Alma Corner

             ದಕ್ಷಿಣ ಚೈನಾ ಸಮುದ್ರಕ್ಕೆ ಬಿದ್ದಿರುವ ಬೆಂಕಿ ಆರುವುದು ಯಾವಾಗ..!?      

             ಮುಂಚಿನಿಂದಲೂ ತೈವಾನ್‌ ಮೇಲೆ ಕಣ್ಣುಹಾಕಿರೋ ಚೈನಾ, ತೈವಾನ್‌ʼನ್ನು ವಶಪಡಿಸಿಕೊಳ್ಳಲು ಮತ್ತೊಮ್ಮೆ ತನ್ನ ಪ್ರಯತ್ನಗಳನ್ನ ತೀವ್ರಗೊಳಿಸಿದೆ. ಹಾಗಾಗಿ ತೈವಾನ್‌ ಜಲಗಡಿಗೆ ಅತಿ ಸಮೀಪದಲ್ಲೇ ಚೈನಾ ಸಮರಾಭ್ಯಾಸ ಪ್ರಾರಂಭಿಸಿದೆ. ಚೈನಾದ 45ಕ್ಕೂ ಹೆಚ್ಚು ಯುದ್ಧ ವಿಮಾನಗಳು ನಮ್ಮ ವಾಯುಪ್ರದೇಶದೊಳಗೆ ಹಾರಾಟ ನಡೆಸಿವೆ ಎಂದು ತೈವಾನ್‌ ಆರೋಪಿಸಿದೆ. ತೈವಾನ್‌ ಆಕ್ರಮಿಸಿಕೊಳ್ಳೋ ಚೈನಾದ ಯೋಜನೆಗೆ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಿರುವ ಅಮೆರಿಕಾ, ತನ್ನ ಎರಡು ಯುದ್ಧ ನೌಕೆಗಳನ್ನು ತತ್‌ʼಕ್ಷಣ ತೈವಾನ್‌ʼನತ್ತ ರವಾನೆ ಮಾಡಿದೆ.  ಇದು ದಕ್ಷಿಣ ಚೈನಾ ಸಮುದ್ರದಲ್ಲಿ ಮತ್ತೊಂದು ಸುತ್ತಿನ ಸಂಘರ್ಷಕ್ಕೆ ಕಾರಣವಾಗೋ ಎಲ್ಲಾ ಲಕ್ಷಣಗಳು ಕಾಣಿಸ್ತಿವೆ!

               ಮೊದಲಿನಿಂದಲೂ ಇಡೀ ದಕ್ಷಿಣ ಚೀನಾ ಸಾಗರದ ಮೇಲೆ ಹಕ್ಕು ಸಾಧಿಸಲು ಪ್ರಯತ್ನಿಸುತ್ತಿರೋ ಚೈನಾ, ಇಡೀ ದಕ್ಷಿಣ ಚೈನಾ ಸಾಗರವೇ ತನಗೆ ಸೇರಿದ್ದು ಅಂತಾ ವಾದಿಸ್ತಿದೆ. ಇದಕ್ಕೆ ಕಾರಣ ದಕ್ಷಿಣ ಚೈನಾ ಸಾಗರದಲ್ಲಿರೋ ಅಪಾರ ಖನಿಜ ಹಾಗೂ ತೈಲ ಸಂಪತ್ತು. ಯಾವಾಗ ಈ ಸಾಗರದಡಿಯಲ್ಲಿ ಅಪಾರ ಸಂಪತ್ತಿದೆ ಅನ್ನೋದು ಚೈನಾಗೆ ಅರಿವಾಯ್ತೋ, ಅವತ್ತಿನಿಂದ ಈ ದಕ್ಷಿಣ ಚೈನಾ ಸಾಗರ ಪ್ರದೇಶ ಸಂಘರ್ಷದ ಪ್ರದೇಶವಾಗಿ ಬದಲಾಗಿದೆ. ಈಗಾಗಲೇ ಈ ಭಾಗದಲ್ಲಿ ಕೃತಕ ದ್ವೀಪಗಳನ್ನೂ ಸ್ಥಾಪಿಸಿಕೊಂಡಿರುವ ಚೈನಾ, ಅಲ್ಲಿ ತನ್ನ ಸೇನಾ ವಿಮಾನಗಳು, ಮಿಸೈಲ್‌ʼಗಳನ್ನಿಟ್ಟು ಇಡೀ ಸಾಗರದ ಮೇಲೆ ತನ್ನ ಪ್ರಭುತ್ವ ಸಾಧಿಸೋಕೆ ಹವಣಿಸುತ್ತಿದೆ. ಇದು ಹಡಗುಗಳು ಸಂಚರಿಸೋ ಪ್ರಮುಖ ಅಂತಾರಾಷ್ಟ್ರೀಯ ವ್ಯಾಪಾರೀ ಮಾರ್ಗವೂ ಆಗಿರೋದ್ರಿಂದ, ಅಮೆರಿಕಾ, ತೈವಾನ್‌ ಸೇರಿ, ಈ ಸಾಗರದ ಸುತ್ತಮುತ್ತಲಿನ ದೇಶಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿವೆ. ಇದು ಅಂತಾರಾಷ್ಟ್ರೀಯ ವ್ಯಾಪಾರಿ ಮಾರ್ಗ ಆಗಿರೋದ್ರಿಂದ, ಇದು ಎಲ್ಲ ದೇಶಗಳಿಗೂ ಮುಕ್ತವಾಗಿರ್ರಬೇಕು, ಯಾವುದೇ ಒಂದು ದೇಶ ಇದರ ಮೇಲೆ ಸಾರ್ವಭೌಮತ್ವ ಸ್ಥಾಪಿಸಲು ಅವಕಾಶ ಕೊಡೋದಿಲ್ಲ ಅನ್ನೋದು ಅಮೆರಿಕಾದ ವಾದ. ಹಾಗಾಗಿ ಆಗಾಗ ಇಲ್ಲಿ, ಅಮರಿಕ ಯುದ್ಧ ನೌಕೆಗಳು ಹಾಗೂ PLA(Peopleʼs Liberation Army) ನಡುವೆ ಘರ್ಷಣೆಗಳು ನಡೆಯುತ್ತಲೇ ಇರುತ್ತವೆ!

