ದಾಳಿ ಮತ್ತು ಪ್ರತಿದಾಳಿಗಳ ಕಾಳಗ: ಕಬಡ್ಡಿ..!
ಕಬಡ್ಡಿ ಭಾರತದ ಒಂದು ಜನಪ್ರೀಯ ಕ್ರೀಡೆ. ಕಬಡ್ಡಿ ಗ್ರಾಮೀಣ ಭಾರತದಲ್ಲಿ ಹುಟ್ಟಿಕೊಂಡಿತ್ತು
ಈಗ ಈ ಕ್ರೀಡೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಸ್ಥಾನವನ್ನು ದೊರಕಿಸಿಕೊಂಡು, ಭಾರತೀಯ ಕ್ರೀಡಾಜಗತ್ತಿನ ಹೆಮ್ಮೆಯ ಸಂಕೇತವಾಗಿದೆ.
ಕಬಡ್ಡಿಯ ಇತಿಹಾಸ:
ಸುಮಾರು 4000 ವರ್ಷಗಳ ಹಿಂದೆ, ಕಬಡ್ಡಿ ಹುಟ್ಟಿತ್ತು ಎಂದು ಹೇಳುತ್ತಾರೆ. ಮಹಾಭಾರತದಲ್ಲಿ ಭೀಮ ಮತ್ತು ಕೌರವರ ನಡುವೆ ನಡೆದ ಕೆಲವು ಕ್ರೀಡೆಗಳಲ್ಲಿ, ಕಬಡ್ಡಿಯನ್ನು ಹೊಲುವ ಕೆಲ ನಿಯಮಗಳನ್ನು ಕಾಣಬಹುದು. ಪ್ರಾಚೀನ ಭಾರತದಲ್ಲಿ ಕಬಡ್ಡಿಯನ್ನು ಜನರು ದೈಹಿಕ ವ್ಯಾಯಾಮ ಮತ್ತು ಮನರಂಜನಾ ಚಟುವಟಿಕೆಯಾಗಿ ಆಡುತ್ತಿದ್ದರು. ಕಾಲಕ್ರಮೇಣ, ಈ ಆಟವು ನಿರಂತರವಾಗಿ ಬದಲಾಗುತ್ತಾ, ಇಂದು ಅಂತರಾಷ್ಟ್ರಿಯ ಕ್ರೀಡೆಗಳಲ್ಲಿ ತನ್ನದೆ ಆದ ಸ್ಥಾನವನ್ನು ರೂಪಿಸಿಕೊಂಡಿದೆ.
ನಿಯಮಗಳು ಮತ್ತು ಆಟ:
• ಕಬಡ್ಡಿಯು ಎರಡು ತಂಡಗಳ ನಡುವೆ ನಡೆಯುವ ಕ್ರೀಡೆಯಾಗಿದ್ದು, ಪ್ರತಿ ತಂಡದಲ್ಲಿ 7 ಆಟಗಾರರು ಇರುತ್ತಾರೆ.
• ಆಟದ ಪ್ರದೇಶವು ಸಮಾವಾಗಿ ಎರಡು ಭಾಗಗಳಾಗಿ ವಿಂಗಡಿಸಲಾಗುತ್ತದೆ.
• ಕಬಡ್ಡಿ ಪಂದ್ಯದಲ್ಲಿ ೪೦ ನಿಮಿಷಗಳ ಕಾಲ ನಡೆಯುತ್ತದೆ,. ಈ 40 ನಿಮಿಷಗಳಲ್ಲಿ ಮೊದಲ 20 ನಿಮಿಷಕ್ಕೆ ಒಂದು ವಿರಾಮವನ್ನು ತೆಗೆದುಕೊಂಡು ನಂತರ ಮುಂದಿನ 20 ನಿಮಿಷಕ್ಕೆ ಆಟವನ್ನು ಮುಂದುವರಿಸುತ್ತಾರೆ.
• ಕಬಡ್ಡಿಯಲ್ಲಿ, “ರೈಡರ್” ಎಂದು ಕರೆಯಲ್ಪಡುವ ಆಟಗಾರನು ಎದುರಾಳಿ ತಂಡದ ಕೋರ್ಟ್ ಅನ್ನು ಪ್ರವೇಶಿಸಿ, ಸಾಧ್ಯವಾದಷ್ಟು ಹೆಚ್ಚು ಡಿಫೆಂಡರ್ಗಳನ್ನು ಟ್ಯಾಗ್ ಮಾಡಿ ಮತ್ತು ತಮ್ಮ ಕೋರ್ಟ್ಗೆ ಮರಳುವುದು ಗುರಿಯಾಗಿದೆ.
• ರೈಡ್ಗೆ ಪ್ರವೇಶಿಸಿದಾಗ, ರೈಡರ್ ಮತ್ತೆ ತನ್ನ ಕೋರ್ಟ್ಗೆ ವಾಪಾಸ್ ಬರುವವರೆಗೂ, ನಿರಂತರವಾಗಿ ʼಕಬಡ್ಡಿ..ಕಬಡ್ಡಿ..ʼ ಎಂದು ಹೇಳುತ್ತಾ ಇರಬೇಕು.
