Education
ಇಂದು ಮಧ್ಯಾಹ್ನ 3 ಗೆಂಟೆಗೆ ಪ್ರಕಟವಾಗಲಿದೆ, ಪಿಯುಸಿ ಪರೀಕ್ಷೆ -3 ರ ಫಲಿತಾಂಶ.
ಬೆಂಗಳೂರು: ಇಂದು ಜುಲೈ 16 ರಂದು, ಮಧ್ಯಾಹ್ನ 3 ಗಂಟೆಗೆ ಪಿಯುಸಿ-3 ರ ಫಲಿತಾಂಶವನ್ನು ಬೋರ್ಡ್ ಪ್ರಕಟ ಮಾಡಲಿದೆ. ನೀವು ನಿಮ್ಮ ಫಲಿತಾಂಶವನ್ನು karresults.nic.in ಮೂಲಕ ನೋಡಬಹುದು.
ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯು ಮೊಟ್ಟಮೊದಲ ಬಾರಿಗೆ ಎಸ್ಎಸ್ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಉತ್ತೀರ್ಣರಾಗಲು ಮೂರು ಅವಕಾಶಗಳನ್ನು ನೀಡಿತ್ತು. ಈಗಾಗಲೇ ಮೂರು ಅವಕಾಶಗಳು ಮುಕ್ತಾಯವಾಗಿದೆ. ಪರೀಕ್ಷೆಗೆ ಹಾಜರಾಗಿ, ಉತ್ತೀರ್ಣರಾಗಲು ಕಾಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶುಭವಾಗಲಿ ಎಂದು ಹಾರೈಸುತ್ತೇವೆ.