Alma Corner

ದೇವಾಲಯ ಉತ್ಸವಗಳಲ್ಲಿ ಆನೆಗಳ ಬಳಕೆ ಕುರಿತು, ಕೇರಳ ಹೈಕೋರ್ಟ್‌ ಆದೇಶವನ್ನು ತಡೆಹಿಡಿದ ಸುಪ್ರೀಂ ಕೊರ್ಟ್

ಕೇರಳದ ತ್ರಿಶೂರ್‌ನ ಪೂರಮ್‌ನಲ್ಲಿ, ಅಲಂಕರಿಸಿದ ಆನೆಗಳನ್ನು ಪ್ರದರ್ಶನ ಮಾಡುವುದು ಶತಮಾನಗಳ ಹಳೆಯ ಪರಂಪರೆ. ದೇವಾಲಯದ ಉತ್ಸವಗಳಲ್ಲಿ ಆನೆಗಳ ಬಳಕೆಯ ಕುರಿತು ಕೇರಳ ಹೈಕೋರ್ಟ್‌ ನಿರ್ಭಂದಗಳನ್ನು ವಿಧಿಸಿತ್ತು. ಗುರುವಾರ ಸುಪ್ರೀಂ ಕೋರ್ಟ್‌ ಈ ನಿರ್ಭಂದಗಳಿಗೆ ತಾತ್ಕಾಲಿಕವಾಗಿ ತೆರೆ ಎಳೆದಿದೆ. ಕೇರಳ ಹೈಕೋರ್ಟ್‌ ವಿಧಿಸಿದ ಈ ನಿಯಮಗಳನ್ನ, ಸರ್ವೋಚ್ಛ ನ್ಯಾಯಲಯ ʼಅಪ್ರಾಯೋಗಿಕʼ ಮತ್ತು ನ್ಯಾಯಂಗ ಮೀತಿ ಮೀರುತ್ತಿದೆ ಎಂದು ಹೇಳಿದೆ.
ನವೆಂಬರ್‌ನಲ್ಲಿ ನೀಡಿದ ಆದೇಶದಲ್ಲಿ, ಕೇರಳ ಹೈಕೊರ್ಟ್‌ ವಿಧಿಸಿದ ಕಠಿನ ಮಾರ್ಗಸೂಚಿಗಳಲ್ಲಿ, ಬರೀ 10 ಆನೆಗಳನ್ನು ಬಳಸಬೇಕು ಮತ್ತು ಉತ್ಸವದ ಮೆರವಣಿಗೆಯಲ್ಲಿ ಕನಿಷ್ಠ 3 ಮೀಟರ್‌ ಅಂತರವಿರಬೇಕು ಎಂದು ಕೇರಳದ ಹೈಕೊರ್ಟ್‌ ಸೂಚಿಸಿತ್ತು, ಆದರೆ ಸುಪ್ರೀಂ ಕೊರ್ಟ್‌ ಈ ಮಾರ್ಗಸೂಚಿಗಳಲ್ಲಿ ನಿರ್ಭಂದ ಹೇರಿದೆ.

ಕೇರಳ ಬಂಧಿತ ಆನೆಗಳ (ನಿರ್ವಹಣೆ) ನಿಯಮಗಳು, 2010 ನ ವಿರುದ್ಧ ಹೈಕೋರ್ಟ್‌ ಯಾವುದೇ ಆದೇಶ ಸೂಚಿಸಿದರು ಸದ್ಯಕ್ಕೆ ಜಾರಿಗೊಳಿಸಿವಂತಿಲ್ಲ ಎಂದು ನ್ಯಾ. BV ನಾಗರತ್ನ ಮತ್ತು ನ್ಯಾ. N ಕೋಟಿಸ್ವರ್‌ ಸಿಂಗ್‌ ಆದೇಶಿಸಿದ್ದಾರೆ. ದೇವಾಲಯಗಳ ನಿರ್ವಹಣೆ ಸಮಿತಿಗಳ ಮೇಲ್ಮನವಿನಿಂದ ನ್ಯಾಯಪೀಠ ಈ ಆದೇಶ ನೀಡಿದೆ. ಕೇರಳದಲ್ಲಿ ಈ ಪ್ರಸಿದ್ಧ ಉತ್ಸವವನ್ನು ಆಚರಿಸುತ್ತಾರೆ.

ಹೈಕೋರ್ಟ್‌ನ ಆದೇಶಗಳು ʼಅಪ್ರಾಯೋಗಿಕʼ ವಾಗಿವೆ ಮತ್ತು ನಿಯಮ ಮಾಡುವ ಸಂಸ್ಥೆಗಳ ಬದಲಿಗೆ, ಹೈಕೊರ್ಟ್‌ ಹೇಗೆ ನಿಯಮಗಳನ್ನು ರೂಪಿಸುತ್ತಿದೆ ಎಂದು ಸುಪ್ರೀಂ ಕೊರ್ಟ್‌ ಮೌಖಿಕವಾಗಿ ಟೀಕಿಸಿದೆ. ಕೇರಳ ಹೈಕೋರ್ಟ್‌ ನೀಡಿದ ಮಾರ್ಗಸೂಚಿಗಳಲ್ಲಿ, ಆನೆ ಮತ್ತು ಸಾರ್ವಜನಿಕರ ಮಧ್ಯೆ ಕನಿಷ್ಠ 8 ಮೀಟರ್‌ ಅಂತರವಿರಬೇಕು, ಪಟಾಕಿಗಳಿಂದ ಕನಿಷ್ಠ 100 ಮೀಟರ್‌ ದೂರವಿರಬೇಕು, ಆನೆಗಳ ನಡುವೆ 3 ಮೀಟರ್‌ ಅಂತರವಿರಬೇಕು, ಎರಡು ಪ್ರದರ್ಶನಗಳ ನಡುವೆ ಕನಿಷ್ಠ 3 ದಿನ ವಿರಾಮ ಇರಬೇಕೆಂದು ಸೂಚಿಸಿದೆ.

ಈ ಉತ್ಸವದಲ್ಲಿ ಆನೆಗಳ ಬಳಕೆ “Essential religious practice” ಅಲ್ಲ ಎಂದು ಕೇರಳ ಹೈಕೋರ್ಟ್‌ನ ನ್ಯಾ.AK ಜಯಸೇಕರನ್‌ ನಂಬಿಯರ್‌ ಮತ್ತು ನ್ಯಾ.P ಗೋಪಿನಾಥ್‌ ದ್ವಿಸದಸ್ಯ ಪೀಠ ತಿಳಿಸಿದೆ. ಇದನ್ನು ಕುರಿತು, ಕೇರಳದ ಎರಡು ದೇವಾಲಯ ಮಂಡಳಿಗಳು ಸುಪ್ರೀಂ ಕೊರ್ಟ್‌ನಲ್ಲಿ ಅರ್ಜಿ ಹಾಕಿವೆ.

ಧನ್ಯಾ ರೆಡ್ಡಿ

ಆಲ್ಮಾ ಮೀಡಿಯಾ ಸ್ಕೂಲ್‌ ವಿದ್ಯಾರ್ಥಿನಿ

Show More

Leave a Reply

Your email address will not be published. Required fields are marked *

Related Articles

Back to top button