ಎಲಿಫಾಂಟಾ ದ್ವೀಪಕ್ಕೆ ಹೊರಟ್ಟಿದ 9 ಪ್ರವಾಸಿಗರು ಕಡಲ ಪಾಲು…!
ಮುಂಬಯಿ ಕರಾವಳಿಯ ಗೇಟ್ ವೇ ಆಫ್ ಇಂಡಿಯಾ ಬಳಿ ಭೀಕರ ದೋಣಿ ದುರಂತ ಸಂಭವಿಸಿದೆ. ‘ನೀಲ್ ಕಮಲ್ ‘ ಎನ್ನುವ ದೋಣಿಗೆ ಸ್ಪೀಡ್-ಬೋಟ್ ಒಂದು ಡಿಕ್ಕಿ ಹೊಡೆದು ದುರಂತ ನಡೆದಿದೆ. ಈ ಅಪಘಾತದಲ್ಲಿ 13 ಮಂದಿ ಮೃತಪಟ್ಟಿದ್ದಾರೆ. ಈ ಮೃತಪಟ್ಟವರದಲ್ಲಿ ನೌಕಾಪಡೆಯ ಸದಸ್ಯ, ಮತ್ತು ದೋಣಿ ತಯಾರಿಕಾ ಕಂಪನಿಯ ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದಾರೆ.
ಸ್ಪೀಡ್-ಬೋಟ್ ಡಿಕ್ಕಿ ಹೊಡೆದ ಕಾರಣದಿಂದ ನೀಲ್ ಕಮಲ್ ಎನ್ನುವ ದೋಣಿ ಮುಳುಗಿದೆ.
ಸ್ಪೀಡ್-ಬೋಟ್ ಚಾಲಕನ ವಿರುದ್ಧ FIR ದಾಖಲಾಗಿದೆ . ನೌಕಾಪಡೆಯ ಬೋಟ್‌ನಲ್ಲಿ ದೋಣಿ ತಯಾರಿಕಾ ಕಂಪನಿಯ 8 ಸಿಬ್ಬಂದಿ ಇದ್ದರು . ನೀಲ ಕಮಲ್ ಬೋಟ್ ನಲ್ಲಿ 110 ಪ್ರವಾಸಿಗರು ಗೇಟ್ ವೇ ಆಫ್ ಇಂಡಿಯಾದಿಂದ ಮುಂಬಯಿನ ಎಲಿಫೆಂಟಾ ಕೇವ್ಸ್‌ಗೆ ತೆರಳಿದ್ದರು. 110 ಜನರ ಪೈಕಿ 99 ಜನರನ್ನ ರಕ್ಷಣೆ ಮಾಡಲಾಗಿದೆ. ಸ್ಪೀಡ್-ಬೋಟ್ ಚಾಲಕ ನಿಯಂತ್ರಣ ತಪ್ಪಿ ನೀಲ್ ಕಮಲ್ ಎನ್ನುವ ಬೋಟ್‌ಗೆ ಡಿಕ್ಕಿ ಹೊಡೆದಿದ್ದಾನೆ. ದೋಣಿ ದುರಂತದಲ್ಲಿ ಅಪಾಯದಿಂದ ಪಾರಾದ ಸ್ಪೀಡ್-ಬೋಟ್ ಚಾಲಕ ನಾಥರಾಮ ಚೌಧರಿ ವಿರುದ್ಧ ದೂರು ನೀಡಿರುವ ಹಿನ್ನೆಲೆಯಲ್ಲಿ ಆತನ ವಿರುದ್ಧ ಪೊಲೀಸರು FIR ದಾಖಲಿಸಿದ್ದಾರೆ. ಇಂಡಿಯನ್ ನೇವಿ ಸಹ ತಮ್ಮ ತಪ್ಪನು ಒಪ್ಪಿಕೊಂಡಿದೆ. ಸ್ಪೀಡ್-ಬೋಟ್‌ನ ಎಂಜಿನ್‌ಲ್ಲಿ ಸಮಸ್ಯೆಯಾಗಿದ್ದು ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆಯಿತು ಎಂದು ಬೋಟ್ ಚಾಲಕ ಹೇಳಿದ್ದಾನೆ.
ದೋಣಿ ದುರಂತ ನಡೆಯುತ್ತಿದ್ದಂತೆ ಮುಂಬಯಿ ಕರಾವಳಿ ಪೊಲೀಸರು ಮತ್ತು ನೌಕಾಪಡೆಯ ಸಿಬ್ಬಂದಿ ರಕ್ಷಣಾಕಾರ್ಯ ನಡೆಸಿದ್ದರು ಮತ್ತು ಗಾಯಗೊಂಡಿರುವ ಎಲ್ಲ ಪ್ರವಾಸಿಗರನ್ನು ತಕ್ಷಣವೇ ಹತ್ತಿರ ಇರುವ ಆಸ್ಪತ್ರೆಗೆ ಸೇರಿಸಲಾಗಿದೆ. ಈ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪ್ರಧಾನಿ ಮೋದಿ ತಲಾ 2 ಲಕ್ಷ ಪರಿಹಾರ ನೀಡಿ, ಗಾಯಗೊಂಡವರಿಗೆ ತಲಾ 5೦,೦೦೦ ಸಾವಿರ ಪರಿಹಾರವನ್ನು ಘೋಷಿಸಿದ್ದಾರೆ. ಘಟನೆ ಬಗ್ಗೆ ತಮ್ಮ ‘ಎಕ್ಸ್’ ಖಾತೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. “ಮುಂಬೈನಲ್ಲಿ ನಡೆದ ಅಪಘಾತ ನಿಜಕ್ಕೂ ದುಃಖ ತಂದಿದೆ. ಮೃತರ ಕುಟುಂಬಕ್ಕೆ ಸಾಂತ್ವನಗಳು ಮತ್ತು ಗಾಯಗೊಂಡವರು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇನೆ” ಎಂದಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಹ ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ್ದಾರೆ.
ಧನ್ಯಾ ರೆಡ್ಡಿ
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