ʼಶಿವಾಜಿʼ ಪಾತ್ರದಲ್ಲಿ ರಿಷಬ್, ನೆಟ್ಟಿಗರಿಂದ ಆಕ್ರೋಶ
ಸ್ಯಾಂಡಲ್‌ವುಡ್ ಡಿವೈನ್ ಸ್ಟಾರ್ ಕಮ್ ನಿರ್ದೇಶಕರಾಗಿರುವ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ರಿಷಬ್ ಶೆಟ್ಟಿ ಕಾಂತಾರ ಚಿತ್ರದ ಮೂಲಕ ಭಾರೀ ಸದ್ದು ಮಾಡಿದ್ದರು. ಇದೀಗ ಸೋಶಲ್ ಮೀಡಿಯಾದಲ್ಲಿ ಭಾರೀ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಸದ್ಯ ರಿಷಬ್ ಬಾಲಿವುಡ್‌ಗೆ ಕಾಲಿಡಲು ಸಿದ್ಧರಾಗಿದ್ದಾರೆ. ಇತ್ತೀಚಿಗೆ ತಮ್ಮ ಮುಂದಿನ ಸಿಮಿಮಾವೊಂದರ ಪೋಸ್ಟರ್ ರಿಲೀಸ್ ಮಾಡಿದ್ದ ರಿಷಬ್ ಶೆಟ್ಟಿ, ಆ ಪೋಸ್ಟರ್‌ನಲ್ಲಿ ಛತ್ರಪತಿ ಶಿವಾಜಿ ವೇಷದಲ್ಲಿ ಕಾಣಿಸಿಕೊಂಡಿದ್ದರು. ಈಗ ಈ ಚಿತ್ರದ ಪೋಸ್ಟರ್ ರಿಲೀಸ್ ಆಗುತ್ತಿದ್ದಂತೆಯೇ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಛತ್ರಪತಿ ಶಿವಾಜಿ ಪಾತ್ರದಲ್ಲಿ ನಟಿಸಲಿದ್ದು ಅದು 2027 ರಲ್ಲಿ ತೆರೆಕಾಣಲಿದೆ ಎಂದು ಹೇಳಲಾಗಿದೆ.
ಸ್ವತಃ ರಿಷಬ್ ಶೆಟ್ಟಿಯವರೇ ತಮ್ಮ ಇನಸ್ಟಾಗ್ರಾಮ್‌ನಲ್ಲಿ ಈ ಪೋಸ್ಟನ್ನು ಹಾಕಿಕೊಂಡಿದ್ದರು. ಪೋಸ್ಟರ್ ಹಾಕುತ್ತಿದ್ದಂತೆಯೆ ಕೆಲವು ಜನ “ಶಿವಾಜಿ ಶೃಂಗೇರಿ ಮಠದ ಮೇಲೆ ದಾಳಿ ಮಾಡಿದ್ದು, ಹಾಗೆಯೇ ಬೆಲ್ವಾಡಿ ಮಲ್ಲಮ್ಮನ ಎದುರು ಸೋತು ಕ್ಷಮೆ ಕೇಳಿದ್ದು ಸೇರಿದಂತೆ ಹಲವಾರು ದೇಶ ವಿರೋಧಿ ಕೆಲಸವನ್ನು ಮಾಡಿರುವಂತಹ ಶಿವಾಜಿಯ ಪಾತ್ರವನ್ನ ರಿಷಬ್‌ಶೆಟ್ಟಿ ಮಾಡುತ್ತಿದ್ದಾರೆ” ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು. ಆ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ರಿಷಬ್ ಶೆಟ್ಟಿ ಕನ್ನಡ ವಿರೋಧಿ ಎಂದು ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.
ಮೇಘಾ ಜಗದೀಶ್
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