India
ಇಂದಿನ ಶೇರು ಮಾರುಕಟ್ಟೆ – 05/04/2024

ಇಂದು ಶುಕ್ರವಾರದ ಶೇರು ಮಾರುಕಟ್ಟೆಯಲ್ಲಿ ಆರ್‌ಬಿಐನ ವಿತ್ತೀಯ ನೀತಿಗಳು ಹೆಚ್ಚಿನ ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು. ಆದರೆ ಆರ್‌ಬಿಐನ ಸ್ಥಿರ ರಿಪೋ ರೇಟ್, ಹಾಗೂ ಹಣಕಾಸು ವರ್ಷ 2025ರ ಭಾರತದ ಜಿಡಿಪಿ ಬೆಳವಣಿಗೆಯ ಅಂದಾಜು ದರವು ಶೇರು ಮಾರುಕಟ್ಟೆಯನ್ನು ಚಪ್ಪಟೆಯಾದ ಓಟಕ್ಕೆ ಗುರಿ ಮಾಡಿತು. ಇಂದು ಐಟಿ, ಆಟೋ, ಹೆಲ್ತ್ ಕೇರ್ ವಲಯಗಳ ಶೇರುಗಳು ಕೆಂಪು ಬಣ್ಣದಲ್ಲಿ ಮುಕ್ತಾಯಗೊಂಡಿದೆ.
05/04/2024 ರಂದು
- ನಿಫ್ಟಿ-50 – 22,513.70 (0.95 ಅಂಕ ಇಳಿಕೆ)
- ನಿಫ್ಟಿ ಬ್ಯಾಂಕ್ – 48,493.05 (432.25 ಅಂಕ ಏರಿಕೆ)
- ಸೆನ್ಸೆಕ್ಸ್ – 74,248.22 (20.50 ಅಂಕ ಏರಿಕೆ)
ಗಳಿಕೆ ಹಾಗೂ ಕಳೆತ ಅನುಭವಿಸಿದ ಶೇರುಗಳು.
ಗಳಿಕೆ –
- KOTAKBANK (ಕೋಟಕ್ ಮಹಿಂದ್ರ ಬ್ಯಾಂಕ್ ಲಿಮಿಟೆಡ್ ಫುಲ್ ಪೇಡ್ ಆರ್ಡ್. ಶೇರ್ಸ್) – 1.99% ಏರಿಕೆ.
- SBILIFE ( ಎಸ್ಬಿಐ ಲೈಫ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್) – 1.56% ಏರಿಕೆ.
- HDFCANK (ಹೆಚ್‌ಡಿಎಫ್‍ಸಿ ಬ್ಯಾಂಕ್ ಲಿಮಿಟೆಡ್)- 1.47% ಏರಿಕೆ.
ಕಳೆತ –
- GRASIM (ಗ್ರಾಸಿಮ್ ಇಂಡಸ್ಟ್ರೀಸ್ ಲಿಮಿಟೆಡ್)- 1.95% ಇಳಿಕೆ.
- ULTRACEMCO ( ಅಲ್ಟ್ರಾಟೆಕ್ ಸಿಮೆಂಟ್ ಲಿಮಿಟೆಡ್)- 1.74% ಇಳಿಕೆ.
- LT (ಲಾರೆನ್ಸ್ ಅಂಡ್ ಟೂರ್ಬೊ ಲಿಮಿಟೆಡ್)- 1.42% ಇಳಿಕೆ.
ಇಂದಿನ ಚಿನ್ನದ ದರ ಹೀಗಿದೆ.
- 22 ಕ್ಯಾರೆಟ್ ಚಿನ್ನಕ್ಕೆ 10 ಗ್ರಾಂಗೆ ₹67,735.80 ಆಗಿದೆ. ಇಂದು ₹55.46 ದರ ಕಡಿಮೆಯಾಗಿದೆ.
- 24 ಕ್ಯಾರೆಟ್ ಚಿನ್ನಕ್ಕೆ 10 ಗ್ರಾಂಗೆ ₹73,893 ಆಗಿದೆ. ಇಂದು ₹60.50 ದರ ಕಡಿಮೆಯಾಗಿದೆ.
ಡಾಲರ್ ಎದುರು ರೂಪಾಯಿ ಮೌಲ್ಯ.
- ಇಂದು ಡಾಲರ್ ಎದುರು ರೂಪಾಯಿ 0.05% ರಷ್ಟು ಇಳಿಕೆ ಹೊಂದಿ, ₹83.4000 ರಷ್ಟಕ್ಕೆ ಬಂದು ನಿಂತಿದೆ.