ರಾಜ್ಯದಲ್ಲಿ ಮುಂದುವರಿಯುತ್ತಲೇ ಇದೆ ಬಾಣಂತಿಯರ ಸಾವು.
ಪ್ರತಿ ವರ್ಷ ಜಿಲ್ಲಾಸ್ಪತ್ರೆಯಲ್ಲಿ ಸುಮಾರು ಆರು ಸಾವಿರ ಹೆರಿಗೆಗಳು ಅಗುತ್ತಿದ್ದು ಒಂದು ತಿಂಳಿಗೆ 500 ಮಂದಿಯಾದರು ದಾಖಲಾಗುತ್ತಿದ್ದರು ಆದರೆ ಕಳೆದ ಒಂದು ತಿಂಗಳಲ್ಲಿ ತುಂಬಾ ಇಳಿಕೆಯಾಗಿದ್ದು, ಇದು ಮೊದಲ ಬಾರಿಗೆ ಎನ್ನಲಾಗಿದೆ. ಈಗಾಗಲೇ ಬಾಣಂತಿಯರ ಸರಣಿ ಸಾವುಗಳ ಬಗ್ಗೆ ಎಲ್ಲಾ ಕಡೆ ಚರ್ಚೆಯಾಗಿದೆ. ಇದರ ಬಗ್ಗೆ ಹಲವು ಅನುಮಾನ ಕೂಡ ಕಂಡುಬಂದಿದೆ. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷಿ ಚೌಧರಿ ಬಳ್ಳಾರಿ ಜಿಲ್ಲಾಸ್ವತ್ರೆಗೆ ಭೇಟಿ ನೀಡಿದರು. ಮೊದಲು ಬಾಣಂತಿಯರ ಸಾವಿಗೆ ರಿಂಗರ್ ಲ್ಯಾಕ್ಪೇಟ್ ದ್ರಾವಣ ಕಾರಣ ಎಂದು ಬಹಿರಂಗವಾಗಿದೆ. ಇದರ ಜೊತೆಗೆ ಆಪರೇಷನ್ ಕೊಠಡಿಗಳಲ್ಲಿ ಅಸ್ವಚ್ಛತೆ ಶಸ್ತಚಿಕಿತ್ಸಾ ಕೊಠಡಿ ಹೆರಿಗೆ ವಾರ್ಡ್ ಹಾಗೂ ಅಲ್ಲಿಗೆ ಬರುವ ನೀರಿನ ಟ್ಯಾಂಕರ್ ಸ್ಪಚ್ಛತೆಯನ್ನು ಸಹ ಪರಿಶೀಲಸಿ ತಿಳಿಸಿದ್ದಾರೆ. ಭೇಟಿ ನೀಡಿದ ಸಂದರ್ಭದಲ್ಲಿ ಕಡಿಮೆ ವೆಚ್ಚದ ಟೆಂಡರ್‌ಗಳನ್ನು ಬಳಸಬಾರದು. ಜೀವಹಾನಿಗಳ ಜೊತೆಗೆ ರಾಜಿ ಇಲ್ಲ, ಮಕ್ಕಳಿಗೆ ಉನ್ನತ ಶಿಕ್ಷಣ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಆಪರೇಷನ್ ಧಿಯೇಟರ್ ನ ಸ್ಪಚ್ಛತೆ. ಶೌಚಾಲಯ ಕುಡಿಯುವ ನೀರಿನ ಪೂರೈಕೆ ಹಾಗೂ ಅಸ್ವಚ್ಛತೆ ಕುರಿತು ಪರಿಶೀಲನೆ ನಡಸಿ ಮಾನ್ಯ ಮಂತ್ರಿಗಳಿಗೆ ವರದಿ ಸಲ್ಲಿಸಿದ್ದಾರೆ ಎಂದು ನಾಗಲಕ್ಷಿ ಚೌಧರಿ ತಿಳಿಸಿದ್ದಾರೆ. ಬಾಣಂತಿಯರ ಸಾವಿಗೆ ಸಂಬಂಧಿಸಿದ ಡ್ರಗ್ ಕಂಟ್ರೋಲರ್ ಉಮೇಶ್ ಎನ್ನುವವರನ್ನು ಸಸ್ಪೆಂಡ್ ಮಾಡಿದ್ದು, ರಿಂಗರ್ ಲ್ಯಾಕ್ವೇಟ್ ದ್ರಾವಣ ಪೂರೈಸಿರುವ ಪಶ್ಚಿಮ ಬಂಗಾಳದ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿ ಕ್ರಿಮಿನಲ್ ಕೇಸ್ ಕೂಡ ದಾಖಲಿಸಲಾಗಿದೆ. ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವುಗಳಿಗೆ ಸರ್ಕಾರ ತನಿಖೆಗೆ ಸಿದ್ಧವಾಗಿದೆ. ನ್ಯಾಯಾಂಗ ತನಿಖೆ ನಡೆಸಬೇಕು. ಎಸ್.ಪಿ.ಟಿ. ರಚಿಸಬೇಕು ಎಂದು ಸಿ.