ಇಸ್ಲಾಂ ಧರ್ಮದವರ ಪವಿತ್ರ ಹಬ್ಬ ರಂಜಾನ್ …

ಮುಸ್ಲಿಮರ ಪವಿತ್ರ ಹಬ್ಬದಲ್ಲಿ ರಂಜಾನ್ ಹಬ್ಬವು ಕೂಡ ಒಂದು. ಕುರಾನ್ ಧರ್ಮ ಗ್ರಂಥವು ಪ್ರವಾದಿ ಮಹಮ್ಮದ್ ಅವರಿಗೆ ದೇವದೂತರಿಂದ ದೂರೆತ ಮೊದಲ ತಿಂಗಳು ಎಂದು ನಂಬುವ ಇಸ್ಲಾಂ ಧರ್ಮೀಯರು ಇದೆ ತಿಂಗಳಿನಲ್ಲಿ(ಮಾ.31) ಬರುವ ರಂಜಾನ್‌ಅನ್ನು ಸಡಗರದಿಂದ ಆಚರಿಸುತ್ತಾರೆ. ಆದ್ದರಿಂದ ಪವಿತ್ರ ರಂಜಾನ್ಅನ್ನು ಉಪವಾಸ ಮತ್ತು ಧಾನ ಧರ್ಮದ ಮೂಲಕ ಆಚರಿಸಲಾಗುತ್ತದೆ.

ರಂಜಾನ್ ಹಬ್ಬ-
ಮುಸ್ಲಿಮರ ಪವಿತ್ರ ಹಬ್ಬಗಳಲ್ಲಿ ರಂಜಾನ್ ಹಬ್ಬವೂ ಕೂಡ ಒಂದಾಗಿದೆ. ಪ್ರತಿ ವರ್ಷ ರಂಜಾನ್ ದಿನವನ್ನು ಬಹಳ ಶ್ರದ್ಧೆಯಿಂದ ಆಚರಿಸುತ್ತಾರೆ. ಈ ರಂಜಾನ್ ಹಬ್ಬದಲ್ಲಿ ಒಂದು ತಿಂಗಳ ಕಾಲ ಮುಸ್ಲಿಮರು ಉಪವಾಸ ಮಾಡುತ್ತಾರೆ. ಸೂರ್ಯೋದಯದಿಂದ ಶುರುವಾಗುವ ಉಪವಾಸ ಸೂರ್ಯೋಸ್ತದಲ್ಲಿ ಕೊನೆಗೊಳಿಸುತ್ತಾರೆ. ನಂತರ ಅಗತ್ಯವಿರುವ ಆಹಾರವನ್ನು ಸೇವಿಸುತ್ತಾರೆ. ಹಾಗೂ ಈ ಉಪವಾಸವನ್ನು ರಂಜಾನ್ ಹಬ್ಬದಲ್ಲಿ ಮಾಡುವ (ರೋಜಾ) ಎಂದು ಕರೆಯುತ್ತಾರೆ. ಮಾತ್ರವಲ್ಲದೇ ಈ ರಂಜಾನ್ ಹಬ್ಬದಲ್ಲಿ ನಮಾಜ್, ದಾನ , ಕುರಾನ್ ಜಪ ಮಾಡುವ ಮೂಲಕ ದೇವರನ್ನು ಸ್ಮರಿಸಲಾಗುತ್ತದೆ.
ಮುಸ್ಲಿಮರು ಸೂರ್ಯೋದಯದಕ್ಕಿಂತ ಮುಂಚೆ ಕುಟುಂಬ ಸದಸ್ಯರೊಂದಿಗೆ ಸೇವಿಸುವ ಆಹಾರ ಸಮಯವನ್ನು ( ಸಹಿರಿ) ಹಾಗೂ ಸೂರ್ಯಾಸ್ತದ ವೇಳೆ ಉಪವಾಸ ಬಿಡುವ ವೇಳೆಯನ್ನು (ಇಫ್ತಾರ್) ಉಪವಾಸದ ಪ್ರಮುಖ ಸಮಯ

