India
ರಾಷ್ಟ್ರಪತಿ ಭವನದಲ್ಲಿ ಅರ್ಧಕ್ಕೆ ಹಾರಿದ ರಾಷ್ಟ್ರಧ್ವಜ.

ದೆಹಲಿ: ಭಾರತದ ರಾಷ್ಟ್ರಪತಿ ಭವನದ ಗೋಪುರದ ಮೇಲೆ ಸದಾ ರಾರಾಜಿಸುತ್ತಿರುವ ರಾಷ್ಟ್ರಧ್ವಜ ನಿನ್ನೆ ಅರ್ಧಕ್ಕೆ ಹಾರಾಡಿದೆ. ಇರಾನ್ ದೇಶದ ಅಧ್ಯಕ್ಷರಾಗಿದ್ದ ಇಬ್ರಾಹಿಂ ರೈಸಿ ಹಾಗೂ ಇರಾನ್ ವಿದೇಶಾಂಗ ಸಚಿವರಿಗೆ ಸಂತಾಪ ಸೂಚಿಸುವ ಸಲುವಾಗಿ, ಈ ರೀತಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಯಿತು ಎಂದು ತಿಳಿದುಬಂದಿದೆ.
ಇರಾನ್ ಹಾಗೂ ಭಾರತದ ಸಂಬಂಧ ಪ್ರಾಚೀನ ಕಾಲದಿಂದಲೂ ಕೂಡ ಮುಂದುವರೆದುಕೊಂಡು ಬಂದಿದೆ. ಇರಾನ್ ಹಾಗೂ ಭಾರತ ಜಂಟಿಯಾಗಿ ನಿರ್ಮಿಸಿದ ಚಬಹಾರ್ ಬಂದರು, ಹಾಗೆ ಮಧ್ಯ ಏಷ್ಯಾ ಕೆ ಸಂಪರ್ಕವನ್ನು ಕಲ್ಪಿಸುವಂತಹ ಕಾರಿಡಾರ್ಗಳ ನಿರ್ಮಾಣ ಯೋಜನೆಗಳು ಪ್ರಸ್ತುತ ಇರಾನ್ ಹಾಗೂ ಭಾರತದ ನಿಕಟ ಸಂಬಂಧಕ್ಕೆ ಹಿಡಿದ ಕೈಕನ್ನಡಿಯಂತೆ ಆಗಿದೆ.
ಮಧ್ಯ ಏಷ್ಯಾ ಜೊತೆ ಸುಲಭದ ಸಂಪರ್ಕ ಹೊಂದಲು, ಪಾಕಿಸ್ತಾನವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು, ಬಲೂಚಿಸ್ತಾನದಲ್ಲಿ ಹೆಚ್ಚಾಗುತ್ತಿರುವ ಚೀನಾದ ಪ್ರಾಬಲ್ಯವನ್ನು ಕುಗ್ಗಿಸಲು, ಇರಾನ್ ಒಂದು ‘ಸ್ಟ್ರಾಟೆಜಿಕ್ ಪಾರ್ಟ್ನರ್’ ಆಗಿದೆ.