Alma Corner

ಮನೆಯ ಶ್ರಂಗಾರಕ್ಕಾಗಿ ಮನಮೋಹಕ ಮುರಾಲ್‌ ಚಿತ್ರಗಳು…!

ಮುರಾಲ್‌ ಪೆಯಿನಟಿಂಗ್‌ ಒಂದು ರೀತಿಯ ಕಲಾಕೃತಿ. ಈ ಕಲಾಕೃತಿಯಲ್ಲಿ ಚಿತ್ರವನ್ನು ನೇರವಾಗಿ ಗೋಡೆ ಅಥವಾ ಚಾವಣಿಯ ಮೇಲೆ ಚಿತ್ರಿಸುತ್ತಾರೆ. ಭಾರತದಲ್ಲಿ ವಿಶೇಷ ವರ್ಣಚಿತ್ರಗಳೊಂದಿಗೆ ಮನೆಯ ಒಳ ಮತ್ತು ಹೊರ ಭಾಗವನ್ನು ಅಲಂಕರಿಸುತ್ತಾರೆ. ರೋಮನ್ನರು, ಗ್ರೀಕರು ಮತ್ತು ಭಾರತೀಯರು ಈ ಕಲೆಯನ್ನು ನಾನಾ ಪ್ರದೇಶಗಳಿಗೆ ಜನಪ್ರೀಯಗೊಳಿಸಿದರು. ಮುರಾಲ್‌ ಪೆಯಿನಟಿಂಗಳಲ್ಲಿ ಹಿಂದಿನ ಕಾಲದ ಮನುಷ್ಯನ ದೈನಂದಿನ ಜೀವನದ ಬಗ್ಗೆ ಅಥವಾ ಮುಖ್ಯವಾಗಿ ಭಾರತದ ದೇವತೆಗಳನ್ನು ಚಿತ್ರಿಕರಿಸುತ್ತಿದ್ದರು.
ಮುರಾಲ್‌ ಪೆಯಿನಟಿಂಗ್‌ ಅನ್ನುವ ಕಲೆಯು ಇತ್ತಿಚಿಗೆ ಬಂದಿರೋ ಕಲೆ ಅಲ್ಲ, ಈ ಕಲೆಯು ಪ್ಯಾಲೊಯೊಲಿಥಿಕ್‌ ಯುಗದಲ್ಲೇ ಹುಟ್ಟುಕೊಂಡಿತ್ತು. ಈ ಚಿತ್ರಗಳನ್ನು ಗುಹೆಗಳು ಮತ್ತು ಸಮಾಧಿಗಳ ಮೇಲೆ ಬಿಡಿಸುತ್ತಿದ್ದರು.
ಭಾರತದಲ್ಲಿ ಇಂತಹ ಅನೇಕ ಕಲೆಗಳು ಕೇರಳದಲ್ಲಿ ಕಂಡುಬಂದಿವೆ. ಈ ಚಿತ್ರಗಳೆಲ್ಲ 14ನೇ ಶತಮಾನಕ್ಕೆ ಸೇರಿದ್ದವಾಗಿವೆ. ಮಹಾರಾಷ್ಟ್ರದ ಅಜಂತಾ ಗುಹೆಗಳಲ್ಲಿರುವ ಜಾತಕ ಕಥಾ ಚಿತ್ರಗಳು ಸಹ ಮುರಾಲ್‌ ಪೆಯಿನಟಿಂಗ್‌ ಅಡಿಯಲ್ಲೇ ಬರುತ್ತವೆ. ಆದರೆ, 2ನೇ ಶತಮಾನದಲ್ಲೇ ಈ ಚಿತ್ರಗಳನ್ನು ಬಿಡುಸುತ್ತಿದ್ದರು ಎಂದು ನಂಬಲಾಗಿದೆ.


ಭಾರತದ ಅತ್ಯಂತ ಪ್ರಾಖ್ಯಾತ ಮುರಾಲ್‌ ಚಿತ್ರಗಳನ್ನು ನಾವು ಪ್ರಸಿದ್ಧ ಗುಹೆಗಳಲ್ಲಿ, ಭಾರತ ಮತ್ತು ಮುಘಲ್‌ ರಾಜರ ಅರಮನೆಯ ಗೋಡೆಗಳ ಮೇಲೆ ಅಥವಾ ದೇವಸ್ಥಾನಗಳಲ್ಲಿ ನೋಡಬಹುದು.
ಮುರಾಲ್‌ ಚಿತ್ರಗಳನ್ನು ಬಿಡಿಸಲು 2 ಪ್ರಮುಖ ತಂತ್ರಗಳಿವೆ.

