡೀಸಲ್ ಬೆಲೆ ಏರಿಕೆಯಿಂದ ವಿವಿಧ ಸರಕುಗಳ ಸಾಗಾಟ ಹಾಗೂ ಉತ್ಪಾದನಾ ವೆಚ್ಚದಲ್ಲಿ ಏರಿಕೆಯಾಗಲಿದೆ. ಇದರಿಂದ ಹಲವಾರು ಸರಕುಗಳ ದರವೂ ಏರಿಕೆಯಾಗುವ ಸಾಧ್ಯತೆಯಿದ.ಡೀಸೆಲ್ ದರ ಹೆಚ್ಚಳದಿಂದ ಹಣ್ಣುಗಳು, ತರಕಾರಿ ಸಾಗಾಟ ದುಬಾರಿಯಾಗಲಿದೆ. ಆಹಾರ ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳ ಸಾಗಣೆ ವೆಚ್ಚ ಕೂಡ ಹೆಚ್ಚಲಿದೆ. ಅದರಲ್ಲೂ ದೂರ ದೂರುಗಳಿಗೆ ಸಾಗಾಟವಾಗುವ ವಸ್ತುಗಳಾದ, ಗೋಧಿ, ಅಕ್ಕಿ ಮತ್ತು ದ್ವಿದಳ ಧಾನ್ಯಗಳ ಬೆಲೆಯಲ್ಲಿ ಏರಿಕೆಯಾಗಬಹುದು.
ಈಗಷ್ಟೇ ಹಾಲಿನ ಉತ್ಪನ್ನಗಳ ದರ ಏರಿಕೆ ಮಾಡಲಾಗಿದೆ. ಡೀಸೆಲ್ ದರ ಏರಿಕೆಯಿಂದ ಹಾಲು, ಮೊಸರಿನಂತಹ ಉತ್ಪನ್ನಗಳ ವಿತರಣಾ ವೆಚ್ಚದಲ್ಲಿ ಹೆಚ್ಚಳವಾಗಲಿದ್ದು, ಮತ್ತೆ ಸಾಗಾಟ ವೆಚ್ಚ ಹೆಚ್ಚಾಗಿದೆ . ಒಟ್ಟಿನಲ್ಲಿ ಇತ್ತಿಚ್ಚಿನ ದಿನಗಳಲ್ಲಿ ಹೆಚ್ಚಿತ್ತಿರುವ ಸಾರಿಗೆ, ಹಾಲು, ವಿದ್ಯುತ್, ಡೀಸೆಲ್ ದರದಿಂದ ಬಡವರು ಮತ್ತು ಮದ್ಯಮ ವರ್ಗದವರು ಪರದಾಡುವಂತಾಗಿದೆ. ಸರ್ಕಾರ ಬಡವರ ಮತ್ತು ಮದ್ಯಮ ವರ್ಗದವರ ಬಗ್ಗೆ ಗಮನ ಹರಿಸಿ ದರ ಪರಿಷ್ಕರಣೆಯ ಬಗ್ಗೆ ಮತ್ತೊಮ್ಮೆ ಅಲೋಚಿಸಬೇಕು.
ಸಂಗೀತ ಎಸ್
ಆಲ್ಮಾ ನ್ಯೂಸ್ ವಿದ್ಯಾರ್ಥಿನಿ