ಹೊಸ ವಿಶ್ವದಾಖಲೆ ಸೃಷ್ಟಿಸಿದ RCB ಕ್ಯಾಪ್ಟನ್ …!
ವೆಸ್ಟ್ ಇಂಡೀಸ್ ವಿರುದ್ಧ ಸತತ 3 ನೇ ಬಾರಿಗೆ ಅರ್ಧಶತಕ ಬಾರಿಸಿ, ಭಾರತ ತಂಡದ ಆರಂಭ ಆಟಗಾರ್ತಿ ಸ್ಮೃತಿ ಮಂದಾನ ದಾಖಲೆ ಸೃಷ್ಟಿಸಿದ್ದಾರೆ. ಈ ಮೂಲಕ ಸ್ಮೃತಿ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಅರ್ಧಶತಕಗಳನ್ನು ಬಾರಿಸಿದ ಮೊದಲನೇ ಮಹಿಳಾ ಕ್ರಿಕೆಟರ್ ಎಂಬ ವಿಶ್ವದಾಖಲೆ ಮಾಡಿದ್ದಾರೆ. ಸ್ಮೃತಿ ಮಂದಾನ ಈಗ ನ್ಯೂಜಿಲ್ಯಾಂಡ್‌ನ ಸುಜಿ ಬೇಟ್ಸ್‌ನ ನಂತರ , ಅಂತರಾಷ್ಟ್ರೀಯ ಮಹಿಳಾ ಟಿ20 ಪಂದ್ಯಗಳಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ.
Player | 50+Scores |
---|---|
Smriti Mandhana (India) | 30 |
Suzie Bates (New Zealand) | 29 |
Beth Mooney (Australia) | 25 |
Stefanie Taylor (West Indies) | 22 |
Sophie Devine (New Zealand) | 22 |
ವೆಸ್ಟ್ ಇಂಡೀಸ್ ಮತ್ತು ಭಾರತ ಮಹಿಳಾ ತಂಡಗಳ ನಡುವೆ ಟಿ20 ಪಂದ್ಯಗಳ ಸರಣಿ ನಡೆಯುತ್ತಿದೆ. ಸರಣಿಯ ಅಂತಿಮ ಪಂದ್ಯದಲ್ಲಿ ಸ್ಮೃತಿ ಮಂದಾನ ಅಬ್ಬರಿಸಿದರು. ಸತತ 7 ಎಸೆತಗಳಲ್ಲಿ 7 ಬೌಂಡರಿಸ್ ಬಾರಿಸಿ ಗಮನ ಸೆಳೆದರು.
ನವಿ ಮುಂಬೈನ ಡಾ. ಡಿ. ವೈ ಪಾಟೀಲ್ ಸ್ಟೇಡಿಯಂ ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತ ಭಾರತ ಮೊದಲು ಬ್ಯಾಟಿಂಗ್ ಮಾಡಿತು. ತಂಡದ ಪರ ಆರಂಭಿಕ ಆಟಗಾರ್ತಿಯಾಗಿ ಬ್ಯಾಟಿಂಗ್‌ಗೆ ಬಂದ ಸ್ಮೃತಿ ಮಂದಾನ ಬೌಲರ್‌ಗಳ ಬೆವರಿಳಿಸಿದರು.
ಮೊದಲು ಎರಡು ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದ ಮಂದಾನ ಇದೀಗ 3ನೇ ಪಂದ್ಯದಲ್ಲೂ 27 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿ ಅಬ್ಬರಿಸಿದರು. ತಮ್ಮ ಇನ್ನಿಂಗ್ಸ್ ನಲ್ಲಿ ಒಟ್ಟು 47 ಎಸೆತಗಳನ್ನು ಎದುರಿಸಿ 77 ರನ್ಸ್ ಗಳಿಸಿದರು.
ಹ್ಯಾಟ್ರಿಕ್ 50:
ಸ್ಮೃತಿ ಮಂದಾನ ಸತತ 7 ಬೌಂಡರಿಗಳನ್ನು ಬಾರಿಸಿದ್ದು ಮಾತ್ರವಲ್ಲದೇ, ಕೇವಲ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಸರಣಿಯಲ್ಲಿ ಇದು ಮಂದಾನ ಅವರ ಸತತ ಮೂರನೇ ಅರ್ಧಶತವಾಗಿದೆ. ಇದಕ್ಕೂ ಮುನ್ನ ಮೊದಲ ಟಿ20 ಪಂದ್ಯದಲ್ಲಿ 54 ರನ್, ಎರಡನೇ ಪಂದ್ಯದಲ್ಲಿ 62 ರನ್‌ಗಳ ಇನ್ನಿಂಗ್ಸ್ ಆಡಿದ್ದರು.
ಇದಲ್ಲದೇ, ಟಿ 2೦ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಶ್ರೀಲಂಕಾ ಆಟಗಾರ್ತಿ ಚಾಮರಿ ಅಟಪಟ್ಟು ಅವರ ದಾಖಲೆಯನ್ನು ಸ್ಮೃತಿ ಮಂದಾನ ಮುರಿದಿದ್ದಾರೆ. ಈಗಾಗಲೇ, ಭಾರತ ತಂಡ ನವಿ ಮುಂಬಯಿನಲ್ಲಿ ನಡೆದಿರುವ ಟಿ20 ಸರಣಿಯಲ್ಲಿ ಜಯ ಗಳಿಸಿದೆ.
ತಮ್ಮ ತಂಡಕ್ಕೆ ಹೆಚ್ವು ಅಗತ್ಯವಿರುವಾಗ ಸ್ಮೃತಿ ಮಂದಾನ, ತಂಡದ ನಾಯಕಿ ಮತ್ತು ಆರಂಭಿಕ ಆಟಗಾರ್ತಿಯಾಗಿ ಅತ್ಯುತ್ತಮ ನಾಯಕತ್ವ ಹೊಂದಿದ್ದು, ಉತ್ತಮು ಬ್ಯಾಟಿಂಗ್ ಪ್ರದರ್ಶನ ಕೂಡ ನೀಡುತ್ತಿದ್ದಾರೆ.
ಧನ್ಯಾ ರೆಡ್ಡಿ
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