  1. ಫ್ರೆಸ್ಕೊ ಸಿಕ್ಕೋ (Fresco Secco): ಈ ತಂತ್ರದಲ್ಲಿ , ಕ್ಯಾಲ್ಸಿಯಂ ಕಾರ್ಬೋನೇಟ್‌ (ಸುಣ್ಣ) ಅಂತ ಬೈಂಡರ್‌ಗಳಲ್ಲಿ ನೈಸರ್ಗಿಕ ಬಣ್ಣಗಳನ್ನು ಹಾಕಿ ನಂತರ ಗೋಡೆಗಳ ಮೇಲೆ ಹಾಕಲಾಗುತ್ತದೆ.
  2. ಬ್ಯೂನ್‌ ಫ್ರೆಸ್ಕೊ (Buon Fresco): ಈ ತಂತ್ರದಲ್ಲಿ, ನೈಸರ್ಗಿಕ ಬಣ್ಣಗಳನ್ನು ಅಗತ್ಯಕ್ಕೆ ಅನುಗುಣವಾಗಿ ನೀರಿನಲ್ಲಿ ಬೆರೆಸಿ ನಂತರ ನೇರವಾಗಿ ಗೋಡೆಯ ಮೇಲೆ ಚಿತ್ರಿಸುತ್ತಾರೆ.
    ಭಾರತದಲ್ಲಿ, ಮುರಾಲ್‌ ಚಿತ್ರಗಳಲ್ಲಿ, ದೇವತೆಗಳು, ಪ್ರಕೃತಿ, ಸಾಮಾಜಿಕ ವಿಷಯಗಳು ಅಥವಾ ಲೈಂಗಿಕತೆಯಂತಹ ವಿಷಯಗಳನ್ನು ಚಿತ್ರಿಸುತ್ತಾರೆ. ಈ ಚಿತ್ರಗಳನ್ನು ಕಲಾವಿದರ ಸ್ವಂತ ಇಚ್ಛೆ ಅಥವಾ ಜನರ ಬೇಡಿಕೆಗಳಿಂದ ಬಿಡಿಸಿ, ಅನೇಕ ಸಿದ್ದಾಂತಗಳನ್ನು ಈ ಚಿತ್ರಗಳ ಮೂಲಕ ಹರಡುಸಿತ್ತಿದ್ದರು.
    ವಿಷ್ಣುಧರ್ಮೋತ್ತರ ಮತ್ತು ಶಿಲ್ಪಶಸ್ತ್ರ ಅಂತಹ ಹಿಂದು ಪುರಾಣಗಳಲ್ಲಿ ಈ ಕಲೆಯನ್ನು ಉಲ್ಲೇಖಿಸಿದ್ದಾರೆ. ಭಾರತದಲ್ಲಿ ಮುರಾಲ್‌ ಚಿತ್ರಗಳು ಎಲ್ಲಾ ರಾಜ್ಯಗಳಲ್ಲಿ ಕೂಡ ಕಂಡುಬರುತ್ತೇವೆ ಆದರೆ, ದಕ್ಷಿಣ ಭಾರತದಲ್ಲಿ, ಅದರಲ್ಲೂ ಕೇರಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವೀಕ್ಷಿಸಬಹುದು.
    ತಮಿಳು ನಾಡಿನ, ಸಿತ್ತನಾವಸಲ್‌ ಅಲ್ಲಿರುವ ಜೈನ ಗುಹೆ ಅಲ್ಲಿ ಒಂದು ಮುರಾಲ್‌ ಚಿತ್ರ ಕಂಡು ಬರುತ್ತದೆ. ಈ ಚಿತ್ರದಲ್ಲಿ ತೀರ್‌ತಂಕರ್‌ ಅವರ ಮೇಲ್‌ ಭಾಗದ ಛಾವಣಿಯಲ್ಲಿ ಕಮಲವೊಂದನ್ನು ಬಿಡಿಸಿದ್ದಾರೆ. ಅದಲ್ಲದೇ, ಈ ಚಿತ್ರದಲ್ಲಿ ಅನೇಕ ಪ್ರಾಣಿಗಳನ್ನು ಸಹ ನೋಡಬಹುದು. ಮಹಾರಾಷ್ಟ್ರದ ಎಲ್ಲೊರಾ ಗುಹೆಗಳಲ್ಲಿರುವ ಕೈಲಾಶನಾಥ ದೇವಾಲಯವನ್ನು ಈ ಮುರಾಲ್‌ ಚಿತ್ರಗಳಿಂದ ಅಲಂಕರಿಸಿದ್ದಾರೆ. ತಂಜಾವೂರಿನಲ್ಲಿರುವ ಬ್ರಿಹಿದೀಶ್ವರ ದೇವಾಲಯವನ್ನು ಕೂಡ ಈ ಚಿತ್ರಗಳಿಂದ ಸಿಂಗಾರಿಸಿದ್ದಾರೆ.
