ತಿರುಪತಿ: ತಿರುಮಲ ತಿರುಪತಿ ದೇವಸ್ಥಾನ (TTD) ಬೋರ್ಡ್ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಬಿ.ಆರ್. ನಾಯ್ಡು, ದೇವಸ್ಥಾನದ ಆವರಣದಲ್ಲಿ ಕೆಲಸ ಮಾಡುವವರು ಹಿಂದೂ ಧರ್ಮಿಯರಾಗಿರಬೇಕು ಎಂದು ಘೋಷಿಸಿದ್ದಾರೆ. “ತಿರುಮಲದಲ್ಲಿ ಎಲ್ಲರೂ ಹಿಂದೂಗಳೇ ಇರಬೇಕು. ಇದು ನನ್ನ ಮೊದಲ ಪ್ರಯತ್ನವಾಗಿರುತ್ತದೆ,” ಎಂದು ಹೇಳಿದ್ದಾರೆ. ಇವರ ಪ್ರಕಾರ, ಈ ವಿಷಯದಲ್ಲಿ ಹಲವಾರು ಸಮಸ್ಯೆಗಳಿದ್ದು, ಸರ್ಕಾರದೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದಾಗಿ ಹೇಳಿದರು.
ಇದಲ್ಲದೆ, ಬಿ.ಆರ್. ನಾಯ್ಡು ಅವರು ಬೇರೆ ಧರ್ಮಕ್ಕೆ ಸೇರಿದ ಸಿಬ್ಬಂದಿಗೆ ಸ್ವಯಂ ನಿವೃತ್ತಿ ಯೋಜನೆ (VRS) ಅಥವಾ ಬೇರೆ ಇಲಾಖೆಗೆ ಬಡ್ತಿ ನೀಡುವ ಸಾಧ್ಯತೆಯಲ್ಲಿದ್ದಾರಂತೆ. ಹೊಸದಾಗಿ ನೇಮಕಗೊಂಡ 24 ಸದಸ್ಯರ ಟಿಟಿಡಿ ಬೋರ್ಡ್‌ನಲ್ಲಿ, ಭಾರತ ಬಯೋಟೆಕ್ ಇಂಟರ್‌ನ್ಯಾಷನಲ್ ಲಿಮಿಟೆಡ್‌ನ ಸಹ ಸಂಸ್ಥಾಪಕಿ ಸುಚಿತ್ರಾ ಅವರು ಕೂಡ ಸದಸ್ಯರಾಗಿ ಸೇರಿದ್ದಾರೆ. ನಾಯ್ಡು ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ರಾಜ್ಯದ ಎನ್‌ಡಿಎ ಸರ್ಕಾರದ ಇತರ ನಾಯಕರಿಗೆ ತಮ್ಮ ಕೃತಜ್ಞತೆ ತಿಳಿಸಿದರು.