ರಾಜ್ಯದಲ್ಲಿ ಮತ್ತೊಂದು ಭೂ ಕಬಳಿಕೆ ಆರೋಪ…!
1600 ಕೋಟಿ ರೂ. ಗೂ ಹೆಚ್ಚು ಮೌಲ್ಯದ ಅಮೂಲ್ಯ ಸರ್ಕಾರಿ ಸ್ವತ್ತನ್ನು ಕಬಳಿಸಿರುವ ಬೃಹತ್‌ಭೂ ಕಬಳಿಕೆ ಹಗರಣದ ಬಗ್ಗೆ, ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ರಮೇಶ್‌ಎನ್.ಅರ್ ಆರೋಪಿಸಿದ್ದಾರೆ. ಈ ಆಸ್ತಿ ಉತ್ತರಹಳ್ಳಿ-ಕೆಂಗೇರಿ ರಸ್ತೆಯಲ್ಲಿರುವ BGS ಆಸ್ಪತ್ರೆಗೆ ಹೊಂದಿಕೊಂಡಂತಿದೆ. ಮಾಗಡಿ ಕ್ಷೇತ್ರದ ಶಾಸಕ H.C. ಬಾಲಕೃಷ್ಣ ಅವರ ರಾಜಕೀಯ ಪ್ರಭಾವಗಳಿಗೆ ಒಳಗಾಗಿ, ಅಮೂಲ್ಯವಾದ ಸರ್ಕಾರಿ ಸ್ವತ್ತನ್ನು ಭೂಗಳ್ಳರ ಪಾಲಾಗುವಂತೆ ಮಾಡಿ, ಕಂದಾಯ ಮತ್ತು ಭೂ ದಾಖಲೆಗಳ ಇಲಾಖೆಯ ಅಧಿಕಾರಿಗಳ ಮೂಲಕ ನಡೆದಿರುವ ಬೃಹತ್‌ಸರ್ಕಾರಿ ಭೂ ಕಬಳಿಕೆ ಹಗರಣ ಇದಾಗಿದೆ. ಈ ಬೃಹತ್‌ಹಗರಣವನ್ನು ರಾಜಕೀಯ ಪ್ರಭಾವಿಗಳು ಹಾಗೂ ಕಂದಾಯ ಮತ್ತು ಭೂ ದಾಖಲೆಗಳ ಇಲಾಖೆಯ ಅಧಿಕಾರಿಗಳು ಒಟ್ಟಾಗಿ ನಡೆಸಿದ್ದಾರೆ ಎಂದು ರಮೇಶ್ ಎನ್.ಆರ್. ಆರೋಪಿಸಿದ್ದಾರೆ.
ಈ “ಸರ್ಕಾರಿ ಭೂ ಕಬಳಿಕೆ ಹಗರಣ” ಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ಹಾಗೂ ಭೂ ಕಬಳಿಕೆ ನಿಗ್ರಹ ವಿಶೇಷ ನ್ಯಾಯಲಯದಲ್ಲಿ ಒಟ್ಟು 11 ಮಂದಿ ವಿರುದ್ಧ ದೂರು ದಾಖಲಾಗಿದೆ. ಬೆಂಗಳೂರು ನಗರ ಜಿಲ್ಲೆಯ ಸಹಾಯಕ ಆಯುಕ್ತರು ರಜನೀಕಾಂತ್, ಬೆಂಗಳೂರು ದಕ್ಷಿಣ ತಾಲೂಕಿನ DDLRಗಳಾದ ಮಂಜುನಾಥ್‌ಥಾವನೆ ಮತ್ತು ಕುಸುಮಾ ಲತಾ, ಬೆಂಗಳೂರು ದಕ್ಷಿಣ ತಾಲೂಕಿನ ADLR ಸಚಿನ್, ADLR ಕ಼ಛೇರಿಯ ಮೇಲ್ವಿಚಾರಕ ಶಶಿಕುಮಾರ್, ಸರ್‌ವೇಯರ್‌ಗಳಾದ ರವಿಶಂಕರ್‌ಮತ್ತು ಲಕ್ಷ್ಮಿದೇವಿ, ವಿಶೇಷ ತಹಶೀಲ್ದಾರ್‌ಗುರುರಾಜ್, ತಹಶೀಲ್ದಾರ್‌ಗಳಾದ ದಿನೇಶ್ ಮತ್ತು ರಾಮ್‌ಲಕ್ಷ್ಮಣ್, KNS ರೆಸಿಡೆನ್ಸಿ ಸಂಸ್ಥೆಯ ಮಾಲೀಕ KN ಸುರೇಂದ್ರ ವಿರುದ್ಧ ದೂರು ದಾಖಲಾಗಿದೆ. ಇವರ ವಿರುದ್ಧ ಭ್ರಷ್ಟಾಚಾರ, ವಂಚನೆ, ನಕಲಿ ದಾಖಲೆಗಳ ಸೃಷ್ಟಿ, ಸರ್ಕಾರಿ ಜಾಗದ ಕಬಳಿಕೆ, ಅಧಿಕಾರದ ದುರುಪಯೋಗ, ಪ್ರಕರಣಗಳಿಗೆ ಸಂಬಂಧಿಸಿದಂತೆ 204 ಪುಟಗಳ ದಾಖಲೆಗಳೊಂದಿಗೆ ರಮೇಶ್‌ಎನ್.ಅರ್ ದೂರು ದಾಖಲಿಸಿದರು.
ಇಂತಹ ಅಮೂಲ್ಯ ಸರ್ಕಾರಿ ಸ್ವತ್ತನ್ನು ಕಬಳಿಸಲು ಸರ್ಕಾರಿ ಅಧಿಕಾರಿಗಳೊಂದಿಗೆ ಶಾಮೀಲಾಗಿರುವ, ಬೆಂಗಳೂರು ನಗರ ಜಿಲ್ಲೆಯ ಸಹಾಯಕ ಆಯುಕ್ತರು ರಜನೀಕಾಂತ್, ಬೆಂಗಳೂರು ದಕ್ಷಿಣ ತಾಲೂಕಿನ DDLRಗಳಾದ ಮಂಜುನಾಥ್‌ಥಾವನೆ ಮತ್ತು ಕುಸುಮಾ ಲತಾ, ಬೆಂಗಳೂರು ದಕ್ಷಿಣ ತಾಲೂಕಿನ ADLR ಸಚಿನ್, ADLR ಕ಼ಛೇರಿಯ ಮೇಲ್ವಿಚಾರಕ ಶಶಿಕುಮಾರ್, ಸರ್‌ವೇಯರ್‌ಗಳಾದ ರವಿಶಂಕರ್‌ಮತ್ತು ಲಕ್ಷ್ಮಿದೇವಿ, ವಿಶೇಷ ತಹಶೀಲ್ದಾರ್‌ಗುರುರಾಜ್, ತಹಶೀಲ್ದಾರ್‌ಗಳಾದ ದಿನೇಶ್ ಮತ್ತು ರಾಮ್‌ಲಕ್ಷ್ಮಣ್, KNS ರೆಸಿಡೆನ್ಸಿ ಸಂ ಸ್ಥೆಯ ಮಾಲೀಕ KN ಸುರೇಂದ್ರ ಅವರ ವಿರುದ್ಧ ಕಾನೂನಾತ್ಮಕವಾಗಿ ಕ್ರಮಕೈಗೊಳ್ಳಬೇಕೆಂದು, ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್‌ಕಠಾರಿಯ ಅವರಿಗೆ ರಮೇಶ್‌ಎನ್.ಆರ್. ಆಗ್ರಹಿಸಿದರು. ಸುಮಾರು 1600 ಕೋಟಿ ರೂ ಗೂ ಹೆಚ್ಚು ಮೌಲ್ಯದ ಸರ್ಕಾರಿ ಸ್ವತ್ತಿನ ಒಂದು ಇಂಚು ಜಾಗವೂ ಭೂಗಳ್ಳರ ಪಾಲಾಗದಂತೆ, ತಕ್ಷಣವೇ CIDಗೆ ಈ ಆಕ್ರಮವನ್ನು ಒಪ್ಪಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಒತ್ತಾಯಿಸಿದರು.
ಧನ್ಯಾ ರೆಡ್ಡಿ
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