ಆಡಿದ ಮೊದಲ ಟಿ20 ಪಂದ್ಯದಲ್ಲಿ, 3 ವಿಕೆಟ್ ಸಾಧನೆ

ಪ್ರತಿ ವರ್ಷದ ipl ಸೀಸನ್ ನಲ್ಲಿ ಆಡುವ ಕೆಲವು ಯುವ ಆಟಗಾರರು ಏನಾದರೂ ಒಂದು ಮೈಲಿಗಲ್ಲನ್ನು ಸ್ಧಾಪಿಸಿ, ಅವರ ಫ್ರಾಂಚೈಸಿ ತಂಡಕ್ಕೆ ಅವರದೇ ಆದ ಆಟ( ಬೌಲಿಂಗ್,ಬ್ಯಾಟಿಂಗ್, ಫೀಲ್ಟಿಂಗ್)ದಿಂದ ತಂಡದ ಗೆಲುವಿನಲ್ಲಿ ಮುಖ್ಯಪಾತ್ರ ವಹಿಸುತ್ತಾರೆ. ಅದೇರೀತಿ ಕೇರಳದ, ಮಲಪ್ಪುರಂನ ವಿಘ್ನೇಶ್ ಈಗ ಆ ಸಾಲಿಗೆ ಸೇರುತ್ತಾರೆ. ಅವರ ತಂದೆ ಸುನಿಲ್ ಕುಮಾರ್ ಆಟೋರಿಕ್ಷಾ ಚಾಲಕ, ತಾಯಿ ಕೆ.ಪಿ. ಬಿಂದು ಗೃಹಿಣಿ. ಕುಟುಂಬದಲ್ಲಿ ಆರ್ಥಿಕ ಸಂಕಷ್ಟ ಇದ್ದರು, ಕುಟುಂಬವು ಮಗನ ಕ್ರಿಕೆಟ್ ಪ್ರಯಾಣಕ್ಕೆ ಹೆಗಲಾಗಿದ್ದರು.

ಸ್ಧಳಾಂತರಗೊಂಡು, ಆರಂಭದಲ್ಲಿ ಕಾಲೇಜು ಮಟ್ಟದ ಕ್ರಿಕೆಟ್‌ನಲ್ಲಿ ಮಧ್ಯಮ ವೇಗಿಯಾಗಿ ಪ್ರಾರಂಭಿಸಿದ್ದರು. ನಂತರ ತಮ್ಮ ವೃತ್ತಿಜೀವನದಲ್ಲಿ ಸ್ಪಿನ್ ಬೌಲಿಂಗ್‌ನತ್ತ ಮುಖಮಾಡಿದರು.. ಕೇರಳದ ಕ್ರಿಕೆಟ್ ಲೀಗ್‌ನ ಉದ್ಘಾಟನಾ ಆವೃತ್ತಿಯಲ್ಲಿ ಅಲೆಪ್ಪಿ ರಿಪಲ್ಸ್ ತಂಡದ ಪರ ಆಡಿದ ಅವರು ಉತ್ತಮ ಪ್ರರ್ದಶನ ನೀಡಿದ್ದರು. ತಮಿಳುನಾಡು ಪ್ರೀಮಿಯರ್ ಲೀಗ್ ನಲ್ಲೂ ಸಹ ಭಾಗವಹಿಸಿದ್ದರು. ಕೇರಳದ ಕ್ರಿಕೆಟ್ ಲೀಗ್ ನಲ್ಲಿ ಆಡುತ್ತಿದ್ದಾಗ ಮುಂಬೈ ಇಂಡಿಯನ್ಸ್ ತಂಡ ವಿಘ್ನೇಶ್ ಅವರ ಸಾಮರ್ಥ್ಯವನ್ನು ಗುರುತಿಸಿತು. ಅವರನ್ನು 30 ಲಕ್ಷರೂ.ಗಳಿಗೆ ಖರೀಧಿಸಿತು. ಆರಂಭದಲ್ಲಿ ಫ್ರಾಂಚೈಸಿಯು ಅವರನ್ನು ತನ್ನ ಖರ್ಚಿನಲ್ಲಿ ದಕ್ಷಿಣ ಆಫ್ರಿಕಾಕ್ಕೆ ಎಸ್ ಎ 20 ರ ಮೂರನೇ ಸೀಸನ್‌ಗೆ ಕಳುಹಿಸಿತ್ತು. ಟಿ20 ಕ್ರಿಕೆಟ್ ನ ಅತ್ಯುತ್ತಮ ಸ್ಪಿನ್ನರ್ ಗಳಲ್ಲಿ ಒಬ್ಬರಾದ ರಶೀದ್ ಖಾನ್ ಅವರೊಂದಿಗೆ ತರಬೇತಿ ಪಡೆಯಲು ಅವಕಾಶವನ್ನು ಪಡೆದರು.

