RBI ನ ಉಪ ಗವರ್ನರ್ ಆಗಿ ಪೂನಂ ಗುಪ್ತಾ ನೇಮಕ

ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ ಈ ಮುಂಚೆ ಮೈಕಲ್ ಪಾತ್ರಾ ಗವರ್ನರ್ ನಿವೃತ್ತಿಯಾದ ಕಾರಣ. NCAERರ ಮಹಾನಿರ್ದೇಶಕಿ ಪೂನಂ ಗುಪ್ತಾ ಅವರನ್ನು ಭಾರತೀಯ ರಿಸರ್ವ್ ಬ್ಯಾಂಕ್‌ನ ಉಪಗವರ್ನರ್ ಆಗಿ ನೇಮಕಮಾಡಲಾಗಿದೆ. ಕೇಂದ್ರವು ರಾಷ್ಟೀಯ ಅನ್ವಯಿಕ ಆರ್ಥಿಕ ಸಂಶೋಧನಾ ಮಂಡಳಿಯ (NCAER) ಮಹಾನಿರ್ದೇಶಕಿ ಪೂನಂಗುಪ್ತಾ ಅವರನ್ನು ಮೂರು ವರ್ಷಗಳ ಅವಧಿಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಉಪಗವರ್ನರ್ ಆಗಿ ನೇಮಿಸಿದೆ. ಏ.7 ರಿಂದ ಏ.9ರ ವರೆಗೆ ನಡೆಯಲಿರುವ ನಿರ್ಣಾಯಕ ಹಣಕಾಸು ನೀತಿ ಸಮಿತಿ ಸಭೆಗೆ ಮುಂಚಿತವಾಗಿ ಉಪಗವರ್ನರ್‌ಆಗಿ ಪೂನಂ ಗುಪ್ತಾ ಅವರನ್ನು ನೇಮಕಮಾಡಲಾಗಿದೆ. ಈ ವರ್ಷ ನಿವೃತ್ತರಾದ ಮೈಕಲ್ ಪಾತ್ರಾ ಅವರ ಉತ್ತರಾಧಿಕಾರಿಯಾಗಿ ಪೂನಂ ಗುಪ್ತಾ ಅವರನ್ನು ನೇಮಕಗೊಂಡಿದ್ದಾರೆ.

