ʼಲೇಟಾಗಿ ಬಂದ್ರೂ ಲೇಟೆಸ್ಟ್ ಅಗಿ ಬರ್ತಿವಿʼ: ಬಾದ್‌ಷಾ
ಕನ್ನಡದಲ್ಲಿ ಬಹು ನಿರೀಕ್ಷಿತ ಆಕ್ಷನ್-ಥ್ರಿಲ್ಲರ್ ಚಿತ್ರ ʼಮ್ಯಾಕ್ಸ್ʼ. ಮ್ಯಾಕ್ಸ್ ಚಿತ್ರದ ಆಡಿಯೋ ಲಾಂಚ್ ಡಿ.15ರಂದು ಬೆಂಗಳೂರಿನ ರಾಜಾಜಿನಗರದಲ್ಲಿರುವ ಒರಾಯನ್ ಮಾಲ್‌ನಲ್ಲಿ ನಡೆಯಿತು. ʼಲಯನ್ ರೋರ್ʼ ಹಾಡನ್ನು ಮ್ಯಾಕ್ಸ್ʼನ ಚಿತ್ರತಂಡ ಬಿಡುಗಡೆ ಮಾಡಿತು. ಈ ಹಿಂದೆ ಟೀಸರ್ ಮತ್ತು ಟ್ರೈಲರ್ ರಿಲೀಸ್ ಅಗಿ ಎಲ್ಲರ ಗಮನಸೆಳೆದಿತ್ತು.
ʼಪ್ಯಾನ್-ಇಂಡಿಯನ್ʼ ಚಿತ್ರ ಮ್ಯಾಕ್ಸ್ ಡಿ.25ರಂದು ದೇಶದಾದ್ಯಂತ ಬಿಡುಗಡೆಯಾಗಲಿದೆ.
ಕಿಚ್ಚಾ ಸುದೀಪ ವೇದಿಕೆಗೆ ಬಂದಮೇಲೆ ಜನರ ಅಭಿಮಾನ ತಾರಕಕ್ಕೇರಿತು. ʼಜಾದುಗಾರ ರಂಗʼ ಸುದೀಪ ಜೊತೆ ಜಾದೂ ಪ್ರದರ್ಶನ ಮಾಡಿದರು.
ಕರ್ನಾಟಕದ ʼಅಭಿನಯ ಚಕ್ರವರ್ತಿʼ,ʼಬಾದ್‌ಷಾʼ ಕಿಚ್ಚಾ ಸುದೀಪ ಅಭಿಮಾನಿಗಳ ಜೊತೆ ಮಾತಾಡಿ, 2.5 ವರ್ಷಗಳ ನಂತರ ಒಂದು ಸಿನಿಮಾ ಬಿಡುಗಡೆಯಾಗಿದ್ದಕ್ಕೆ ಕ್ಷಮೆ ಕೇಳ್ಳುತ್ತಾ “ಲೇಟಾಗಿ ಬಂದ್ರೂ ಲೇಟೆಸ್ಟ್ ಅಗಿ ಬರ್ತಿವಿ, ಮ್ಯಾಕ್ಸ್ ಸಿನಿಮಾ ಮ್ಯಾಕ್ಸಿಮಮ್ ಆಗಿ ಬರ್ತಿದೆ” ಎಂದು ತಮ್ಮ ಖುಷಿಯನ್ನು ಹಂಚಿಕೊಂಡು, ಕೊನೆಯಲ್ಲಿ ರಾಕ್‌ಲೈನ್ ವೆಂಕಟೇಶ್‌ಗೆ ವಿಶೇಷ ಧನ್ಯವಾದಗಳನ್ನು ತಿಳಿಸಿದರು.
