ಯುಗಾದಿ ಹಬ್ಬಕ್ಕೆ ಕಹಿ ಸುದ್ದಿ ಕೊಟ್ಟ ಸರ್ಕಾರ

ಬೇವು ಬೆಲ್ಲ ಹಬ್ಬ ಯುಗಾದಿಗೂ ಮುನ್ನವೆ ವಿದ್ಯುತ್ ಮತ್ತು ಹಾಲಿನ ದರ ಹೆಚ್ಚಳ ಮಾಡಿ ಕರ್ನಾಟಕ ರಾಜ್ಯ ಸರ್ಕಾರ ಹಬ್ಬದ ಸಡಗರದಲ್ಲಿದ್ದ ಜನರಿಗೆ ಬೇವಿನಂತಹ ಕಹಿ ಸುದ್ದಿಯನ್ನ ನೀಡಿದೆ. ಸಾಗಣೆ ಸಂಸ್ಕರಣೆ ಹಾಗೂ ಕೆಲಸಗಾರರ ವೇತನದಂತಹ ವೆಚ್ಚಗಳನ್ನು ನಿಭಾಯಿಸಲು, ಹಾಲಿನ ದರ ಹೆಚ್ಚಳಮಾಡುವಂತೆ ಒತ್ತಾಯಿಸಿ ರೈತ ಸಂಘಟನೆಗಳು ಕೋರಿಕೆ ಸಲ್ಲಿಸಿದ್ದರು . ಕೋರಿಕೆ ಆಲಿಸಿದ ಸರ್ಕಾರ ನಂತರ ಅದರ ಬಗ್ಗೆ ಪರಿಶೀಲಿಸಿ ಹಾಲಿನ ದರವನ್ನು ಪರಿಶ್ಕರಿಸಿದೆ. ಹೀಗಾಗಿ ಪ್ರತಿ ಲೀಟರ್ʼಗೆ ತಲಾ 4 ರೂ ನಷ್ಟು ಏ.1 ರಿಂದ ಏರಿಕೆ ಮಾಡುವ ಕುರಿತಾಗಿ ಸರ್ಕಾರ ಘೊಷಣೆಯನ್ನ ಮಾಡಿದೆ ಮತ್ತು ಹೆಚ್ಚಳವಾಗಿರುವ ಹಾಲಿನ ದರ ನೇರವಾಗಿ ರೈತರಿಗೆ ತಲುಪಲಿದೆ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅದ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹೈನೊದ್ಯಮಕ್ಕೆ ಹಾಗೂ ರಾಜ್ಯದ ರೈತರ ಕೋರಿಕೆ ಹಾಗೂ ಹಾಲು ಉತ್ಪಾದನೆಯಲ್ಲಿ ತಗುಲುವ ಖರ್ಚು ವೆಚ್ಚಗಳನ್ನು ಆದರಿಸಿ ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ದರದಲ್ಲಿ ಪ್ರತಿ ಲೀಟರ್ʼಗೆ ತಲಾ 4 ರೂ ಹೆಚ್ಚಿಸಲು ಒಪ್ಪಿಗೆ ನಿಡಲಾಗಿದೆ.