ಎಂ ಜೊತೆ ಚರ್ಚಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಬಾಣಂತಿಯರ ಸರಣಿ ಸಾವುಗಳ ತನಿಖೆ ನಡೆಸಿದ ರಾಜೀವ್ ಗಾಂಧಿ ವಿವಿ ತಜ್ಞರ ತಂಡ ವರದಿ ನೀಡಿದೆ. ಆಪರೇಷನ್ ವೇಳೆ ಯಾವುದೇ ನಿರ್ಲಕ್ಷ ಕಂಡುಬಂದಿಲ್ಲ. ಪಶ್ಚಿಮ ಬಂಗಾಳದ ಮೂಲದ ಕಂಪನಿಗಳು ಪೊರೈಸಿದ ಕಳಪೆ ಗುಣಮಟ್ಟದ ದ್ರಾವಣ ಔಷಧಿಗಳನ್ನು ಬಳಸಿದ ಕಾರಣ ಈ ಘಟನೆ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಹೀಗಾಗಿ ರಾಜಾದ್ಯಂತ ಜಿಲ್ಲೆಗಳಲ್ಲಿ ಉಳಿದಿರುವ ದ್ರಾವಣವನ್ನು ಜಾಷಧಿ ಉಗ್ರಾಣಗಳಿಂದ ಹಿಂಪಡೆದು ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದರು. ಬಾಣಂತಿಯರ ಸಾವಿಗೆ ಸರ್ಕಾರದಿಂದ ಸೌಲಭ್ಯ ಬಾಣಂತಿಯರ ಸಾವಿಗೆ ಸರ್ಕಾರ ತಲಾ 5 ಲಕ್ಷ ರೂ ಪರಿಹಾರ ನೀಡಲಾಗಿದೆ. ಈಗ 2 ಲಕ್ಷ ರೂಪಾಯಿ ನೀಡಲಾಗಿದೆ. ನಂತರ 3 ಲಕ್ಷ ರೂಪಾಯಿ ನೀಡಲಾಗುವುದು. ಇದರ ಮಧ್ಯೆ ಮತ್ತೆ ರಾಜ್ಯದಲ್ಲಿ ಮುಂದುವರದಿಂದೆ ಬಾಣಂತಿಯರ ಸಾವು. ಇಂದು ಚಿಕ್ಕಮಂಗಳೂರು ಸವಿತಾ ಬಲಿ. ಸವಿತಾ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. ಹೆರಿಗೆಯಾದ 3 ದಿನಗಳ ಮೇಲೆ ಮೃತಪಟ್ಟಿದ್ದಾರೆ. ಇದಕ್ಕೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಮಹಿಳೆಯ ಸಂಬಂಧಿಕರು ಹೇಳಿದ್ದಾರೆ. 3 ದಿನದ ಹಿಂದೆ ಜಿಲ್ಲಾಸ್ವತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಸವಿತಾ ಚಿಕ್ಕಮಂಗಳೂರಿನ ಶಂಕರಪುರ ನಿವಾಸಿ 2 ದಿನದ ಹಿಂದೆ ದೇಹದಲ್ಲಿ ಏರುಪೇರು ಉಂಟಾಗಿದೆ. ನಮ್ಮಲ್ಲಿ ಬಾಣಂತಿಗೆ ಚಿಕಿತ್ಸೆ ಮಾಡಲು ಸಾಧ್ಯವಿಲ್ಲ. ಇಲ್ಲಿ ಆ ಸೌಲಭ್ಯಗಳು ಇಲ್ಲ ಎಂದು ಹೇಳಿದರು. ಕೂಡಲೇ ಖಾಸಗಿ ಜಿಲ್ಲಾಸ್ಪತ್ರೆಗೆ ದಾಖಾಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೆ.ಆರ.ಎನ್. ಆಸ್ಪತ್ರೆಯಲ್ಲಿ ಮೃತಪಟ್ಟಿದಾರೆ. ಕಲಬುರಗಿಯಲ್ಲೂ ಸಹ ಬಾಣಂತಿಯ ಸಾವಾಗಿದೆ. ಕಲಬುರಗಿಯಲ್ಲಿ ಹೆರಿಗೆಯ ನಂತರ ಲೋ ಬಿಪಿಯಿಂದ ಮಹಿಳೆ ಸಾವು. ಕಲಬುರಗಿಯ ಭಾಗ್ಯ ಎನ್ನುವ ಮಹಿಳೆ ಸಾವನ್ನಪ್ಪಿದ್ದಾರೆ. ಆಳಂದ ತಾಲೂಕಿನ ಮಟಕಿ ಗ್ರಾಮದ ಭಾಗ್ಯಶ್ರೀ ಶಿವಾಜಿ (22) ಮೃತಪಟ್ಟಿದ್ದಾರೆ. ಅಫಜಲಪುರ ಸರಕಾರಿ ಆಸ್ಪತ್ರೆಯ ವೃದ್ಯರ ನಿರ್ಲಕ್ಷದಿಂದ ಮೃತಪಟ್ಟಿದ್ದಾರೆ.
ಸಂಗೀತಾ ಎಸ್
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