Alma Corner

ತಮಿಳುನಾಡಿನ ಬಜೆಟ್‌ನಲ್ಲಿ ₹ ಚಿಹ್ನೆಗೆ ನಿರ್ಬಂದ,,ಮತ್ತೇನಿರಲಿದೆ..?

ಹಿಂದಿ ಹೇರಿಕೆಯ ವಿರುದ್ದದ ಸಮರವೇ..?

ತಮಿಳುನಾಡು: ಮೊದಲಿನಿಂದಲು ತಮಿಳುನಾಡು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ನಡುವೆ ಶೀತಲ ಸಮರ ಇರುವ ವಿಚಾರ ಎಲ್ಲರಿಗೂ ತಿಳಿದಿದ್ದೆ, ಅದಕ್ಕೆ ಕಾರಣಗಳು ಸಾಕಷ್ಟು, ಪ್ರಮುಖವಾಗಿ ಅದು ರಾಜಕೀಯವಾಗಿಯೂ, ಭಾಷೆಯ ವಿಚಾರವಾಗಿಯೂ ರಾಷ್ಟ್ರೀಯ ಮಟ್ಟದಲ್ಲಿ ಹಿಂದಿನಿಂದಲೂ ಸಹ ಚರ್ಚೆಯಲ್ಲಿದೆ, ಅದಕ್ಕೆ ಪೂರಕವಾಗಿ 1968ರ ಭಾರತದ ರಾಷ್ಟ್ರೀಯ ಶಿಕ್ಷಣ ನೀತಿ(NPE)ಯ ತ್ರಿಭಾಷ ಕಲಿಕಾ ನೀತಿಯನ್ನು ತಮಿಳುನಾಡಿನ ಆಡಳಿತ ಪಕ್ಷವಾಗಿದ್ದ ಡಿಎಮ್‌ಕೆ(DMK), ಪಕ್ಷದ ಬೆಂಬಲಿಗರು, ತಮಿಳು ಭಾಷಾಭಿಮಾನಿಗಳು ಸೇರಿ ಆಗಿನ ಕಾಲದಲ್ಲಿ ಧರಣಿ, ಹೋರಾಟಗಳ ಮೂಲಕ ವಿರೋಧಿಸಿ ತನ್ನ ದ್ವಿಭಾಷ(ತಮಿಳು ಮತ್ತು ಇಂಗ್ಲೀಷ್) ನೀತಿಯನ್ನೆ ಮುಂದುವರೆಸುವ ಕೆಲಸ ಮಾಡಿತ್ತು.

1986ರ(NPE-National policy of education) ಯೋಜನೆಯಾದ  ತ್ರಿಭಾಷ ಕಲಿಕಾ(ಪ್ರಾದೇಶಿಕ ಭಾಷೆ, ಹಿಂದಿ ಹಾಗೂ ಇಂಗ್ಲೀಷ್) ನೀತಿಯನ್ನು ತನ್ನ ರಾಜ್ಯದಲ್ಲಿ ಶೈಕ್ಷಣಿಕ ಹಂತದಲ್ಲಿ ಮಕ್ಕಳಿಗೆ ಆಯ್ಕೆಯ ರೂಪದಲ್ಲಿ ಜಾರಿಮಾಡಿತ್ತು. ಆದರೆ 2020 ರ ಸಾಲಿನಲ್ಲಿ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ(NEP-ತ್ರಿಭಾಷ ಸೂತ್ರ) ಯನ್ನು ಖಡ್ಡಾಯವಾಗಿ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರ ಆದೇಶಿಸಿದರು ತಮಿಳುನಾಡು ಅದನ್ನು ವಿರೋಧಿಸುತ್ತಾ ಬಂತು, 2023-24 ರ ನಿರ್ಣಯದಂತೆ  ಭಾರತದ ರಾಷ್ಟ್ರೀಯ ಶಿಕ್ಷಣ ನೀತಿ(NEP)ಯ ಯೋಜನೆಯನ್ನು ಸಹ ತಮಿಳುನಾಡು ವಿರೋಧಸುತ್ತಿದೆ.