              ದಕ್ಷಿಣ ಚೈನಾ ಸಾಗರದ ಕಾರಣಕ್ಕೇ, ಚೈನಾ ತೈವಾನ್‌, ವಿಯೆಟ್ನಾಂ, ಫಿಲಿಫೀನ್ಸ್‌, ಇಂಡೋನೇಷ್ಯಾ ಇವೆಲ್ಲಾ ದೇಶಗಳ ವಿರೋಧ ಕಟ್ಕೊಂಡಿದೆ. ಚೈನಾದ ಈ ಆಕ್ರಾಮಿಕ ಸ್ವಭಾವಕ್ಕೆ ಬೆದರಿರುವ ಈ ರಾಷ್ಟ್ರಗಳು, ಒಂದೊಂದಾಗಿ ಬಾರತದ ಸ್ನೇಹ ಬಯಸುತ್ತಿದೆ. ಹಾಗಾಗಿ ಭಾರತ ತನ್ನ ಅತಿ ಬಲಿಷ್ಠ ʼಬ್ರಾಹ್ಮೋಸ್‌ʼ ಕ್ಷಿಪಣಿಯನ್ನ ಈ ದೇಶಗಳಿಗೆ ಮಾರಾಟ ಮಾಡುವತ್ತ ದಿಟ್ಟ ಹೆಜ್ಜೆ ಇಟ್ಟಿದೆ.  ತೈವಾನ್‌ʼನ್ನು ಆಕ್ರಮಿಸಿಕೊಳ್ಳೊ ಚೈನಾ ಆಸೆಗೆ ಪ್ರಮುಖ ಕಾರಣ, ತೈವಾನ್‌ ಜಾಗತಿಕ semiconductor ಉತ್ಪಾದನೆಯ ದೈತ್ಯ ರಾಷ್ಟ್ರ ಅನ್ನೋದು. ಇವತ್ತಿನ ಉತ್ಪಾದನಾ ವಲಯದಲ್ಲಿ ಈ semiconductor ಅನ್ನೋದು ಅತೀ ಅವಶ್ಯವಾದ  ವಸ್ತು. ಪ್ರತಿಯೊಂದು ಎಲೆಕ್ಟ್ರಾನಿಕ್‌ ಉಪಕರಣದ ತಯಾರಿಕೆಯಲ್ಲೂ ಈ semiconductor ಬೇಕೇ ಬೇಕು. ಹಾಗಾಗಿ ಈಗಾಗಲೇ ಜಾಗತಿಕ ತಯಾರಿಕಾ ಫ್ಯಾಕ್ಟರಿಯಾಗಿ ಬದಲಾಗಿರೋ ಚೈನಾ,  ತೈವಾನ್‌ ವಶಪಡಿಸಿಕೊಂಡಲ್ಲಿ ಸೆಮಿಕಂಡಕ್ಟರ್‌ ಉತ್ಪಾದನೆಯಲ್ಲೂ ತಾನು ಸಾರ್ವಭೌಮತ್ವ ಹೊಂದಬಹುದು ಅನ್ನೋದು ಚೈನಾದ ಕನಸು. ಆದರೆ ತೈವಾನ್‌ ವಶಪಡಿಸಿಕೊಳ್ಳೋದು ಚೈನಾಗೆ ಅಷ್ಟು ಸುಲಭದ ಕೆಲಸವಲ್ಲ, ಯಾಕಂದ್ರೆ, ತೈವಾನ್‌ʼಗೆ ಅಮೆರಿಕದ ಬೆಂಬಲವಿದೆ. ತೈವಾನ್‌ʼನಲ್ಲಿ ಅಮೆರಿಕಾದ ಹೂಡಿಕೆಗಳಿವೆ. ಚೈನಾ ತೈವಾನ್ʼನ್ನು ಆಕ್ರಮಿಸಿಕೊಳ್ಳೋ ಪ್ರಯತ್ನ ಮಾಡಿದಾಗಲೆಲ್ಲ, ಅದು ಅಮೆರಿಕದ ಸೇನೆಯನ್ನು ದಕ್ಷಿಣ ಚೀನಾ ಸಮುದ್ರದತ್ತ ಎಳೆದು ತರುತ್ತದೆ. ಅಮೆರಿಕ ಸೇನೆಯನ್ನ ಎದುರಿಸೋದು ಸುಲಭವಲ್ಲಅನ್ನೋ ವಿಷಯ ಚೈನಾಗೂ ಗೊತ್ತಿದೆ. ಜೊತೆಗೆ ತೈವಾನ್‌ ಮೇಲೆ ಒಂದೊಮ್ಮೆ ಚೈನಾ ಯುದ್ಧ ಸಾರಿದಲ್ಲಿ, ರಷ್ಯಾ ಹಾಗೂ ಉತ್ತರ ಕೊರಿಯಾಗಳು ಎಷ್ಟರ ಮಟ್ಟಿಗೆ ಮೆರಿಕಕ್ಕೆ ವಿರುದ್ಧವಾಗಿ, ವೈನಾಗೆ ಸಹಾಯ ಮಾಡಬಲ್ಲವು ಎನ್ನುವುದು ಕೂಡ ಪ್ರಶ್ನಾರ್ಹ! ಈ ಕಾರಣಕ್ಕಾಗೇ ಚೈನಾ ತೈವಾನ್‌ ವಿಷಯದಲ್ಲಿ ಎಟವಟ್ಟು ಮಾಡಿಕೊಂಡು, ನೇರವಾಗಿ ಅಮೆರಿಕ ಸೇನೆಯನ್ನೇ ಎದುರಿಸುವ ಸಾಹಸ ಮಾಡುತ್ತಿಲ್ಲ! ಹಾಗಾಗಿ ʼತೈವಾನ್‌ ಯಾವತ್ತಿದ್ದರೂ ಚೈನಾದ ಭಾಗ, ನಾವು ಬಲಪ್ರಯೋಗದಿಂದಾದರೂ ಅದನ್ನು ವಶಪಡಿಸಿಕೊಳ್ಳುತ್ತೇವೆʼ ಎಂದು ಚೈನಾ ಅನೇಕ ಬಾರಿ ಹೇಳುತ್ತಾ ಬಂದಿದ್ದರೂ, ಇವತ್ತಿನವರೆಗೂ ಅದನ್ನು ಸಾಧಿಸೋಕೆ ಚೈನಾಗೆ ಸಾಧ್ಯವಾಗಿಲ್ಲ!

          ʼಡ್ರ್ಯಾಗನ್‌ʼ ಚೈನಾದ ದುರಾಸೆಯಿಂದ ದಕ್ಷಿಣ ಚೈನಾ ಪ್ರದೇಶಕ್ಕೆ ಬಿದ್ದಿರುವ ಬೆಂಕಿ, ಸದ್ಯಕ್ಕೆ ಆರುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ.  ಸೇನಾ ಘರ್ಷಣೆಯಿಂದ ಹೊತ್ತಿಕೊಂಡಿರುವ ಈ ಬೆಂಕಿ, ಮುಂದಿನ ದಿನಗಳಲ್ಲಿ ʼಜ್ವಾಲಾಮುಖಿʼಯಾಗಿ  ಬದಲಾದರೂ ಅಚ್ಚರಿಯಿಲ್ಲ.!!

ಗಜಾನನ ಭಟ್‌

ಆಲ್ಮಾ ಮೀಡಿಯಾ ಸ್ಕೂಲ್‌ ವಿದ್ಯಾರ್ಥಿ

Show More

Related Articles

Leave a Reply

Your email address will not be published. Required fields are marked *

Back to top button