ಮುಂಬೈನ ಪರ ಐಪಿಎಲ್ ನಲ್ಲಿ ಪಾದಾರ್ಪಣೆ ಪಂದ್ಯವಾಡಿದ ಎಡಗೈ ಸ್ಪಿನ್ನರ್ ವಿಘ್ನೇಶ್, ರೋಹಿತ್ ಶರ್ಮ ಬದಲಿಗೆ ಇಂಪ್ಯಾಕ್ವ್ ಪ್ಲೇಯರ್ ಆಗಿ ಕಣಕ್ಕಿಳಿದರು. ಕೇರಳದ ಎಡಗೈ ಸ್ಪಿನ್ನರ್ ವಿಘ್ನೇಶ್ ಪುತ್ತೂರ್ ಮೊದಲ ಪಂದ್ಯವಾದರೂ ಯಾರು ಊಹಿಸದ ರೀತಿ ಆಟವನ್ನು ಪ್ರದರ್ಶಿಸಿ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪ್ರಮುಖ ಮೂರು ವಿಕೆಟ್ ಗಳನ್ನು ಉರುಳಿಸಿದ ಅವರು, ಸಿಎಸ್‌ಕೆ ಪರ ಉತ್ತಮವಾಗಿ ಆಡುತ್ತಿದ್ದ ರುತುರಾಜ್ ಗಾಯಕ್ವಾಡ್(53 ರನ್) ಅವರನ್ನು ಔಟ್ ಮಾಡಿದರು, ಬಳಿಕ ಆಲ್ ರೌಂಡರ್ ಗಳಾದ ಶಿವಂ ದುಬೆ(9), ದೀಪಕ್ ಹೂಡಾ(3) ಅವರ ವಿಕೆಟ್ ಪಡೆಯುವ ಮೂಲಕ ತನ್ನ ಸಾಮರ್ಥ್ಯ ಸಾಬೀತುಪಡಿಸಿದರು. ಪಂದ್ಯವನ್ನೇನೋ ಚೆನ್ನೈ ಸೂಪರ್ ಕಿಂಗ್ಸ್ ಗೆದ್ದಿತು. ಆದರೆ ಈ ಯುವಕ ಕ್ರಿಕೆಟ್ ಜಗತ್ತಿನ ಗಮನ ಸೆಳೆದರು
ಮೊದಲ ಪಂದ್ಯದಲ್ಲೇ ಮೂರು ವಿಕೆಟ್ ಗಳನ್ನು ಪಡೆದ ರೀತಿಗೆ ಕ್ರಿಕೆಟ್ ದಿಗ್ಗಜರೆ ಆಶ್ಚರ್ಯ ಚಕಿತರಾದರು.
ವಿಘ್ನೇಶ್ ಪುತ್ತೂರ್ ನನ್ನು ತುಂಬಾ ಹತ್ತಿರದಿಂದ ಗಮನಿಸಿದ ಮುಂಬೈಪರ ಆಯ್ಕೆಗಾರ ಮಹೇಲ ಜಯವರ್ಧನೆ ಈತನ ಮುಂಬೈ ಇಂಡಿಯನ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ದೊಡ್ಡ ಮಟ್ಟದ ಬೌಲಿಂಗ್ ಏನೂ ಮಾಡಿರುವುದಿಲ್ಲವಾದರು ಈತನ ಸಾಮರ್ಥ್ಯ ಮುಂಬೈ ಪ್ರಧಾನ ಕೋಚ್ ಮಹೇಲ ಜಯವರ್ಧನೆ ಅವರಿಗೆ ಇಷ್ಟವಾಗುತ್ತದೆ. ಹಾಗಾಗಿ ಅವರು ವಿಘ್ನೇಶ್ ಅವರ ಮೇಲೆ ಭರವಸೆ ಇಟ್ಟು ತಂಡದ ಆಡಳಿತ ಮಂಡಳಿಗೆ ಈತನನ್ನು ಶಿಫಾರಸು ಮಾಡುತ್ತಾರೆ. ಇದೀಗ ಆ ನಂಬಿಕೆಯನ್ನು ವಿಘ್ನೇಶ್ ಉಳಿಸಿಕೊಂಡಿದ್ದಾರೆ.

ಬೆನ್ನು ತಟ್ಟಿದ ಧೋನಿ; ಉತ್ತಮವಾಗಿ ಬೌಲಿಂಗ್ ಮಾಡಿದ ವಿಘ್ನೇಶ್ ಅವರ ಬಳಿ ಸ್ವತಃ ಧೋನಿಯೇ ಹೋಗಿ ಭುಜ ತಟ್ಟಿ ಶ್ಲಾಘಿಸಿದರು. ಧೋನಿಯಿಂದ ಮೆಚ್ಚುಗೆ ಪಡೆದ ವಿಘ್ನೇಶ್ ಸಂತಸಗೊಂಡರು. ಈ ಸಂದರ್ಭದಲ್ಲಿ ಕಾಮೆಂಟರಿ ಬಾಕ್ಸ್‌ನಲ್ಲಿದ್ದ ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ರಿಕೂಡ ಆ ಕ್ಷಣವನ್ನು ಹೊಗಳಿದರು.
ಸಂಗೀತ.ಎಸ್
ಆಲ್ಮಾ ನ್ಯೂಸ್ ವಿದ್ಯಾರ್ಥಿನಿ