2024ರ ಬಜೆಟ್‌ನ ಮಂಡಿಸುವ ವೇಳೆ ಭಾರತದೆಲ್ಲೆಡೆ ಪ್ರಚಲಿತದಲ್ಲಿರುವ ಭಾರತದ ರೂಪಾಯಿಯನ್ನು ಸೂಚಿಸುವ ಚಿಹ್ನೆಯಾದ ʼ ʼ ಅನ್ನು ತಮಿಳುನಾಡಿನ‌ ಮುಖ್ಯಮಂತ್ರಿಯಾದ ಎಂ.ಕೆ ಸ್ಟಾಲಿನ್ ಅವರು ತಮ್ಮ 2024ರ ಬಜೆಟ್‌ನಲ್ಲಿ ಖಡತದ ಮೇಲೆ ಬರೆಯಲಾಗಿದ್ದ “₹ಬಜೆಟ್” ಅನ್ನು ತೆಗೆದು, ತಮಿಳು ಅಕ್ಷರದಲ್ಲೆ 2025ರ ಬಜೆಟ್‌ನ ಲೋಗೊ ಮುದ್ರಿಸಿ ಕೇಂದ್ರ ಸರ್ಕಾರಕ್ಕೆ ನೇರವಾಗಿ ಹಿಂದಿ ಹೇರಿಕೆಯ ವಿರುದ್ದ ಸಂದೇಶ ರವಾನಿಸಿದಂತಿದೆ, ಇದಕ್ಕೆ ಪ್ರತಿಕ್ರಿಯೆ ನೀಡಿರುವ  ಅಣ್ಣಾಮಲೈ ಆ ಚಿಹ್ನೆಯನ್ನು ಅವರದ್ದೆ ಪಕ್ಷದ ಶಾಸಕನ ಪುತ್ರ ಉದಯ್‌ ಕುಮಾರ್‌(ಸದ್ಯ ಅವರು ಐಐಟಿ ಗುವಾಹಟಿ ಯಲ್ಲಿ ಪ್ರೊಫೆಸರ್‌ ಅಗಿದ್ದಾರೆ) 2010ರಲ್ಲಿ ರಚಿಸಿದ್ದರು, ಈ ಚಿಹ್ನೆ ಭಾರತದೆಲ್ಲೆಡೆ ಪ್ರಚಲಿತದಲ್ಲಿದೆ, ಇದನ್ನು ಗಮನಿಸದೆ ಆ ಚಿಹ್ನೆಯನ್ನು ಬಜೆಟ್‌ನಲ್ಲಿ ಬಳಸದೆ ನಿರ್ಬಂಧಿಸಿರುವುದು  ಮೂರ್ಖ ನಿರ್ಧಾರ ಎಂದು ಪ್ರತಿಕ್ರಯಿಸಿದ್ದಾರೆ.

ಕೇಂದ್ರ ಸಚಿವೆ ನಿರ್ಮಲ ಸೀತಾರಾಮ್‌ಕೂಡ ಇದನ್ನು ಟೀಕಿಸಿ ತಮ್ಮದೆ ನೆಲದ ಸಾಧಕನಿಗೆ ಮುಖ್ಯಮಂತ್ರಿಯಾದ ಎಂ.ಕೆ ಸ್ಟಾಲಿನ್ ಅವರು ಅವಮಾನ ಮಾಡಿದ್ದಾರೆ ಎಂದು ಟ್ವೀಟರ್‌ನಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ, ಇದರೊಂದಿಗೆ ಎಂ.ಕೆ ಸ್ಟಾಲಿನ್ ಅವರು ಕೇಂದ್ರ ಸರ್ಕಾರದ ವಿರುದ್ದ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ(NEP-ತ್ರಿಭಾಷ ಸೂತ್ರ), ಹಿಂದಿ ಹೇರಿಕೆಯ ವಿರುದ್ದ ನೇರ ಸಮರ ಸಾರಿದಂತೆ ಕಾಣುತ್ತಿದೆ.

Show More

Related Articles

Leave a Reply

Your email address will not be published. Required fields are marked *

Back to top button