.ಈಫ್ತಿಯಾರ್ ವೇಳೆಯಲ್ಲಿ ಎಲ್ಲರೂ ಒಂದೇ ಕಡೆ ಸೇರಿ ಮಸೀದಿಗಳಲ್ಲಿ, ಮನೆಗಳಲ್ಲಿ ಖರ್ಜೂರ, ಬಾಳೆ ಹಣ್ಣು, ಕಲ್ಲಂಗಡಿ ಸೇರಿದಂತೆ ಎಲ್ಲಾ ಬಗೆಯ ಹಣ್ಣು- ಹಂಪಲು ತಂದು ಒಂದೆಡೆ ಒಟ್ಟಾಗಿ ಸೇವಿಸುವ ಮೂಲಕ ಉಪವಾಸವನ್ನುಈಫ್ತಿಯಾರ್ ಕೂಟವಾಗಿ ಮುಗಿಸುತ್ತಾರೆ. ಆ ಮೂಲಕ ಬಡವ, ಶ್ರೀಮಂತ, ಎಂಬ ಬೇಧ-ಬಾವ ಮೆರೆಯುವ ಮೂಲಕ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳುತ್ತಾರೆ.
ಪ್ರತಿಯೊಂದು ದಿನ ಮುಸ್ಲಿಮರು , ಈ ಹಬ್ಬದ ಸಮಯದಲ್ಲಿ ಆಲ್ಲಾನನ್ನು ಹೆಚ್ಚಾಗಿ ಸ್ಮರಿಸುವ ಮೂಲಕ, ಉಪವಾಸದ ಮೂಲಕ ರಂಜಾನ್ ಆಚರಿಸುತ್ತಾರೆ. ಪ್ರಾರ್ಥನೆ, ಕುರಾನ್ ಜಪ ಮತ್ತು ಧಾನ ಧರ್ಮದಲ್ಲಿ ತೊಡಗುವುದು ಮಾತ್ರವಲ್ಲದೇ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ತಮ್ಮ ಒಡನಾಟವನ್ನು ಬೆಳಸಿಕೊಳ್ಳುತ್ತಾರೆ.
ರಂಜಾನ್ ನ ಕೊನೆಯ 10 ದಿನಗಳ ಕಾಲ ಪ್ರವಾದಿ ಮೊಹಮ್ಮದ್ ಕುರಾನ್‌ನ ಮೂಲಕ ನೆನಪಿಸಿಕೊಳ್ಳುವುದು. ಮತ್ತು ಈ ಅವಧಿಯಲ್ಲಿ ಧಾರ್ಮಿಕ ಙ್ಞಾನವನ್ನು ಹೆಚ್ಚಿಸಿಕೊಳ್ಳುತ್ತಾರೆ ಹಾಗೂ ಪ್ರೌಢಾವ್ಯಸ್ಧೆ ತಲುಪಿದ ಎಲ್ಲಾ ಮುಸ್ಲಿಮರು ಉಪವಾಸ ಮಾಡುವುದು ಕಡ್ಡಾಯ. ಆದಾಗಿಯೂ ಅನಾರೋಗ್ಯ ಪೀಡಿತರು, ಗರ್ಭಿಣಿಯರು ಹಾಗೂ ವೃದ್ಧರು ಈ ಸಮಯದಲ್ಲಿ ಉಪವಾಸ ಮಾಡಲು ಸಾದ್ಯವಾಗುವುದಿಲ್ಲ.
ಮುಸ್ಲಿಮರ ಎಲ್ಲಾ ಹಬ್ಬದಂತೆ ರಂಜಾನ್ ಹಬ್ಬವು ಹೆಚ್ಚು ವಿಶೇಷತೆಯಿಂದ , ಕಠಿಣ ಉಪವಾಸ, ಶ್ರದ್ದೆ, ಭಕ್ತಿಯಿಂದ ಅಲ್ಲಾನನ್ನು ನೆನೆಯುತ್ತಾರೆ. ಈ ರೀತಿ ಜಗತ್ತಿನಾದ್ಯಂತ ಮುಸ್ಲಿಮರು ರಂಜಾನ್ ಹಬ್ಬವನ್ನು ಸಡಗರದಿಂದ ಸಮುದಾಯದೊಂದಿಗೆ ಆಚರಿಸುತ್ತಾರೆ.
ಸಂಗೀತ. ಎಸ್
ಆಲ್ಮಾ ನ್ಯೂಸ್ ವಿದ್ಯಾರ್ಥಿನಿ