• “ಸ್ಟಾಪರ್ಸ್” ಎಂದು ಕರೆಯಲ್ಪಡುವ ಡಿಫೆಂಡರ್ಗಳು , ರೈಡರ್ ಅನ್ನು ತಡೆಯೋದೇ ಅವರ ಮುಖ್ಯ ಕೆಲಸ.
• ಡಿಫೆಂಡರ್ಗಳನ್ನು ಟ್ಯಾಗ್ ಮಾಡುವುದರ ಜೊತೆಗೆ, ರೈಡರ್ಗಳು ಎದುರಾಳಿಯ ಕೋರ್ಟ್ನಲ್ಲಿ ನಿರ್ದಿಷ್ಟ ಗೆರೆಗಳನ್ನು ದಾಟುವ ಮೂಲಕ ʼಬೋನಸ್ʼ ಅಂಕಗಳನ್ನು ಗಳಿಸಬಹುದು.
• ರೈಡರ್ ಬೌಂಡರಿ ಗೆರೆಯನ್ನು ದಾಟಿದರೆ ಅಥವಾ ನಿಗದಿತ ಸಮಯದ ಮಿತಿಯೊಳಗೆ ಕೋರ್ಟ್ಗೆ ಹಿಂತಿರುಗಲು ವಿಫಲವಾದರೆ, ಅವರನ್ನು “ಔಟ್” ಎಂದು ಪರಿಗಣಿಸಲಾಗುತ್ತದೆ.
• ಡಿಫೆಂಡರ್ಗಳು ರೈಡರ್ ಅನ್ನು ಅಸುರಕ್ಷಿತವಾಗಿ ಹಿಡಿದಿಟ್ಟುಕೊಳ್ಳುವುದು, ತಳ್ಳುವುದು ಅಥವಾ ಹೊಡೆಯುವುದನ್ನುಮಾಡಬಾರದು . ನಿಯಮ ಉಲ್ಲಂಘನೆಗಳು , ಪೆನಾಲ್ಟಿಗಳಿಗೆ ಕಾರಣವಾಗುತ್ತವೆ.
• ಒಂದು ತಂಡದಿಂದ ಎಲ್ಲ ಆಟಗಾರರು ಔಟಾಗಿ ʼಬೆಂಚ್ʼ ಮೇಲೆ ಕುಳಿತುಕೊಂಡರೆ, ಇದನ್ನು ʼಆಲ್ ಔಟ್ ʼ ಎಂದು ಪರಿಗಣಿಸುತ್ತಾರೆ ಮತತು ವಿರುದ್ಧ ತಂಡ 3 ಪಾಯಿಂಟ್ಗಳು ಗಳಿಸುತ್ತದೆ.
ಕಬಡ್ಡಿಯ ಪ್ರಕಾರಗಳು:
- ಸ್ತ್ಯಾಂಡರ್ಡ್ ಕಬಡ್ಡಿ: ಇದು ಸಾಮಾನ್ಯವಾಗಿ ಆಡುವಂತಹ ಕಬಡ್ಡಿ, ಈ ಪ್ರಕಾರವನ್ನು ಎಲ್ಲ ಅಂತರಾಷ್ಟ್ರಿಯ ಕ್ರೀಡಾಕೂಟಗಳಲ್ಲಿ ಮತ್ತು ಲೀಗ್ಗಳಲ್ಲಿ ಬಳಸುತ್ತಾರೆ.
- ಸರ್ಕ್ಲ್ ಕಬಡ್ಡಿ:ಈ ಪ್ರಕಾರ ಅತ್ಯಂತ ಹಳೆ ಮತ್ತು ಪಾರಂಪರಿಕವಾಗಿ ಬಂದು, ಇದನ್ನು ವೃತ್ತಾಕಾರದ ಮೈದಾನದಲ್ಲಿ ಆಡುತ್ತಾರೆ.
- ಅಮರ್ ಕಬಡ್ಡಿ: ಈ ಪ್ರಕಾರ ಹೆಚ್ಚಾಗಿ ಪಂಜಾಬ್ ಮತ್ತು ಹರಿಯಾಣ ಪ್ರದೇಶಗಳಲ್ಲಿ ಆಡುತ್ತಾರೆ.
- ಗಮೀನಿ ಕಬಡ್ಡಿ: ಈ ಪ್ರಕಾರದಲ್ಲಿ ಔಟಾಗಿರುವ ಆಟಗಾರ, ತನ್ನ ತಂಡದ ಎಲ್ಲ ಆಟಗಾರರು ಔಟ್ ಆಗುವವರೆಗೂ ಕೋರ್ಟ್ನಿಂದ ಹೊರಗೆ ಇರಬೇಕು.