ಒಂದೆಡೆ ಹಾಲಿನ ದರ ಹೆಚ್ಚಳವಾದರೆ ಮತ್ತೊಂದೆಡೆ ನಿಶ್ಚಿತ ಶುಲ್ಕದ ಹೆಸರಿನಲ್ಲಿ ವಿದ್ಯುತ್ ದರದಲ್ಲೂ ಕೂಡ ಹೆಚ್ಚಳದ ಕಹಿಯನ್ನ ಜನರಿಗೆ ನೀಡಿದ್ದಾರೆ . kptcl (ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ)ನ ಎಸ್ಕಾಂಗಳ ನೌಕರರ ಪಿಂಚಣಿ , ನಿಗಮದಿಂದ ನೌಕರರಿಗೆ ಸಿಗುವ ಗೌರವ ಧನದ ಹೊರೆಯನ್ನು ಗ್ರಾಹಕರ ಮೇಲೆ ಹಾಕಿ (ಏ 1) ರಿಂದ ಅನ್ವಯವಾಗುವಂತೆ ವಿದ್ಯುತ್ ದರದಲ್ಲಿ ಕೂಡ ಪ್ರತಿ ಯುನಿಟ್‌ಗೆ 36 ಪೈಸೆಯನ್ನು ಹೆಚ್ಚಳ ಮಾಡಿದೆ. ಇನ್ನು ಪ್ರತಿ ಕೀ.ವ್ಯಾಟ್ʼಗೆ 120 ರೂ ಇದ್ದ ನಿಗದಿತ ಶುಲ್ಕ, ಇನ್ನು ಮುಂದೆ 145 ರೂ ಗೆ ಹೆಚ್ಚಳವಾಗಿದೆ . ಮತ್ತು ಈ ದರ ಹೆಚ್ಚಳ ಗೃಹಬಳಕೆದಾರರಿಗೆ ಅಥವಾ ಗೃಹಜ್ಯೋತಿ ಫಲಾನುಭವಿಗಳಿಗೂ( 200 ಯುನಿಟ್ʼಗೂ ಅಧಿಕ) ವಿದ್ಯುತ್ ಬಳಸುತ್ತಿರುವ ಗ್ರಾಹಕರಿಗೆ ಮಾತ್ರ ಹೆಚ್ಚಳದ ಪೆಟ್ಟು ಬೀಳಲಿದೆ.
ಇನ್ನು ವಿದ್ಯುತ್ ಶುಲ್ಕ ಪರಿಷ್ಕರಣೆ ಆದೇಶ ಮೂರು ವರ್ಷಗಳಿಗೆ ಅನ್ವಯವಾಗುತ್ತಿದ್ದು, ಗೃಹ ಬಳಕೆ ಗ್ರಾಹಕರಿಗೆ 2026 ಮತ್ತು 2027 ನೇ ಸಾಲಿನಲ್ಲಿ ಯಾವುದೆ ಹೆಚ್ಚುವರಿ ದರವನ್ನು ವಿಧಿಸುವುದಿಲ್ಲಾ ಹಾಗೂ 2027 ಮತ್ತು 2028 ನೇ ಸಾಲಿನಲ್ಲಿ ದರ 5 ಪೈಸೆ ಕಡಿಮೆ ಆಗುವ ಸಾದ್ಯತೆ ಇದೆ ಎನ್ನಲಾಗಿದೆ.
ಒಟ್ಟಿನಲ್ಲಿ ರಾಜ್ಯದಲ್ಲಿ ಹೆಚ್ಚಳವಾಗುತ್ತಿರುವ ಪ್ರಯಾಣ, ವಿದ್ಯುತ್ ,ಹಾಲು ಹಾಗೂ ದಿನನಿತ್ಯದ ಅವಶ್ಯಕ ವಸ್ತುಗಳ ದರಗಳ ಅಣುಗುಣವಾಗಿ ಜನರ ಆದಾಯವು ಹೆಚ್ಚಾದರೆ ರಾಜ್ಯದಲ್ಲಿ ತೊಂದರೆ ಇರುವುದಿಲ್ಲ ಆದರೆ ದರಗಳು ಹೆಚ್ಚಾಗಿ ಜನರ ವೇತನ ಅಷ್ಟೆ ಇದ್ದರೆ ಮದ್ಯಮ ಮತ್ತು ಕೆಳ ಮದ್ಯಮ ವರ್ಗದವರಿಗೆ ಜೀವನ ಸಾಗಿಸಲು ಕಷ್ಟವಾಗಬಹುದು.
ಶಿಲ್ಪಾ ಹೊಸಮನಿ
ಅಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