ಯಾರು ಈ ಆರ್‌ಬಿಐ ನ ಹೊಸ ಗವರ್ನರ್ ಪೂನಂ ಗುಪ್ತಾ :
ಪೂನಂ ಗುಪ್ತಾ ಭಾರತದ ಅತಿದೊಡ್ಡ ಆರ್ಥಿಕ ನೀತಿ ಚಿಂತಕರ ಚಾವಡಿಯಾದ ರಾಷ್ಟೀಯ ಅನ್ವಯಿಕ ಆರ್ಥಿಕ ಸಂಶೋಧನಾ ಮಂಡಳಿಯ (NCAER- National Council of Applied Economic Research) ಮಹಾನಿರ್ದೇಶಕರಾಗಿದ್ದಾರೆ. ಪ್ರಧಾನ ಮಂತ್ರಿಗಳ ಸಲಹಾ ಮಂಡಳಿಯ ಸದಸ್ಯರೂ ಮತ್ತು 16 ನೇ ಹಣಕಾಸು ಆಯೋಗದ ಸಲಹಾ ಮಂಡಳಿಯ ಸಂಚಾಲಕರೂ ಆಗಿದ್ದರು. ವಾಷಿಂಗ್ಟನ್ ಡಿಸಿಯಲ್ಲಿ IMF ಮತ್ತು ವಿಶ್ವಬ್ಯಾಂಕ್ ನಲ್ಲಿ ಸುಮಾರು ಎರಡು ದಶಕಗಳ ಕಾಲ ಹಿರಿಯ ಹುದ್ದೆಗಳಲ್ಲಿ ಕೆಲಸ ಮಾಡಿದ ನಂತರ ಅವರು 2021 ರಲ್ಲಿ NCAER ಗೆ ಸೇರಿದರು.
ಗುಪ್ತಾ ಅವರು ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ ಮೇರಿಲ್ಯಾಂಡ್ ವಿಶ್ವವಿದ್ಯಾಲಯ (ಯುಎಸ್‌ಎ) ದಲ್ಲಿ ಮತ್ತು ದೆಹಲಿಯ ಐಎಸ್‌ಐ ನಲ್ಲಿ ಸಂದರ್ಶಕ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. NIPFP ನಲ್ಲಿ RBI ಚೇರ್ ಪ್ರೊಫೆಸರ್ ಆಗಿ ಮತ್ತು ICRIER ನಲ್ಲಿ ಪ್ರೊಫೆಸರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.
NCAER ನಲ್ಲಿ ಅವರು ಆರ್ಥಿಕ ಬೆಳವಣಿಗೆ, ಅಂತರರಾಷ್ಟ್ರೀಯ ಹಣಕಾಸು ವಾಸ್ತುಶಿಲ್ಪ, ಕೇಂದ್ರ ಬ್ಯಾಂಕಿಂಗ್, ಸ್ಧೂಲ ಆರ್ಥಿಕ ಸ್ಥಿರತೆ, ಸಾರ್ವಜನಿಕ ಸಾಲ ರಾಜ್ಯ ಹಣಕಾಸು ಕುರಿತು ಸಂಶೋಧನೆ ನಡೆಸಿದ್ದಾರೆ.
ಅಮೆರಿಕಾದ ಮೇರಿಲ್ಯಾಂಡ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪಿಎಚ್‌ಡಿ ಪದವಿಗಳನ್ನು ಪಡೆದಿದ್ದಾರೆ. ದೆಹಲಿ ವಿಶ್ವವಿದ್ಯಾಲಯದಲ್ಲಿ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ ಹಾಗೂ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಅಂತರರಾಷ್ಟ್ರೀಯ ಅರ್ಥಶಾಸ್ತ್ರದಲ್ಲಿ ಪಿಎಚ್‌ಡಿ ಪಡೆದ ಕಾರಣ ಅವರು 1998 ರ ಎಕ್ಸಿಮ್ ಬ್ಯಾಂಕ್ ಪ್ರಶಸ್ತಿಯನ್ನು ಗೆದ್ದರು.

ಈ ಹಿಂದೆ ಪೂನಂ ಗುಪ್ತಾ ಅವರು ವಿಶ್ವ ಬ್ಯಾಂಕಿನಲ್ಲಿ ಪ್ರಮುಖ ಅರ್ಥಶಾಸ್ತ್ರಜ್ಞರಾಗಿ ಸೇವೆ ಸಲ್ಲಿಸಿದ್ದು, ಹೀಗಾಗಿ ಇವರು ಜಾಗತಿಕ ಅರ್ಥಶಾಸ್ತ್ರ ವಿಭಾಗದಲ್ಲಿ ಅಪಾರ ಅನುಭವವನ್ನು ಹೊಂದಿರುವ ಕಾರಣ ಭಾರತೀಯ ರಿಸರ್ವ್ ಬ್ಯಾಂಕ್‌ನ ಉಪ ಗವರ್ನರ್ ಆಗಿದ್ದಾರೆ. ಭಾರತದ ಆರ್ಥಿಕತೆಗೂ ಹಾಗೂ ರಾಷ್ಟ್ರೀಯ ಆರ್ಥಿಕತೆಗೂ ಹೆಚ್ಚು ವ್ಯತ್ಯಾಸವಿದ್ದು , ಪೂನಂ ಗುಪ್ತಾ ಅವರು ಸಮತೋಲನವನ್ನು ಕಾಪಾಡುವ ಜೊತೆಗೆ, ಹೊಸ (ಆರ್‌ಬಿಐ) ಯೋಜನೆಗಳ ಮೂಲಕ ಭಾರತದ ಆರ್ಥಿಕತೆಯನ್ನು ಇನ್ನಷ್ಟು ಬಲಪಡಿಸುವ ಕಡೆ ಯೋಜನೆ ರೂಪಿಸಬೇಕಿದೆ.
ಸಂಗೀತ .ಎಸ್
ಆಲ್ಮಾ ನ್ಯೂಸ್ ವಿದ್ಯಾರ್ಥಿನಿ