    ಭಾರತದ ಉತ್ತರದ ಭಾಗಗಳಲ್ಲಿ, ಬೌದ್ಧದರ್ಮವು ಈ ಸುಂದರ ಚಿತ್ರಗಳಿಗೆ ಕಾರಣವಾಯಿತು ಎಂದು ಹೇಳುತ್ತಾರೆ.
    ಇಷ್ಟು ಇತಿಹಾಸವಿರುವ ಈ ಚಿತ್ರಗಳನ್ನು ಭಾರತೀಯರು ತಮ್ಮ ಮನೆಯ ಒಳ ಮತ್ತು ಹೊರಭಾಗವನ್ನು ಸಿಂಗಾರಿಸಲು ಬಳಸುತ್ತಾರೆ. ಈ ಚಿತ್ರಗಳನ್ನು ವಿಶೇಷವಾಗಿ ಗೋಡೆಯನ್ನು ಅಲಂಕರಿಸಲು ಬಳಕೆ ಮಾಡುತ್ತಾರೆ.
    ಮನೆಯನ್ನು ಈ ಚಿತ್ರಗಳಿಂದ ಅಲಂಕರಿಸೋಕೆ ಅನೇಕ ಕಾರಣಗಳಿವೆ. ಈ ಚಿತ್ರಗಳು ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತವೆ ಮತ್ತು ಮನೆಯನ್ನು ಸುಂದರಗೊಳಿಸುತ್ತವೆ. ಈ ಚಿತ್ರಗಳನ್ನು ಮನೆಯ ಗೋಡೆಗಳ ಮೇಲೆ ಹೆಚ್ಚಾಗಿ ವೀಕ್ಷಸಬಹುದು. ಅದರಲ್ಲೂ, ರಾಧಾ-ಕೃಷ್ಣ ಮುರಾಲ್‌ ಚಿತ್ರಗಳು ಇತ್ತಿಚ್ಚಿಗೆ ಹೆಚ್ಚು ಪ್ರಸಿದ್ಧವಾಗಿತ್ತಿವೆ. ಈ ಕಲೆಗಳನ್ನು ಮನೆಯಲ್ಲಿ ಹಾಕುವುದರಿಂದ ಮನೆಯಲ್ಲಿ ಎಷ್ಟು ಶ್ರದ್ಧೆಯಿಂದ ಮತ್ತು ಪ್ರೀತಿವಾತ್ಸಲ್ಯದಿಂದ ಇರಬೇಕು ಎನ್ನುವ ಸಂದೇಶವನ್ನು ನೀಡುತ್ತದೆ. ಮನೆಗಳಲ್ಲಿ ಇವನ್ನು ಹಾಕುವುದು ಶೃಂಗಾರದ ದೃಷ್ಟಿಯಿಂದ ಮಾತ್ರವಲ್ಲ, ಅವು ಮನೆಯಲ್ಲಿ ಶಾಂತತೆಯನ್ನು ತರಲು ಸಹಾಯ ಮಾಡತ್ತವೆ. ಇವು ಆಂತರಿಕ ವಿನ್ಯಾಸ ಶೈಲಿಯಿಂದ ಮನೆಗೆ ಹೊಸ ರೂಪವನ್ನು ತರುವಲ್ಲಿ ಕಾರ್ಯನಿರ್ವಹಿಸುತ್ತವೆ.

ಧನ್ಯಾ ರೆಡ್ಡಿ

ಆಲ್ಮಾ ಮೀಡಿಯಾ ಸ್ಕೂಲ್‌ ವಿದ್ಯಾರ್ಥಿನಿ

Show More

Leave a Reply

Your email address will not be published. Required fields are marked *

Related Articles

Back to top button