ಟೊಮ್ಯಾಟೊ ದರ ದಿಢೀರ್ ಇಳಿಕೆ ಇಂದ ರೈತರು ಕಂಗಾಲು..

ಚಾಮರಾಜನಗರ: ಜಿಲ್ಲೆಯಲ್ಲಿ ರೈತರು ಟೊಮೊಟೊ ಕೃಷಿ ಮಾಡಿ ಹೆಚ್ಚಿನ ಇಳುವರಿ ಬಂದಿದೆ ಎಂದು ಖುಷಿಪಟ್ಟಿದ್ದರು. ಆದರೆ ಮಾರುಕಟ್ಟೆಗೆ ಟೊಮೊಟೊ ಮಾರಾಟಕ್ಕೆ ತೆಗೆದುಕೊಂಡು ಹೋದಾಗ ರೈತರು ಶಾಕ್ ಆಗಿದ್ದಾರೆ, ಹಲ್ಲು ಇದ್ದವನಿಗೆ ಕಡಲೆ ಇಲ್ಲ ಕಡಲೆ ಇದ್ದವನಿಗೆ ಹಲ್ಲು ಇಲ್ಲ ಎಂಬತ್ತೆ, ಹೆಚ್ಚಿನ ಇಳುವರಿ ಬಂದಾಗ ಟೊಮೊಟೊ ಬೆಳೆಗೆ ಸರಿಯಾದ ಬೆಲೆ ಸಿಗದೆ ರೈತರು ಕಣ್ಣೀರಿಡುವಂತಾಗಿದೆ ಮಂಗಳವಾರ ನಡೆಯುವ ಸಂತ್ತೆಮರಳ್ಳಿ ಸಂತೆಯಲ್ಲಿ ರೈತರು ಬೆಳೆದ ಟೊಮೊಟೊ ಬೆಳೆಗೆ 1. ಕೆ.ಜಿ ಟೊಮೊಟೊ 5 ರುಪಾಯಿ ಮತ್ತು 20 ರಿಂದ 25 ಕೆ.ಜಿ ಟ್ರೈಗೆ 100 ರಿಂದ 125 ರುಪಾಯಿಗೆ ಮಾರಾಟ ಆಗುತ್ತಿದೆ ಇದೆ ರೀತಿ ಮುಂದುವರೆದರೆ ರೈತರು ಬದುಕುವುದು ಕಷ್ಟ ಎಂದು ರೈತ ರಾಜೇಶ ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.

ಇನ್ನು ತಮಿಳುನಾಡು ಮತ್ತು ಅನ್ಯರಾಜ್ಯಗಳಿಗೆ ಸಾಗಣಿಕೆ ಆಗುತಿದ್ದ ಟೊಮೊಟೊ ಬೆಳೆ ಈ ಬಾರಿ ಯಾವ ಕಡೆಯೂ ಹೊಗದೆ ಇರುವುದೆ ಬೆಲೆ ಇಳಿಕೆಗೆ ಕಾರಣ ಎಂದು ಹೇಳಲಾಗುತ್ತಿದೆ, ಈ ಎಲ್ಲದರ ನಡುವೆ ಬೆಳೆಗೆ ರೋಗ ಬಂದಿರುವುದರಿಂದ ರೈತರು ಕ್ವಿಂಟಾಲ್‌ಗಟ್ಟಲೆ ಟೊಮೊಟೊ ಬೆಳೆಯನ್ನು ಬೀದಿ ಪಾಲು ಮಾಡುತ್ತಿದ್ದಾರೆ.

ಅಷ್ಟೆ ಅಲ್ಲದೆ ಬೆಳೆಗೆ ಹೂಜಿ ನೊಣದ ಹಾವಳಿಯೂ ಶುರುವಾಗಿದೆ ಈ ನೊಣದ ಕಾಟಕ್ಕೆ ಬೆಳೆಯ ಗುಣಮಟ್ಟ ಕಡೆಮೆ ಆಗುತ್ತಿದೆ 1 ಟನ್ ಬೆಳೆಗೆ 50 ರಿಂದ 100 ಕೆ.ಜಿ ಹಣ್ಣು ಕೊಳೆಯುತ್ತಿವೆ, ಬರುವ ಲಾಭಕಿಂತ ಬಂಡವಾಳವೆ ಜಾಸ್ತಿ ಆಗುತ್ತಿದೆ ಎಂದು ವ್ಯಾಪಾರಿ ಸೈಯದ್ ಹೇಳುತ್ತಾರೆ.
ಮಹದೇವ ದಿಗ್ಗಾಂವಕರ್
ಆಲ್ಮಾ ಮೀಡಿಯಾ ಸ್ಕೂಲ್ ವಿಧ್ಯಾರ್ಥಿ