ಪ್ರಮುಖ ಕಬಡ್ಡಿ ಸ್ಪರ್ಧೆಗಳು:
- ಪ್ರೋ ಕಬಡ್ಡಿ ಲೀಗ್:
ಭಾರತದ ಪ್ರೀಮಿಯರ್ ವೃತ್ತಿಪರ ಕಬಡ್ಡಿ ಲೀಗ್, ದೇಶೀದ ಮತ್ತು ಅಂತರಾಷ್ಟ್ರೀಯ ಆಟಗಾರರನ್ನು ಒಳಗೊಂಡಿದೆ.
• ಸ್ಥಾಪನೆ: 2014
• ಫ್ರಾಂಚೈಸ್ ಆಧಾರಿತ ಲೀಗ್
• ತಂಡಗಳ ಸಂಖೆ: 12
• ಆವರ್ತನ: ವಾರ್ಷಿಕ - ಕಬಡ್ಡಿ ವಿಶ್ವಕಪ್:
ಅಂತಾರಾಷ್ಟ್ರೀಯ ಕಬಡ್ಡಿ ಫೆಡರೇಷನ್ (IKF) ಈ ಆಯೋಜಿಸಿರುವ ಪ್ರಖ್ಯಾತ ಅಂತಾರಾಷ್ಟ್ರೀಯ ಪಂದ್ಯಾವಳಿ, ಜಗತ್ತಿನಾದ್ಯಂತದ ತಂಡಗಳನ್ನು ಒಳಗೊಂಡಿದೆ.
• ಸ್ಥಾಪನೆ: 2004
• ಅಂತಾರಾಷ್ಟ್ರೀಯ ಪಂದ್ಯಾವಳಿ
• ತಂಡಗಳ ಸಂಖ್ಯೆ: ಸುಮಾರು 12-16 ತಂಡಗಳು
• ಆವರ್ತನ: ದ್ವೈವಾರ್ಷಿಕ - ಏಷ್ಯನ್ ಕಪ್ ಚ್ಯಾಂಪಿಯನ್ಶಿಪ್:
ಏಷ್ಯನ್ ಕಬಡ್ಡಿ ಫೆಡರೇಶನ್ ನಡೆಸಿದ ಕಾಂಟಿನೆಂಟಲ್ ಚಾಂಪಿಯನ್ಶಿಪ್, ಪ್ರಾದೇಶಿಕ ಪ್ರಾಬಲ್ಯಕ್ಕಾಗಿ ಸ್ಪರ್ಧಿಸುತ್ತಿರುವ ಏಷ್ಯಾದ ತಂಡಗಳನ್ನು ಒಳಗೊಂಡಿದೆ.
• ಸ್ಥಾಪನೆ: 1980
• ಏಷ್ಯನ್ ದೇಶಗಳಿಗೆ ಕಾಂಟಿನೆಂಟಲ್ ಪಂದ್ಯಾವಳಿ
• ತಂಡಗಳ ಸಂಖ್ಯೆ: 10-15
• ಆವರ್ತನ: ದ್ವೈವಾರ್ಷಿಕ
ಕಬಡ್ಡಿ ಆಟವು ಭಾರತೀಯ ಸಂಸ್ಕೃತಿಯ ಮಹತ್ವ ಅಂಗವಾಗಿದ್ದು, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಜನರ ಮನವನ್ನು ಗೆದ್ದಿದ್ದೆ. ಈ ಆಟದ ಮೂಲಕ, ದೈಹಿಕ ಶಕ್ತಿ ಮತ್ತು ಚುರುಕುತನವನ್ನು ಹಿಚ್ಚಿಸಬಹುದು. ಕಬಡ್ಡಿ ಕೇವಲ ಕ್ರೀಡೆಯಾಗಿಯೇ ಅಲ್ಲ, ಅದು ಜವಾಬ್ದಾರಿ, ತಾಳ್ಮೆ ಮತ್ತು ಸಮೂಹದಲ್ಲಿ ಹೇಗೆ ಕಾರ್ಯನಿರ್ವಹಿಸಬೇಕು ಎನ್ನುವ ಪಾಠವನ್ನು ಕಲಿಸುತ್ತದೆ.
ಇಂದಿನ ತಂತೆಜ್ಞಾನ ಯುಗದಲ್ಲಿಯೂ ಕಬಡ್ಡಿ ತನ್ನ ವೈಶೀಷ್ಟ್ಯತೆಯನ್ನು ಕಾಪಾಡಿಕೊಂಡಿದೆ. ಕಬಡ್ಡಿ ಆಟವನ್ನು ಇನ್ನಷ್ಟು ಉತ್ತೇಜಿಸಿ, ಜಾಗತಿಕ ಮಟ್ಟದಲ್ಲಿ ಮುನ್ನಡೆಯಲು ಪ್ರೋತ್ಸಾಹ ನೀಡುವುದು ನಮ್ಮು ಹೊಣೆಗಾರಿಕೆಯಾಗಿದೆ.
ಧನ್ಯಾ ರೆಡ್ಡಿ
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