ಉದ್ಯಮ ಗುರು ರತನ್ ಟಾಟಾ ವಿಧಿವಶ: ಕಲಿಯುಗದ ಕರ್ಣನಿಗೆ ಕಣ್ಣೀರಿನ ವಿದಾಯ..!

ಮುಂಬೈ: ಭಾರತದ ಉದ್ಯಮ ಲೋಕದ ದಿಗ್ಗಜ, ರತನ್ ಟಾಟಾ (86), ಬುಧವಾರ ಮುಂಬೈನ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರು ಗಂಭೀರ ಸ್ಥಿತಿಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ವಯೋಸಹಜ ಆರೋಗ್ಯ ಸಮಸ್ಯೆಗಳ ಕಾರಣದಿಂದ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಸೋಮವಾರ ಅವರ ಆರೋಗ್ಯ ಸ್ಥಿತಿ ಕುರಿತು ಚಿಂತೆಗಳನ್ನು ತಳ್ಳಿ ಹಾಕಿದ್ದರೂ, ಅವರ ಸ್ಥಿತಿ ತೀವ್ರವಾಗಿತ್ತು ಎಂಬ ವರದಿಗಳು ಇದೀಗ ಬೆಳಕಿಗೆ ಬಂದಿವೆ.
“ಆರೋಗ್ಯದ ಕುರಿತು ಆತಂಕವಿಲ್ಲ” ಎಂದು ಹೇಳಿದ ರತನ್ ಟಾಟಾ: ಇತ್ತೀಚೆಗೆ, ಅವರ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಆರೋಗ್ಯದ ಬಗ್ಗೆ ನಿರೀಕ್ಷೆಗಳನ್ನು ನಿಗ್ರಹಿಸಲು ಸಂದೇಶ ನೀಡಿದ್ದರು. “ಚಿಂತೆ ಮಾಡುವ ಅಗತ್ಯವಿಲ್ಲ. ನಾನು ಖುಷಿಯಿಂದ ಇದ್ದೇನೆ,” ಎಂದು ಹೇಳಿದ್ದಾರೆ. ಆದರೆ, ಅವರ ಆರೋಗ್ಯ ದಿನೇ ದಿನೇ ಕುಸಿಯುತ್ತಿತ್ತು ಎಂಬ ಸುದ್ದಿ ತದನಂತರ ಕೇಳಿಬಂದಿದೆ.
ಗಣ್ಯರ ಸಂತಾಪ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ತಲುಪುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಮುಂಬೈನ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಈ ಬೆಳವಣಿಗೆಗೆ ಪ್ರತಿಕ್ರಿಯೆ ನೀಡಿದ್ದು, ಆಸ್ಪತ್ರೆಗೆ ಭದ್ರತೆ ಹೆಚ್ಚಿಸಲಾಗಿದೆ. ದೇಶಾದ್ಯಾಂತ ರಾಜಕೀಯ ನಾಯಕರಿಂದ, ಉದ್ಯಮಿಗಳಿಂದ ಹಾಗೂ ಅಭಿಮಾನಿಗಳಿಂದ ಸಂತಾಪ ಸಂದೇಶಗಳು ಹರಿದು ಬರುತ್ತಿವೆ.
“ಭಾರತದ ಉದ್ಯಮ ಲೋಕದ ಆಧಾರಸ್ತಂಭ”: ರತ್ನನ್ ಟಾಟಾ ಅವರನ್ನು ಕಳೆದುಕೊಂಡುದು ದೇಶದ ಆರ್ಥಿಕ ಮತ್ತು ಉದ್ಯಮಿಕ ಪ್ರಗತಿಗೆ ತುಂಬಲಾಗದ ನಷ್ಟ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವಿಟ್ಟರ್‌ನಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ. ಉದ್ಯಮಿ ಆನಂದ್ ಮಹೀಂದ್ರ ಅವರು, ರತನ್ ಟಾಟಾ ಅವರ ಮಾರ್ಗದರ್ಶನ ಮತ್ತು ಪ್ರೇರಣೆಯ ಕುರಿತು, ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ವಿಷಾದ ವ್ಯಕ್ತಪಡಿಸಿದ್ದಾರೆ.
ರತನ್ ಟಾಟಾ ಜೀವನ: ಟಾಟಾ ಸಂಸ್ಥೆಯ ನಾಯಕತ್ವವನ್ನು 1991ರಲ್ಲಿ ಕೈಗೆ ತೆಗೆದುಕೊಂಡ ರತನ್ ಟಾಟಾ, ಜಗತ್ತಿನಾದ್ಯಂತ ಭಾರತೀಯ ಉದ್ಯಮ ಲೋಕವನ್ನು ಪ್ರಸ್ತುತಪಡಿಸಿದರು. ಟೆಟ್ಲಿ, ಕೋರಸ್, ಮತ್ತು ಜಗ್ವಾರ್ ಲ್ಯಾಂಡ್ ರೋವರ್ ಸೇರಿದಂತೆ ಜಾಗತಿಕವಾಗಿ ದೊಡ್ಡ ಕಂಪನಿಗಳನ್ನು ಹೊಂದಲು ಅವರು ನೆರವಾದರು. 2012ರಲ್ಲಿ ನಿವೃತ್ತರಾದ ರತನ್ ಟಾಟಾ ಅವರ ಹೆಸರು ದೇಶದ ಇತಿಹಾಸದಲ್ಲಿ ಸದಾ ಸ್ಮರಣೆಯಲ್ಲಿಯೇ ಉಳಿಯುವುದು.