ನಟಿ ಸಂಯುಕ್ತ ಹೊರನಾಡ್ ಕಾರ್ಯಕ್ರಮದಲ್ಲಿ ಮಾತನಾಡಿ, ಕಿಚ್ಚಾ ಸುದೀಪ ಮೇಲೆ ಇರುವ ಅಭಿಮಾನವನ್ನು ವ್ಯಕ್ತಪಡಿಸಿದರು. “ನೀವು ಕಿಚ್ಚಾ ಸರ್‌ನಾ ಮಾಸ್ ಫೈಟ್ ಅಲ್ಲಿ ನೋಡಿದ್ದಿರಾ ಅದರೆ, ಈ ಚಿತ್ರದಲ್ಲಿ ಮಾಸ್ ಫೈಟ್ ಜೊತೆ ಡ್ಯಾನ್ಸ್ ಕೂಡ ನೋಡ್ತೀರಾ, ಎಲ್ಲರೂ ಸೇರಿ ನಮ್ಮ ಚಿತ್ರವನ್ನು ಈ ವರ್ಷದ ಅತೀ ದೊಡ್ಡ ʼಹಿಟ್ʼ ಮಾಡಬೇಕು” ಎಂದು ಬೆಂಬಲ ಕೋರಿದರು.
ನಂತರ, ಚಿತ್ರದ ನಿರ್ಮಾಪಕ ಕಲಾಯಿಪ್ಪುಲಿ ಅವರು ಮಾತಾಡಿದರು. “ಇವತ್ತು ಒಂದು ಒಳ್ಳೆ ದಿನ, ಮ್ಯಾಕ್ಸ್ ಡಿ.25ರಂದು ಬಿಡುಗಡೆಯಾಗಲಿದೆ. 2003ರಲ್ಲಿ ತೆಲುಗು ಮತ್ತು ತಮಿಳ್ ಖ್ಯಾತ ನಟ ಸೂರ್ಯʼನ ಪೊಲೀಸ್ ಆಫಿಸರ್ ಮಾಡಿದ್ದೆ, 2024ರಲ್ಲಿ ನಿಮ್ಮ ಸುದೀಪʼನ ಪೊಲೀಸ್ ಆಫಿಸರ್ ಅಗಿ ಮಾಡಿದ್ದೀನಿ. ಸುದೀಪ ಪ್ರತಿ ಫ್ರೇಮ್‌ನಲ್ಲೂ ತುಂಬಾ ಶ್ರಮ ವಹಿಸಿ ನಟನೆ ಮಾಡುತ್ತಾರೆ.” ಎಂದು ಹೇಳುತ್ತಾ ಕಿಚ್ಚಾ ಸುದೀಪʼನ ಹೊಗಳಿದರು.
ಇಡೀ ಮ್ಯಾಕ್ಸ್ ಚಿತ್ರ ತಂಡ ಸೇರಿ, ಚಿತ್ರದ ಟೀಸರ್, ಟ್ರೈಲರ್ ಹಾಗೂ ʼಲಯನ್ ರೋರ್ʼ ಎನ್ನುವ ಹಾಡನ್ನು ಲಾಂಚ್ ಮಾಡಿದರು. ಹೊಸ ಹಾಡನ್ನು ಕೇಳುತ್ತಾ ಅಭಿಮಾನಿಗಳು ಕ್ರೇಜ್‌ನಿಂದ ಕೇಕೆ ಹಾಕುತ್ತಿದ್ದರು.
ವಿಜಯ್ ಕಾರ್ತಿಕೇಯನ್ ನಿರ್ದೇಶನದ ಈ ಚಿತ್ರದಲ್ಲಿ ʼಅಭಿನಯ ಚಕ್ರವರ್ತಿʼ ಕಿಚ್ಚಾ ಸುದೀಪ, ವರಲಕ್ಷ್ಮಿ ಸರತ್‌ಕುಮಾರ್, ಸಂಯುಕ್ತ ಹೊರನಾಡ್ ಮತ್ತು ಸುಕೃತಾ ವಾಗ್ಲೇ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿ ಕ್ರಿಯೇಶನ್ಸ್ ಮತ್ತು ಕಿಚ್ಚಾ ಕ್ರಿಯೇಶನ್ಸ್ ಸಹಯೋಗದಲ್ಲಿ ಕಲಾಯಿಪ್ಪುಲಿ ಎಸ್. ಥನು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ಎಸ್.ಅರ್ ಗಣೇಶ್ ಬಾಬು ಸಂಕಲನವಿದ್ದು, ಬಿ. ಅಜನೀಶ್ ಲೋಕ್‌ನಾಥ್ ಸಂಗೀತ ಸಂಯೋಜನೆ ಇದೆ.
ಧನ್ಯಾ ರೆಡ್ಡಿ
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