‘ಆಸ್ಕರ್’ ರೇಸಿನಿಂದ ಹೊರಬಿದ್ದ ʼಲಾಪತಾ ಲೇಡೀಸ್ʼ
ಕಿರಣ್ ರಾವ್ ನಿದೇರ್ಶನದ ಬಾಲಿವುಡ್ ಚಲನಚಿತ್ರ ʼಲಾಪತಾ ಲೇಡೀಸ್ʼ (Lost Ladies) ಸಿನಿಮಾ ಆಸ್ಕರ್ ರೇಸಿನಿಂದ ಹೊರಬಿದ್ದಿದೆ. ಈ ಸುದ್ದಿ ಚಿತ್ರ ತಂಡಕ್ಕೆ ಹಾಗೂ ಸಿನಿಮಾ ಪ್ರಿಯರಿಗೆ ನಿರಾಶೆ ಉಂಟುಮಾಡಿದೆ.
ಚಿತ್ರದಲ್ಲಿ ಸಬ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ರವಿ ಕಿಶನ್ ಈ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ. “ಕಿರಣ್ ರಾವ್(ನಿರ್ದೇಶಕಿ) ಅವರ ಜೊತೆ ಮಾತಾನಾಡೋಕೆ ಪ್ರಯತ್ನಿಸಿದೆ, ಅದರೆ ಅವರು ಪ್ರವಾಸದಲ್ಲಿರುವುದರಿಂದ ಮಾತುಕತೆ ಆಗಿಲ್ಲ. ಗೆದ್ದಿಲ್ಲ ಅನ್ನುವ ನಿರಾಶೆಯಿದೆ ಆದರೆ, ಆಸ್ಕರ್‌ವರೆಗೂ ನಮ್ಮ ಚಿತ್ರ ತಲುಪಿದೆ ಅನ್ನೋದು ಖುಷಿ ನೀಡಿದೆ, ಮತ್ತೊಂದು ಒಳ್ಳೆ ಚಿತ್ರ ಕೊಡ್ತೀನಿ” ಎಂದು ಮಾಧ್ಯಮಗಳಿಗ ತಿಳಿಸಿದರು.
ಸ್ಪರ್ದೆಯಲ್ಲಿ ಗೆಲ್ಲುವುದಕ್ಕೆ ಕಠಿನವಾಗಿತ್ತು, ಆದರೆ ಭಾರತ ಆಸ್ಕರ್ ವೇದಿಕೆಗೆ ಪ್ರವೇಶಿಸಿದೆ ರವಿ ಕಿಶನ್ ಹೆಮ್ಮೆ ಪಡುತ್ತಿದ್ದಾರೆ. “ಅದು ಅಂತರಾಷ್ಟ್ರಿಯ ಸಿನಿಮಾಗಳ ಜಗತ್ತು, ನಮ್ಮ ಚಿತ್ರ ಕೂಡ ನೇಮಕಗೊಂಡಿತ್ತು, ಆದರೆ ನಾವು ಸ್ವಲ್ಪ ಹಿಂದುಳಿದುಬಿಟ್ಟೆವು. ನಾವು ನಿರೀಕ್ಷೆಗಳನ್ನು ಹೊಂದಿದ್ದರಿಂದ, ಬೇಸರವಾಗುತ್ತಿದೆ. ನಾನು ಸಂಸತ್‌ನಲ್ಲಿ ಇದ್ದ ಕಾರಣ, ಸುದ್ದಿ ಸ್ವಲ್ಪ ತಡವಾಗಿ ಗೊತ್ತಾಯಿತುʼ ಎಂದು ರವಿ ಕಿಶನ್ ಹೇಳಿದ್ದಾರೆ.
ಚಿತ್ರದಲ್ಲಿ ʼಮಂಜು ಮಾಯಿʼ ಪಾತ್ರದಲ್ಲಿ ಕಾಣಿಸಿಕೊಂಡಿರುವ ಛಾಯ ಖಧಂ, ಈ ಸುದ್ದಿಗೆ ಬೇಸರದಿಂದ ಪ್ರತಿಕ್ರಯಿಸಿ. “ನನಗೆ ತುಂಬಾ ಬೇಸರವಾಗುತ್ತಿದೆ, ನಾವು ನಮ್ಮು ಚಿತ್ರಕ್ಕೆ ದೊಡ್ಡ ವಿಷಯಗಳನ್ನು ಕಲ್ಪಿಸಿಕೊಂಡಿದ್ವಿ. ಈ ಬಾರಿ ಪರವಾಗಿಲ್ಲ, ಮುಂದಿನ ಸಲ ನಾವು ಇನ್ನು ಒಳ್ಳೆಯ ಚಿತ್ರಗಳನ್ನು ಕೊಟ್ಟು, ಆಸ್ಕರ್‌ಯನ್ನು ಪಡೆಯಲು ಎಲ್ಲಾ ಪ್ರಯತ್ನ ಪಡುತ್ತೇವೆ” ಎಂದು ಮಾಧ್ಯಮಗಳಿಗೆ ತಿಳಿಸಿದರು.
ಛಾಯ ಖಧಂ ಅವರು “ಆಲ್ ವಿ ಇಮಾಜಿನ್ ಅಸ್ ಲೈಟ್” (All we imagine as light) ಚಿತ್ರದಲ್ಲಿ ಸಹ ಕಾಣಿಸಿಕೊಂಡಿದ್ದಾರೆ. ಆದರೆ, ಈ ಚಿತ್ರವೂ ಆಸ್ಕರ್ ಅಲ್ಲಿ ಭಾಗವಹಿಸಲು FFI ನಿರಾಕರಿಸಿತ್ತು. ಇದನ್ನು ಕುರಿತು ಛಾಯ ಅವರು “ನಾನು ಎರಡು ಚಿತ್ರಗಳಲ್ಲಿ ಇದ್ದೇನೆ, ಎರಡು ಚಿತ್ರಗಳು ಕೂಡ ಆಸ್ಕರ್ ತಲುಪಬೇಕಿತ್ತು” ಎಂದು ಹೇಳಿದ್ದಾರೆ.
ʼಲಾಪಾತ ಲೇಡೀಸ್ʼ ಸಿನಿಮಾ ಆಸ್ಕರ್ ರೇಸಿನಿಂದ ಹೊರಬಿದ್ದಿದೆ ಎಂದು ಇಡೀ ಭಾರತದ ಚಿತ್ರ ರಂಗವೇ ಬೇಸರ ವ್ಯಕ್ತಪಡಿಸಿದೆ.
ಧನ್ಯಾ ರೆಡ್ಡಿ
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