ಕಾಣೆಯಾಗಿದ್ದ ನೇಪಾಳದ ಮೇಯರ್ ಪುತ್ರಿ, ಗೋವಾದ ಹೋಟೆಲಿನಲ್ಲಿ ಪತ್ತೆ.
ಪಣಜಿ: ನೇಪಾಳದ ಧಂಗಧಿ ಸಬ್ ಮೆಟ್ರೋಪಾಲಿಟನ್ ಸಿಟಿಯ ಮೇಯರ್ ಪುತ್ರಿ ಗೋವಾದಲ್ಲಿ ನಾಪತ್ತೆಯಾದ ಘಟನೆ ದೇಶದಾದ್ಯಂತ ಸುದ್ದಿಗೆ ಮಾಡಿತ್ತು. ಕೆಲ ತಿಂಗಳ ಹಿಂದೆ ಗೋವಾದ ಓಶೋ ಕೇಂದ್ರಕ್ಕೆ ಧ್ಯಾನ ಹಾಗೂ ಆಧ್ಯಾತ್ಮಿಕತೆಯ ಕುರಿತು ಅಧ್ಯಯನ ಮಾಡಲು ಬಂದಿದ್ದ ಆರತಿ ಹಮಲ್ ಅವರು, ಗೋವಾದಲ್ಲಿ ಕಾಣೆಯಾಗಿದ್ದಾರೆ ಎಂದು ಅವರ ತಂದೆ ಹಾಗೂ ಸಂಬಂಧಿಕರು ಆರೋಪ ಮಾಡಿದ್ದರು.
ಈ ಪ್ರಕರಣದ ಬೆನ್ನಟ್ಟಿದ ಪೋಲಿಸರಿಗೆ, ಅರತಿಯವರು ಕೊನೆಯ ಬಾರಿ ಉತ್ತರ ಗೋವಾದ ಸಯೋಲಿಮ್ ನಲ್ಲಿ ಕಂಡಿದ್ದರು ಎಂದು ತಿಳಿದುಬಂದಿತ್ತು. ಇದಾದ ಮೇಲೆ, ಆರತಿ ಅವರ ಸಂಬಂಧಿಕರು ಸಹ ಗೋವಾ ತಲುಪಿದ್ದರು.
ಇದಾದ ನಂತರ, ಪೋಲಿಸರು ರಾಜ್ಯದ ಪ್ರತಿಯೊಂದು ಓಶೋ ಕೇಂದ್ರಗಳಲ್ಲಿ ಇವರು ಪತ್ತೆ ನಡೆಸಿದರು. ತದನಂತರ ಎಲ್ಲಾ ಹೋಟೆಲುಗಳಲ್ಲಿ ಹುಡುಕಿದಾಗ, ಆರತಿಯವರು, ಉತ್ತರ ಗೋವಾದ ಚೊಪ್ಡೆಮ್ ಹಳ್ಳಿಯಲ್ಲಿ ಇರುವ ಒಂದು ಹೋಟೆಲಿನಲ್ಲಿ, ಇಬ್ಬರು ಗೆಳತಿಯರ ಜೊತೆ ಸಿಕ್ಕಿದ್ದಾರೆ.
ಆರತಿಯವರು ತಮ್ಮ ಮೊಬೈಲ್ ಫೋನನ್ನು ಓಶೋ ಕೇಂದ್ರದಲ್ಲಿ ಬಿಟ್ಟಿದ್ದರಿಂದ ಅವರನ್ನು ಟ್ರೇಸ್ ಮಾಡುವುದು ಸಾಧ್ಯವಾಗಲಿಲ್ಲ ಎಂದು ಗೋವಾ ಪೊಲೀಸರು ಮಾದ್ಯಮಗಳಿಗೆ ವರದಿ ನೀಡಿದ್ದಾರೆ.